ಎಚ್.ಡಿ.ಕೋಟೆಯಲ್ಲಿ ಆಯೋಜಿಸಿದ್ದ ಜೀತ ಪದ್ಧತಿ ಅರಿವು ಕಾರ್ಯಾಗಾರವನ್ನು ತಹಸೀಲ್ದಾರ್ ರತ್ನಾಂಬಿಕಾ ಉದ್ಘಾಟಿಸಿದರು. ಬಸವರಾಜು, ರಾಮಸ್ವಾಮಿ, ರಂಗಸ್ವಾಮಿ, ಸುರೇಶ್, ಆಶಾ, ಶಶಿಕಲಾ, ರಂಗಸ್ವಾಮಿ, ಚಂದ್ರಶೇಖರ, ಮಹದೇವು, ಶಿವಣ್ಣ ಇದ್ದರು.  
ಜಿಲ್ಲೆ

ಜೀತ ಪದ್ಧತಿ ನಿರ್ಮೂಲನೆಗೆ ಸಹಕಾರ ನೀಡಿ

Mysuru Rural

ಎಚ್.ಡಿ.ಕೋಟೆ: ಸಂವಿಧಾನದ ಆಶಯದಂತೆ ಜೀತ ಪದ್ಧತಿ ನಿರ್ಮೂಲನೆ ಆಗಬೇಕು ಎಂಬುದು ನಮ್ಮೆಲ್ಲರ ಆಶಯ ಎಂದು ಜೀವಿಕ ಸಂಘಟನೆ ಜಿಲ್ಲಾಧ್ಯಕ್ಷ ಬಸವರಾಜು ತಿಳಿಸಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಜೀವಿಕ ಸಂಸ್ಥೆ ಸಹಯೋಗದಲ್ಲಿ ಗುರುವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜೀತ ಪದ್ಧತಿ ಅರಿವು ಕಾರ್ಯಾಗಾರದಲ್ಲಿ ಮಾತನಾಡಿ, ಭೂಮಾಲೀಕರ ಜಮೀನುಗಳಲ್ಲಿ ಗಾಣದ ಎತ್ತಿನಂತೆ ದುಡಿಯುತ್ತಿರುವ ಜೀತದಾಳುಗಳನ್ನು ಸರ್ಕಾರ ಮುಖ್ಯವಾಹಿನಿಗೆ ತರಬೇಕು ಎಂದು ಮನವಿ ಮಾಡಿದರು.

ತಾಲೂಕು ಆಡಳಿತ ವತಿಯಿಂದ ಜೀತದಾಳುಗಳಿಗೆ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ. ಜೀತಪದ್ಧತಿಯನ್ನು ನಿರ್ಮೂಲನೆ ಮಾಡುವಲ್ಲಿ ಮೈಸೂರು ಜಿಲ್ಲೆ ದಾಪುಗಾಲು ಹಾಕಿದೆ ಎಂದು ಅಭಿಪ್ರಾಯಪಟ್ಟರು.

ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಮಾತನಾಡಿ, ಜೀತ ಪದ್ಧತಿ ನಿರ್ಮೂಲನೆ ಮಾಡಲು ಕಾಯ್ದೆ ರೂಪಿಸಲಾಗಿದ್ದರೂ ಇನ್ನೂ ಜೀತ ಪದ್ಧತಿ ಜೀವಂತವಾಗಿದೆ. ಇದನ್ನು ಬುಡ ಸಮೇತ ಕಿತ್ತೊಗೆಯಲು ಎಲ್ಲರೂ ಸಹಕಾರ ನೀಡಬೇಕು ಎಂದರು.

ತಹಸೀಲ್ದಾರ್ ರತ್ನಾಂಬಿಕಾ, ಸಮಾಜ ಕಲ್ಯಾಣ ಅಧಿಕಾರಿ ರಾಮಸ್ವಾಮಿ, ಕೃಷಿ ಅಧಿಕಾರಿ ರಂಗಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಆಶಾ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶಶಿಕಲಾ, ಟಿ ಪಿಒ ರಂಗಸ್ವಾಮಿ, ಜೀವಿಕ ಸಂಸ್ಥೆಯ ಚಂದ್ರಶೇಖರ, ಮಹದೇವು, ಶಿವಣ್ಣ ಇದ್ದರು.