ಜಿಲ್ಲೆ

ಜೀವನ ತತ್ವ ಅಳವಡಿಸಿಕೊಳ್ಳಿ

ಕಂಪ್ಲಿ: ಮಹಾತ್ಮ ಗಾಂಧಿ ಅವರ ಅಹಿಂಸಾ ತತ್ವ ಆದರ್ಶವಾಗಿದೆ ಎಂದು ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖ ಹೇಳಿದರು.

ತಹಸಿಲ್ ಕಚೇರಿ ಸಭಾಂಗಣದಲ್ಲಿ ಗುರುವಾರ ಮಹಾತ್ಮ ಗಾಂಧಿ ಜಯಂತ್ಯುತ್ಸವದಲ್ಲಿ ಮಾತನಾಡಿ, ಗಾಂಧಿ ತತ್ವಗಳ ಅನುಸರಣೆಯಿಂದ ಸರಳ ಮತ್ತು ಅರ್ಥಪೂರ್ಣ ಜೀವನ ಸಾಗಿಸಲು ಸಾಧ್ಯವಿದೆ. ಯುವಜನತೆ ಗಾಂಧಿ ಅವರ ಜೀವನ ಸಂದೇಶವನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಎಚ್.ವಿ.ಮಂಜುನಾಥ, ಎಫ್‌ಡಿಎ ಮಾಲತೇಶ ದೇಶಪಾಂಡೆ ವಿಎಒಗಳಾದ ಲಕ್ಷ್ಮಣ ನಾಯ್ಕ, ಮನೋಜ್, ರಾಘವೇಂದ್ರ, ಜಿಲಾನ್, ತಳವಾರ ಸತ್ಯಪ್ಪ ಇತರರಿದ್ದರು.