ಹಾವೇರಿ: ಜಿಲ್ಲೆಯಲ್ಲಿ ಕರೊನಾ ನಾಗಾಲೋಟ ಮುಂದುವರಿದಿದ್ದು, ಮಂಗಳವಾರ 40 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. 21 ಜನರು ಗುಣವಾಗಿ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 827 ಜನರಿಗೆ ಸೋಂಕು ಖಚಿತವಾಗಿದ್ದು, 501 ಜನರು ಸೋಂಕಿನಿಂದ ಗುಣವಾಗಿದ್ದಾರೆ. 24 ಜನರು ಮೃತಪಟ್ಟಿದ್ದಾರೆ. 302 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.
ಮಂಗಳವಾರ ಸವಣೂರ ತಾಲೂಕಿನ 9, ಹಾನಗಲ್ಲ ತಾಲೂಕಿನ 6, ಶಿಗ್ಗಾಂವಿ ತಾಲೂಕಿನ 3, ಹಾವೇರಿ ತಾಲೂಕಿನ 2, ಹಿರೇಕೆರೂರ ತಾಲೂಕಿನ ಒಬ್ಬರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಯಾರೂ ಮೃತಪಟ್ಟಿಲ್ಲ.
ಸವಣೂರ ತಾಲೂಕು: ಸವಣೂರ ತಾಲೂಕಿನ ಹತ್ತಿಮತ್ತೂರನ 19 ವರ್ಷದ ಯುವತಿ, 66 ವರ್ಷದ ವೃದ್ಧೆ, 24 ವರ್ಷದ ಯುವಕ, 40 ವರ್ಷದ ಮಹಿಳೆ, ಸವಣೂರ ಲಕ್ಸರ ಬಜಾರ್ ಓಣಿಯ 12 ವರ್ಷದ ಬಾಲಕ, ಹಾವಣಗಿ ಪ್ಲಾಟ್ನ 57 ವರ್ಷದ ಪುರುಷ, 49 ವರ್ಷದ ಮಹಿಳೆ, 52 ವರ್ಷದ ಮಹಿಳೆ, 23 ವರ್ಷದ ಯುವತಿ, ಸವಣೂರ ಕಸಬಾ ಓಣಿಯ 25 ವರ್ಷದ ಯುವಕ, ಹರವಿ ಓಣಿಯ 25 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.
ಹಿರೇಕೆರೂರ ತಾಲೂಕು: ಹಿರೇಕೆರೂರ ಪೊಲೀಸ್ ವಸತಿ ಗೃಹದಲ್ಲಿದ್ದ 40, 45 ವರ್ಷದ ಪುರುಷ ಕಾನ್ಸ್ಟೇಬಲ್ಗಳು, ಬಸವೇಶ್ವರ ನಗರದ 35 ವರ್ಷದ ಮಹಿಳೆ, ಆಜಾದ ನಗರದ 50 ವರ್ಷದ ಮಹಿಳೆ, ರಟ್ಟಿಹಳ್ಳಿ ಟಿಪ್ಪುನಗರದ 30 ವರ್ಷದ ಪುರುಷ, ಕಚವಿ ಗ್ರಾಮದ 57 ವರ್ಷದ ಪುರುಷ, ಮುಚಡಿ ಗ್ರಾಮದ 30 ವರ್ಷದ ಪುರುಷ, ಚಪ್ಪರದಹಳ್ಳಿ ಗ್ರಾಮದ 45 ವರ್ಷದ ಮಹಿಳೆ, ಯತ್ತಿನಹಳ್ಳಿಯ 34 ವರ್ಷದ ಪುರುಷ ಹೋಂಗಾರ್ಡ್, ಅಬಲೂರ ಗ್ರಾಮದ 34 ವರ್ಷದ ಪುರುಷ, ಹಂಸಬಾವಿಯ 38 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಶಿಗ್ಗಾಂವಿ ತಾಲೂಕು: ಶಿಗ್ಗಾಂವಿ ತಾಲೂಕು ಬಂಕಾಪುರ ಶಾ ಬಜಾರ ಓಣಿಯ 24 ವರ್ಷದ ಇಬ್ಬರು ಯುವಕರು, 36 ವರ್ಷದ ಮಹಿಳೆ, ಅಂಬೇಡ್ಕರ್ ನಗರದ 30 ವರ್ಷದ ಪುರುಷ, 47 ವರ್ಷದ ಪುರುಷ, ಖಾಸಗಿ ಆಸ್ಪತ್ರೆ ಶುಶ್ರೂಷಕ 40 ವರ್ಷದ ಪುರುಷ, ಸುಂಕದಕೇರಿಯ ಡಿ ಗ್ರುಪ್ ಸಿಬ್ಬಂದಿ 34 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಹಾವೇರಿ ತಾಲೂಕು: ಹಾವೇರಿ ಬಸವೇಶ್ವರ ನಗರದ 73 ವರ್ಷದ ವೃದ್ಧ, 43 ವರ್ಷದ ಪುರುಷ, ತಾಲೂಕಿನ ಹೊಸರಿತ್ತಿಯ ಚಕ್ಕಿನಗರದ 7 ವರ್ಷದ ಬಾಲಕಿ, ಕುರುಬರ ಓಣಿಯ 46 ವರ್ಷದ ಪುರುಷ, ಅಗಡಿಯ 52 ವರ್ಷದ ಪುರುಷ, ಗಣಜೂರಿನ 25 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ.
ರಾಣೆಬೆನ್ನೂರ ತಾಲೂಕು: ರಾಣೆಬೆನ್ನೂರ ತಾಲೂಕು ಆಲದಕಟ್ಟಿಯ 27 ವರ್ಷದ ಮಹಿಳೆ, ರಾಣೆಬೆನ್ನೂರ ಕಂಚಗಾರ ಓಣಿಯ 23 ವರ್ಷದ ಯುವತಿ, ಕೋಟೆ ಓಣಿಯ 45 ವರ್ಷದ ಮಹಿಳೆ ಹಾಗೂ ಹಾನಗಲ್ಲ ಪಟ್ಟಣದ ಐಶ್ವರ್ಯ ನಗರದ 13 ವರ್ಷದ ಇಬ್ಬರು ಬಾಲಕರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೇನ್ಮೆಂಟ್ ಜೋನ್ ಹಾಗೂ ಬಫರ್ ಜೋನ್ ಆಗಿ ಘೊಷಿಸಲಾಗಿದೆ.