ಜಿಲ್ಲೆ

ಜೀವನ ಗೆಲ್ಲುವುದು ಮುಖ್ಯ

ಬಾಗಲಕೋಟೆ: ಪ್ರತಿಯೊಬ್ಬರು ಜೀವನದಲ್ಲಿ ಹೋರಾಟ ನಡೆಸುತ್ತಲೆ ಬದುಕು ಕಟ್ಟಿಕೊಳ್ಳಬೇಕು. ವಿಶೇಷಚೇತನರು ಅಗಾದ ಶಕ್ತಿಯುಳ್ಳವರು, ಅವರು ಕ್ರಿಡಾಕೂಟದಲ್ಲಿ ಗೆಲ್ಲುವುದರ ಜೊತೆಗೆ ಜೀವನವನ್ನು ಗೆಲ್ಲಬೇಕಾಗಿದೆ. ನಿಮ್ಮ ಜೀವನ ಪಯಣದಲ್ಲಿ ಯಶಸ್ಸು ಸಿಗಲಿ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಮೈದಾನದಲ್ಲಿ ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟ ಬೆಂಗಳೂರು ಹಾಗೂ ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದ ಸಹಯೋಗದಲ್ಲಿ ಶುಕ್ರವಾರದಿಂದ ಆರಂಭಗೊಂಡ ಕಿವುಡರÀ ರಾಜ್ಯಮಟ್ಟದ ೧೪ನೇ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಅಂಗವಿಕಲರ ಅಗಾದವಾದ ಶಕ್ತಿ ಇದ್ದು, ಅವರಲ್ಲಿರುವ ಕ್ರೀಡಾಪ್ರತಿಭೆಗೆ ಅನಾವರಣಕ್ಕೆ ಈ ಕ್ರೀಡಾಕೂಟ ಸಹಕಾರಿಯಾಗಲಿದ್ದು, ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ರಾಷ್ಟ್ರೀಯಮಟ್ಟದಲ್ಲಿಯೂ ಸಾಧನೆ ಮುಂದುವರೆಯಲಿ, ದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ಬಂದ ನಂತರ ಕ್ರೀಡಾಕ್ಷೇತ್ರಕ್ಕೆ ಅಪಾರವಾದ ಯೋಜನೆಗಳ ಮೂಲಕ ಶಕ್ತಿ ತುಂಬಿದ್ದರಿಂದ, ಇಂದು ಭಾರತದ ಕ್ರೀಡಾಪಟುಗಳು ಜಗತ್ತಿನಾದ್ಯಂತ ದಾಖಲೆಯ ಸಾಧನೆ ಮಾಡುತ್ತಿದ್ದಾರೆ. ವಿಶೇಷ ಚೇತನರು ಕ್ರೀಡೆಯಲ್ಲಿ ಕ್ರೀಡಾಕೂಟದಲ್ಲಿ ಗೆಲ್ಲುವುದರ ಮೂಲಕ ತಮ್ಮ ಬದುಕಿನ ಜೀವನವನ್ನು ಗೆಲ್ಲಲ್ಲಿ ಆ ಭಗವಂತ ಅವರಿಗೆ ಶಕ್ತಿ ತುಂಬಲಿ ಎಂದರು.

ಬಾಗಲಕೋಟೆ ಇನ್ನರ ವ್ಹಿಲ್ ಕ್ಲಬ್ ಅಧ್ಯಕ್ಷೆ ಶ್ರೀಲತಾ ಹೆರಂಜಲ್ ಮಾತನಾಡಿ, ಜ್ಞಾನ ಹಾಗೂ ಮಾನಸಿಕ ಬೆಳವಣಿಗೆ ಜೊತೆಗೆ ಶಾರೀರಿಕ ಬೆಳವಣಿಗೆ ಮುಖ್ಯವಾಗಿದೆ ಎಂದರು.

ನವದೆಹಲಿ ಅಖಿಲ ಭಾರತ ಕಿವುಡರ ಕ್ರೀಡಾ ಒಕ್ಕೂಟದ ಅಧ್ಯಕ್ಷ ವಿ.ಕುಮಾರ ಸನ್ನೆ ಮೂಲಕ ಮಾತನಾಡಿ, ನವೆಂಬರ ಅಥವಾ ಡಿಸೆಂಬರ ನಲ್ಲಿ ನಡೆಯುವ ಓಲಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಹೆಚ್ಚನ ಸಂಖ್ಯೆಯಲ್ಲಿ ಭಾಗವಹಿಸಿರಿ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ರಾಘವೇಂದ್ರ ಜಾಧವ ಮಾತನಾಡಿ, ೧೪ನೇ ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿದರು. ವೇದಿಕೆ ಮೇಲೆ ಕಾಳಿದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಸ್.ಪಾಟೀಲ, ಕ್ರೀಡಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಜಿ.ಎಸ್.ನವೀನಕುಮಾರ, ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಸುನೀಲ ಕಂದಕೂರ ಇದ್ದರು.