ಜಿಲ್ಲೆ

ಜೀವಕ್ಕೆ ಕಂಟಕವಾದ ರಾಜ್ಯ ಹೆದ್ದಾರಿ

ದೋರನಹಳ್ಳಿ: ಜಿಲ್ಲೆಯ ಮೂರು ತಾಲೂಕಿಗೆ ಸಂರ್ಪಕ ಕಲ್ಪಿಸುವ ಶಹಾಪುರ-ಯಾದಗಿರಿ ರಾಜ್ಯ ಹೆದ್ದಾರಿ ಇದಾಗಿದೆ. ಈ ಹೆದ್ದಾರಿ ಮೂಲಕ ನಿತ್ಯ ಅಂತರಜಿಲಾ, ಅಂತಾರಾಜ್ಯ ವಾಹನ ಸಂಚಾರ ಹೆಚ್ಚಾಗಿದ್ದರಿಂದ ಇಡೀ ರಸ್ತೆ ಸಂಪೂರ್ಣ ಹಾಳಾಗಿದೆ. ಆದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ರಸ್ತೆಗೂ ನಮಗೂ ಯಾವುದೇ ಸಂಬAಧವಿಲ್ಲದAತೆ ವರ್ತಿಸುತ್ತಿದ್ದಾರೆ.

ಯಾದಗಿರಿ ಜಿಲ್ಲೆಯಾಗಿ ಬರೋಬರಿ ೧೪ ವರ್ಷ ಕಳೆದರೂ ಅಭಿವೃದ್ಧಿ ಮಾತ್ರ ಕನ್ನಡಿಯೊಳಗಿನ ಗಂಟೆಯಾಗಿಯೇ ಉಳಿದಿದೆ. ಇದಕ್ಕೆ ಉತ್ತಮವಾದ ನಿದರ್ಶನ ಎಂದರೆ ಈ ರಾಜ್ಯ ಹೆದ್ದಾರಿ. ಇದು ೩೮ ಕಿಮೀ ಉದ್ದ ವಿದ್ದು, ಹೆದ್ದಾರಿ ಯಾದಗಿರಿ ಜಿಲ್ಲಾ ಕೇಂದ್ರದಿAದ ಖಾನಾಪುರ ಗ್ರಾಮದಲ್ಲಿ ಮಾರ್ಗ ಬದಲಾವಣೆಗೊಂಡು ಒಂದೇಡೆ ಸುರಪುರ, ಹುಣಸಗಿ ತಾಲೂಕು ಮತ್ತೊಂದೆಡೆ ಶಹಾಪುರ ತಾಲೂಕು ಕೇಂದ್ರ ಸೇರಿ ರಾಜ್ಯದ ಹಲವು ಜಿಲ್ಲಾ ಕೇಂದ್ರ ಮತ್ತು ಅಂತಾರಾಜ್ಯ ಸಂರ್ಪಕ ಕಲ್ಪಿಸುತ್ತದೆ. ಮಹಾರಾಷ್ಟç, ಗೋವಾ, ತೆಲಂಗಾಣ, ಆಂಧ್ರಪ್ರದೇಶಕ್ಕೆ ಸಂರ್ಪಕ ಕಲ್ಪಿಸುತ್ತದೆ. ಆದರೆ ಕಳೆದ ಮೂರು ನಾಲ್ಕು ವರ್ಷದಿಂದ ತೀರಾ ಹದಗೆಟ್ಟು ಹೋದ ಈ ರಸ್ತೆ ದುರಸ್ತಿ ಮಾಡದಿದ್ದರಿಂದ ವಾಹನ ಸವಾರರು ಸಂಚಾರ ಮಾಡಲು ಭಯಪಡುವಂತಾಗಿದೆ.


ಯಾದಗಿರಿ ರೈಲ್ವೆ ಸೇತುವೆಯಿಂದ ಆರಂಭವಾಗುವ ದೊಡ್ಡ ದೊಡ್ಡ ತಗ್ಗು ಗುಂಡಿಗಳು ಇತ್ತ ಶಹಾಪುರ ತಾಲೂಕು ಕೇಂದ್ರದವರೆಗೂ ಹೆಜ್ಜೆ ಹೆಜ್ಜೆಗೂ ಕಾಣ ಸಿಗುತ್ತವೆ. ಈ ಹೆದ್ದಾರಿಯಲ್ಲಿ ಬಿದ್ದ ಗುಂಡಿಗಳಿAದ ಪ್ರತಿನಿತ್ಯ ನಾಲ್ಕೆÊದು ಬೈಕ್ ಸವಾರರು ಗುಂಡಿಗಳಿAದ ತಪ್ಪಿಸಿಕೊಳ್ಳಲು ಹೋಗಿ ಗಂಭೀರ ಗಾಯಗೊಂಡ ಘಟನೆ ನಡೆವೆ.

ಇದಕ್ಕೆ ತಾಜಾ ನಿದರ್ಶನ ಎಂಬAತೆ ಸೋಮವಾರ ದೋರನಹಳ್ಳಿ ಗ್ರಾಮದ ಮೂಲಕ ಹುಂಡೆಕಲ್ ಗ್ರಾಮಕ್ಕೆ ರಸಗೊಬ್ಬರ ಸಾಗಿಸುತ್ತಿದ್ದ ರೈತರೊಬ್ಬರ ಟ್ರಾÈಕ್ಟರ್ ದೋರನಹಳ್ಳಿ ಬಳಿ ದೊಡ್ಡ ಗುಂಡಿಯಲ್ಲಿ ಸಿಲುಕಿಕೊಂಡು ಪೇಚಾಡುವಂತಾಗಿದೆ. ನಂತರ ಜೆಸಿಬಿ ಸಹಾಯದ ಮೂಲಕ ಟ್ರಾÈಕ್ಟರ್ ಹೊರ ತೆಗೆದ ಘಟನೆ ನಡೆದಿದೆ.

ಹೀಗಾಗಿ ಕೂಡಲೇ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಈ ರಾಜ್ಯ ಹೆದ್ದಾರಿ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರು ಒತ್ತಾಯವಾಗಿದೆ.