ಪವಿತ್ರಾ ಹೆಸರಲ್ಲಿ ನೀಡಿದ ಮರಣ ಪ್ರಮಾಣಪತ್ರ. 
ಜಿಲ್ಲೆ

ಜೀವಂತ ಇದ್ದವಳ ಹೆಸರಲ್ಲಿ ಡೆತ್ ಸರ್ಟಿಫಿಕೇಟ್

ಆಳಂದ: ಸರ್ಕಾರಿ ಕಚೇರಿಗಳಲ್ಲಿ ಎಂಥದ್ದಾದರೂ ಎಡವಟ್ಟು ನಡೆಯಬಹುದು ಎಂಬುದಕ್ಕೆ ಜೀವಂತ ಇದ್ದವಳ ಹೆಸರಲ್ಲಿ ಮರಣ ಪ್ರಮಾಣಪತ್ರ ನೀಡಿz್ದೆÃ ಸಾಕ್ಷಿ. ಇಂಥ ಎಡವಟ್ಟು ನಡೆದಿದ್ದು ನಿಂಬರ್ಗಾ ಉಪ ತಹಸೀಲ್ದಾರ್ ಕಚೇರಿಯಲ್ಲಿ.

ಬೊಮ್ಮನಳ್ಳಿ ಗ್ರಾಮದ ಪರಮೇಶ್ವರ ಜಿರೋಳ್ಳಿ(ತಳವಾರ) ಮಗಳು ಪುಷ್ಪಾವತಿ ಎಂಬುವಳು ೨೦೨೪ರ ನ.೨೧ರಂದು ನೀರು ತರಲು ಹೋಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಳು. ಆಕೆ ಮರಣ ಪ್ರಮಾಣಪತ್ರಕ್ಕಾಗಿ ೨೦೨೫ರ ಫೆ.೨೮ರಂದು ಅರ್ಜಿ ಸಲ್ಲಿಸಿದ್ದರು.

ಅರ್ಜಿ ಸ್ವೀಕರಿಸಿದ ಗ್ರಾಮಾಧಿಕಾರಿ ಊರಿಗೆ ವಾಲಿಕರ ಮತ್ತು ನಾಲ್ವರು ಪಂಚರ ಸಮ್ಮುಖ ಮೃತಳ ಮನೆಗೆ ಭೇಟಿ ನೀಡಿ ಪಂಚನಾಮೆ ಮಾಡಿ ವರದಿ ಸಲ್ಲಿಸಿ ಮರಣ ಪ್ರಮಾಣಪತ್ರ ವಿತರಿಸಬೇಕಿತ್ತು. ಆದರೆ ಬೊಮ್ಮನಳ್ಳಿಗೆ ಹೋಗದೆ ಪಂಚನಾಮೆ ವರದಿ ಸಿದ್ಧಪಡಿಸಿ ಕಚೇರಿಗೆ ಬಂದ ಗ್ರಾಮಸ್ಥರಿಂದ ಸಹಿ ಮಾಡಿಸಿಕೊಂಡು ಪುಷ್ಪಾವತಿ ಬದಲು ಆಕೆ ಅಕ್ಕ ಪವಿತ್ರಾ ಹೆಸರಿನಲ್ಲಿ ಮರಣ ಪ್ರಮಾಣಪತ್ರವನ್ನು ಕಳೆದ ಮಾ.೧೩ರಂದು ಕುಟುಂಬದವರಿಗೆ ನೀಡಿ ಎಡವಟ್ಟು ಮಾಡಿದ್ದು ಈಗ ಬೆಳಕಿಗೆ ಬಂದಿದೆ.

ಈ ವಿಷಯ ತಿಳಿಯುತ್ತಲೇ ಮೃತಳ ತಂದೆ ಪರಮೇಶ್ವರ ಜಿರೋಳ್ಳಿ ಮರಣ ಪ್ರಮಾಣಪತ್ರ ಸರಿಪಡಿಸಿಕೊಡಲು ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಮಗಳ ಸಾವಿನ ದುಃಖದಲ್ಲಿ ಪುಷ್ಪಾ ಪರಮೇಶ್ವರ ಜಿರೋಳ್ಳಿ ಬದಲು ಜೀವಂತವಿರುವ ಇನ್ನೊರ್ವ ಮಗಳು ಪವಿತ್ರಾ ಹೆಸರಲ್ಲಿ ಮರಣ ಪ್ರಮಾಣಪತ್ರ ನೀಡುವಂತೆ ಅರ್ಜಿ ಸಲ್ಲಿಸಿz್ದÉÃನೆ. ಹೀಗಾಗಿ ಸರಿಪಡಿಸಿ ಪುಷ್ಪಾವತಿ ಹೆಸರಿನಲ್ಲಿ ನೀಡಬೇಕೆಂದು ಕೋರಿದ್ದಾರೆ. ತಂದೆಯಿAದ ಅರ್ಜಿ ಸಲ್ಲಿಸುವಾಗ ತಪ್ಪಾಗಿದ್ದರೂ ಪರಿಶೀಲಿಸಿ ನೀಡಬೇಕಾದ ಸಂಬAಧಿತ ಅಧಿಕಾರಿ ಸ್ಥಳ ಪಂಚನಾಮೆ ಮಾಡದೆ ಜೀವಂತವಿರುವ ಇನ್ನೊಬ್ಬಳ ಹೆಸರಲ್ಲಿ ಡೆತ್ ಸರ್ಟಿಫಿಕೇಟ್ ನೀಡಿದ್ದು ಹೇಗೆ ಎಂಬ ಪ್ರಶ್ನೆಗೆ ಸಂಬAಧಿತರೇ ಉತ್ತರಿಸಬೇಕಾಗಿದೆ.