ಜಿಲ್ಲೆ

ಜೀವನಕ್ಕೆ ಕ್ರೀಡೆ ಸ್ಫೂರ್ತಿ:ಸಂಗಣ್ಣ ಕರಡಿ

ಕೊಪ್ಪಳ:ಕ್ರೀಡೆಯಿಂದ ಜೀವನ ಸ್ಫೂರ್ತಿ ಹೆಚ್ಚಲಿದೆ. ಪರಸ್ಪರ ಹೊಂದಾಣಿಕೆ ಭಾವನೆ ಬೆಳೆಯುತ್ತದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.


ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ಯೋಜನೆಯಡಿ ನಿರ್ಮಾಣವಾದ ಒಳ ಕ್ರೀಡಾಂಗಣವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.


ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು. ಇದಿರಂದ ದದೈಹಿಕ, ಮಾನಸಿಕ ದೃಢತೆ ಹೊಂದಲು ಸಾಧ್ಯ. ಸವಾಲು ಎದುರಿಸುವ ಧೈರ್ಯ ಲಭಿಸುತ್ತದೆ. ದೇಶದ ಕ್ರೀಡಾ ಇತಿಹಾಸಲದಲ್ಲಿ ಮೇಜರ್ ಧ್ಯಾನ್‌ಚಂದ್, ನೀರಜ್ ಚೋಪ್ರಾ, ಸಚಿನ್ ತೆಂಡುಲ್ಕರ್, ಸಾನಿಮಾ ಮಿರ್ಜಾ, ಪಿ.ವಿ.ಸಿಂಧು ಸೇರಿ ಅನೇಕರು ತಮ್ಮದೇ ಇತಿಹಾಸ ಬರೆದಿದ್ದಾರೆ. ಅವರ ಬಗ್ಗೆ ಯುವ ಕ್ರೀಡಾಪಟುಗಳು ಅರಿಯಬೇಕು ಎಂದರು.


ಜಿಲ್ಲಾ ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ಯೋಜನೆಯಡಿ ಅನೇಕ ಸೌಲಭ್ಯ ಕಲ್ಪಿಸಲಾಗಿದೆ. ರನ್ನಿಂಗ್ ಟ್ರಾಕ್, ಹಾಕಿ ಅಂಕಣ, ಕಾಂಪೌಂಡ್ ಸೇರಿ ಇನ್ನು ಅನೇಕ ಸೌಲಭ್ಯಗಳ ಅವಶ್ಯಕತೆ ಇದೆ. ರಾಜ್ಯ ಸರ್ಕಾರ ಅನುದಾನ ನೀಡಿ ಕಲ್ಪಿಸಬೇಕಿದೆ. ಈಜುಕೊಳವಿದ್ದು, ನಿರ್ವಹಣೆ ಇಲ್ಲ. ಅಧಿಕಾರಿಗಳು ಇತ್ತ ಗಮನ ಹರಿಸಲಿ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ಮಿಸಬೇಕೆಂದು ಒತ್ತಾಯಿಸಿದರು.


ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠಲ್ ಜಾಬಗೌಡರ ಮಾತನಾಡಿದರು. ಕಾರ್ಯಕ್ರಮಕ್ಕು ಮುನ್ನ ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ ಷಟಲ್ ಬ್ಯಾಡ್ಮಿಂಟನ್ ಆಡಿದರು. ಬಳಿಕ ಸಂಸ್, ಶಾಸಕರು ವಾಲಿಬಾಲ್ ಆಡಿ ಗಮನ ಸೆಳೆದರು. ಕ್ರೀಡಾಪಟುಗಳಾದ ಶಿಲ್ಪಾ ದೇವೇಂದ್ರಪ್ಪ, ಪ್ರದೀಪ ಹನುಮಂತಪ್ಪ, ಮಲ್ಲಿಕಾರ್ಜುನ ಬಸವರಾಜ, ತರಬೇತುದಾರರಾದ ಕಮಲ್ ಸಿಂಗ್,ದೀಪಾ ಅವರನ್ನು ಸನ್ಮಾನಿಸಲಾಯಿತು.


ಡಿಸಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಡಿಸಿ ಸಾವಿತ್ರಿ ಕಡಿ, ಡಿವೈಎಸ್ಪಿ ಶರಣಪ್ಪ ಸುಬೇದಾರ, ಪ್ರಮುಖರಾದ ರಾಘವೇಂದ್ರ ಪಾನಘಂಟಿ, ವಿ.ಎಂ.ಭೂಸನೂರಮಠ, ಡಾ.ಕುಮಾರ, ಸುನಿಲ್ ಹೆಸರೂರು, ಗಣೇಶ ಹೊರತಟ್ನಾಳ್ ಇತರರಿದ್ದರು.