ಕಲಬುರಗಿ: ಗುತ್ತಿಗೆದಾರ ಸಚಿನ ಪಂಚಾಳ ಆತ್ಮಹತ್ಯೆ, ಡೆತ್‌ನೋಟ್‌ನಲ್ಲಿ ನನ್ನನ್ನು ಸೇರಿ ಪ್ರತಿಷ್ಠಿತ ಕೊಲೆಗೆ ಸಂಚು, ಸಚಿವರ ಬೆಂಬಲದ ಬಗ್ಗೆ ಪ್ರಶ್ನಿಸಿದಕ್ಕೆ ವ್ಯಕ್ತಿಯೊಬ್ಬ ಎಂಬಾತ ಅವಾಚ್ಯವಾಗಿ ನಿಂದಿಸಿ, ಜೀವ ಭಯ ಹಾಕಿದ ವಿಡಿಯೋ ಕುರಿತು ದೂರು ನೀಡಿ ನಾಲ್ಕು ದಿನವಾದರೂ ಜೇವರ್ಗಿ ಪೊಲೀಸರು ಎಫ್‌ಐಆರ್ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಅನುಮತಿಗೆ ಕಾಯುತ್ತಿದ್ದಾರೆ ಎಂದು ಶ್ರೀ ರಾಮಸೇನೆ ರಾಷ್ಟಿçÃಯ ಗೌರವಾಧ್ಯಕ್ಷ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆರೋಪ ಮಾಡಿದರು.
ಅವಾಚ್ಯ ಶಬ್ಧ ಪ್ರಯೋಗಿಸಿ ನಿಂದಿಸುವುದು ಯಾವ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ?, ಇದೇನಾ ಪ್ರಜಾಪ್ರಭುತ್ವ ಉಳಿಸೋದು?. ನನ್ನ ಹೇಳಿಕೆ ತಪ್ಪಿದ್ದರೆ ಸಂವಿಧಾನದAತೆ ಕೇಸ್ ಮಾಡಿ, ಬಂಧಿಸಿ, ಕೋರ್ಟ್ನಲ್ಲಿ ವಾದಿಸಿ. ಬೈಗುಳ, ನಿಂದನೆ ಸಂವಿಧಾನದ ಯಾವ ಪರಿಚ್ಛೇದದಲ್ಲಿದೆ ತಿಳಿಸಲಿ. ನಮ್ಮ ಕಲಬುರಗಿಯಲ್ಲಿ ಪ್ರತ್ಯೇಕ ಸಂವಿಧಾನ ಇದೇನಾ ಸಚಿವರು ತಿಳಿಸಲಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.
ಬೀದರ್ ಜಿಲ್ಲೆಯ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಹಿನ್ನೆಲೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಅದಕ್ಕೆ ಬೆಂಬಲಿಸುವ ಸಂಘಟನೆಗಳು ಹೋರಾಡಿದ್ದವು. ಹೋರಾಟ ನಮ್ಮ ಸಂವಿಧಾನ ಬದ್ಧ ಹಕ್ಕು. ಹೋರಾಟದ ನಂತರ ಮೆಸೇಜ್ ಮೂಲಕ ಸಚಿವ ಖರ್ಗೆ ಬೆಂಬಲಿಗರು ನಿಂದಿಸುತ್ತಿದ್ದಾರೆ. ಸಚಿವರ ಬೆಂಬಲಿಗ ವಾಡಿ ಮೂಲದ ಡಾ.ಮಹೇಶ ತೆಲಗಿ ಎಂಬಾತ ವಿಡಿಯೋ ಮೂಲಕ ಅವಾಚ್ಯ ನಿಂದಿಸಿದ್ದಾರೆ ಎಂದು ಆರೋಪಿಸಿದರು.
ನಿಂದನೆ ಕುರಿತು ಜೇವರ್ಗಿ ಠಾಣೆಯಲ್ಲಿ ಜ.೫ರಂದು ದೂರು ನೀಡಿದರು ಎïಐಆರ್ ದಾಖಲಿಸಿಲ್ಲ. ಕೇಳಿದರೆ ಈ ಕುರಿತು ಕಾನೂನು ಅಭಿಪ್ರಾಯ ಪಡೆಯಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಬಿಎನ್‌ಎಸ್ ಅನ್ವಯ ೨೪ ಗಂಟೆ ಒಳಗೆ ಎïಐಆರ್ ದಾಖಲಾಗಬೇಕು. ಜಿಲ್ಲೆಯಲ್ಲಿ ಸಂಘ ಪರಿವಾರ, ಬಿಜೆಪಿ ನಾಯಕರು, ಹಿಂದು ಕಾರ್ಯಕರ್ತರಿಗೆ ಈ ಕಾನೂನು, ಸಂವಿಧಾನ ಅನ್ವಯ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿ.ವೈ.ವಿಜಯೇಂದ್ರ ಕುರಿತು ಮಾತಾಡುವಾಗ ಖರ್ಗೆ ಅಪ್ಪಾಜಿ ಬಗ್ಗೆ ಮಾತನಾಡಿ ಎನ್ನುತ್ತಾರೆ. ಹಿಂದೆ ಇದೇ ಸಚಿವ ಖರ್ಗೆ ಕಾರ್ಯಕ್ರಮವೊಂದರಲ್ಲಿ ಬಿ.ಎಸ್.ಯಡಿಯೂರಪ್ಪನವರ ಕಾಲಿಗೆ ಬಿದ್ದಿದ್ದರು. ಇದೀಗ ರಾಜೀನಾಮೆ ಕೇಳಿದ ತಕ್ಷಣ ಪೂಜ್ಯ ಸ್ಥಾನ ಹೋಯಿತೇ? ಎಂದು ಪ್ರಶ್ನಿಸಿದರು.
ಮಾಜಿ ಸಂಸದ ಡಾ.ಉಮೇಶ ಜಾಧವ್, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದೆÃವಾಡಗಿ, ಡಾ.ಸುಧಾ ಹಾಲಕಾಯಿ ಇತರರಿದ್ದರು.