ತುಮಕೂರು: ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಜೀನಿ ಕಂಪನಿ ಮಾಲೀಕ ದಿಲೀಪ್ ಕುಮಾರ್ ಅವರ ವಿರುದ್ಧ ಕಳ್ಳಂಬೆಳ್ಳ ಠಾಣೆಯಲ್ಲಿ ಗುರುವಾರ ಎ್ಐಆರ್ ದಾಖಲಾಗಿದೆ. ಕಂಪನಿಯಲ್ಲಿ 10 ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ಶಿರಾ ತಾಲೂಕಿನ ಯರಗುಂಟೆ ಗ್ರಾಮದ ಮಹಿಳೆಯೋರ್ವರು ತನಗೆ ಕಂಪನಿ ಮಾಲೀಕ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಎ್ಐಆರ್ ದಾಖಲಿಸಿದ್ದಾರೆ.
6 ತಿಂಗಳಿನಿಂದ ಕಿರುಕುಳ: ಕಳೆದ 6 ತಿಂಗಳಿನಿಂದ ಕೆಲಸದ ವೇಳೆ ಕಂಪನಿ ಮಾಲೀಕ ದಿಲೀಪ್ ಕುಮಾರ್ ತನ್ನನ್ನು ಮೈ&ಕೈ ಮುಟ್ಟಿ ಮಾತನಾಡಿಸುವುದಲ್ಲದೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ರೀತಿ ನಡವಳಿಕೆ ಸರಿಯಲ್ಲ ಎಂದು ಖಂಡಿಸಿರುವುದಾಗಿ ದೂರಿರುವ ಮಹಿಳೆ, ಏ.19ರಂದು ಯಾರೂ ಇಲ್ಲದ ಶೆಡ್ನಲ್ಲಿ ನನ್ನನ್ನು ಎಳೆದಾಡಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದು, ಸಹಕರಿಸದಿದ್ದರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆಯೊಡ್ಡಿದ್ದಾಗಿ ಗಂಭೀರ ಆರೋಪ ಎಸಗಿದ್ದಾರೆ.
ನನ್ನ ತೇಜೋವಧೆಗೆ ಈ ರೀತಿ ಮಹಿಳೆಯ ಕೈಯಲ್ಲಿ ದೂರು ಕೊಡಿಸಲಾಗಿದೆ. ರಾಜಕೀಯ ಪಿತೂರಿ ಹಿನ್ನೆಲೆಯಲ್ಲಿ ಇಂತಹ ಆರೋಪ ಮಾಡಲಾಗಿದೆ. ಜೀನಿ ಕಂಪನಿಯಲ್ಲಿ 86 ಸಿಸಿ ಟಿವಿಗಳಿದ್ದು 15 ದಿನದ ಡಿವಿಆರ್ ಕೊಡುತ್ತೇನೆ. ನನ್ನ ವಿರುದ್ಧದ ಆರೋಪ ಸಾಬೀತುಪಡಿಸಲಿ. ನಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತೇನೆಂದು ಇಂತಹ ಸುಳ್ಳು ಆರೋಪ ಹೊರಿಸಿದ್ದಾರೆ. ಹಾಗಾಗಿ, ರಾಜಕೀಯ ಕ್ಷೇತ್ರಕ್ಕೆ ನಾನು ಕಾಲಿಡುವುದು ನಿಶ್ಚಿತ.
| ದಿಲೀಪ್ ಕುಮಾರ್ಜೀನಿ ಕಂಪನಿ ಮಾಲೀಕ