ಬಾಗಲಕೋಟೆ: ಜಿಲ್ಲೆಯಾದ್ಯಂತ ವಿವಿಧ ರಸಗೊಬ್ಬರಗಳ ದಾಸ್ತಾನು ಸಮರ್ಪಕವಾಗಿದ್ದು, ರೈತರು ಅನವಶ್ಯಕವಾಗಿ ಯೂರಿಯಾ ರಸಗೊಬ್ಬರವನ್ನು ಬಳಸದೆ ಇನ್ನಿತರೆ ಪೊಷಕಾಂಶಗಳನ್ನು ಒದಗಿಸುವ ಡಿ.ಎ.ಪಿ, ಕಾಂಪ್ಲೇಕ್ಸ ಅಥವಾ ಮಿಕ್ಚರ್ ರಸಗೊಬ್ಬರಗಳನ್ನು ಬಳಸಿ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದ್ದಾರೆ.
ಈ ಮಧ್ಯೆ ವಿವಿಧ ರಸಗೊಬ್ಬರಗಳ ಉತ್ಪಾದಕರು, ಸರಬರಾಜುದಾರರು ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರ ಮೂಲಕ ಯೂರಿಯಾ, ಡಿ.ಎ.ಪಿ, ಎಂಓ.ಪಿ ಮತ್ತು ಕಾಂಪ್ಲಕ್ಸ ಗೊಬ್ಬರಗಳ ಜೊತೆಗೆ ಅವಶ್ಯವಲ್ಲದ ಇತರೆ ರಸಗೊಬ್ಬರ, ಪದಾರ್ಥಗಳನ್ನು ಲಿಂಕ್ ಮಾಡಿ ಮಾರಾಟ ಮಾಡುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ. ಕಾನೂನು ಬಾಹಿರ ವ್ಯಾಪಾರ ಕಂಡುಬಂದಲ್ಲಿ ರೈತರು ಕೃಷಿ ಇಲಾಖೆಯ ಗಮನಕ್ಕೆ ತರಬೇಕು. ಈ ಬಗ್ಗೆ ದೂರು ಸಲ್ಲಿಕೆಯಾದಲ್ಲಿ ರಸಗೊಬ್ಬರ ಕಂಪನಿಗಳು ಮತ್ತು ಮಾರಾಟಗಾರರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಕ್ರಮ ಜರುಗಲಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಚಿಲ್ಲರೆ ಮಾರಾಟಗಾರರಲ್ಲಿ ಇಂದಿನ ತಾಲೂಕುವಾರು, ರಸಗೊಬ್ಬರವಾರು ದಾಸ್ತಾನು ಈ ಕೆಳಗಿನಂತೆ ಇದ್ದು, ಬಿತ್ತನೆ ಬೀಜ, ರಸಗೊಬ್ಬರ ಮತ್ತು ಪೀಡೆನಾಶಕ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಕೃಷಿ ಇಲಾಖೆಯ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ಬಾದಾಮಿ ತಾಲೂಕಿನಲ್ಲಿ ಯೂರಿಯಾ 507 ಕ್ವಿಂಟಲ್, ಡಿಎಪಿ 280 ಕ್ವಿಂಟಲ್, ಎಂಓಪಿ 163 ಕ್ವಿಂಟಲ್, ಕಾಂಪ್ಲೇಕ್ಸ 1249 ಕ್ವಿಂಟಲ್, ಎಸ್‍ಎಸ್‍ಪಿ 68 ಕ್ವಿಂಟಲ್ ದಾಸ್ತಾನು ಇರುತ್ತದೆ.
ಬಾಗಲಕೋಟೆ ತಾಲೂಕಿನಲ್ಲಿ ಯೂರಿಯಾ 978 ಕ್ವಿಂಟಲ್, ಡಿಎಪಿ 352 ಕ್ವಿಂಟಲ್, ಎಂಓಪಿ 165 ಕ್ವಿಂಟಲ್, ಕಾಂಪ್ಲೇಕ್ಸ 1219 ಕ್ವಿಂಟಲ್, ಎಸ್‍ಎಸ್‍ಪಿ 208 ಕ್ವಿಂಟಲ್ ದಾಸ್ತಾನು, ಬೀಳಗಿ ತಾಲೂಕಿನಲ್ಲಿ ಯೂರಿಯಾ 1052 ಕ್ವಿಂಟಲ್, ಡಿಎಪಿ 126 ಕ್ವಿಂಟಲ್, ಎಂಓಪಿ 219 ಕ್ವಿಂಟಲ್, ಕಾಂಪ್ಲೇಕ್ಸ 1425 ಕ್ವಿಂಟಲ್, ಎಸ್‍ಎಸ್‍ಪಿ 115 ಕ್ವಿಂಟಲ್ ದಾಸ್ತಾನು ಇದ್ದರೆ, ಹುನಗುಂದ ಯೂರಿಯಾ 518 ಕ್ವಿಂಟಲ್, ಡಿಎಪಿ 252 ಕ್ವಿಂಟಲ್, ಎಂಓಪಿ 28 ಕ್ವಿಂಟಲ್, ಕಾಂಪ್ಲೇಕ್ಸ 953 ಕ್ವಿಂಟಲ್, ಎಸ್‍ಎಸ್‍ಪಿ 15 ಕ್ವಿಂಟಲ್ ದಾಸ್ತಾನು ಇರುತ್ತದೆ.
ಜಮಖಂಡಿ ತಾಲೂಕಿನಲ್ಲಿ ಯೂರಿಯಾ 3430 ಕ್ವಿಂಟಲ್, ಡಿಎಪಿ 321 ಕ್ವಿಂಟಲ್, ಎಂಓಪಿ 411 ಕ್ವಿಂಟಲ್, ಕಾಂಪ್ಲೇಕ್ಸ 3164 ಕ್ವಿಂಟಲ್, ಎಸ್‍ಎಸ್‍ಪಿ 366 ಕ್ವಿಂಟಲ್, ಮುಧೋಳ ತಾಲೂಕಿನಲ್ಲಿ ತಾಲೂಕಿನಲ್ಲಿ ಯೂರಿಯಾ 2392 ಕ್ವಿಂಟಲ್, ಡಿಎಪಿ 290 ಕ್ವಿಂಟಲ್, ಎಂಓಪಿ 496 ಕ್ವಿಂಟಲ್, ಕಾಂಪ್ಲೇಕ್ಸ 3164 ಕ್ವಿಂಟಲ್, ಎಸ್‍ಎಸ್‍ಪಿ 366 ಕ್ವಿಂಟಲ್ ದಾಸ್ತಾನು ಲಭ್ಯವಿರುತ್ತದೆ. ರಸಗೊಬ್ಬರ ಮಾರಾಟಗಾರರು ರಸಗೊಬ್ಬರ ಪಡೆದ ಎಲ್ಲ ರೈತರು ಕಡ್ಡಾಯವಾಗಿ ರಸೀದಿ ನೀಡಬೇಕು.
ಯೂರಿಯಾ ರಸಗೊಬ್ಬರ ಜೊತೆಗೆ ರೈತರಿಗೆ ಬೇಡವಾದ ಇತರೆ ರಸಗೊಬ್ಬರಗಳನ್ನು ಲಿಂಕ್ ಮಾಡಿ ಮಾರಾಟ ಮಾಡಕೂಡದು. ರಸಗೊಬ್ಬರಗಳನ್ನು ನಿಗದಿಪಡಿಸಿದ ಗರಿಷ್ಟ ಮಾರಾಟ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ. ರಸಗೊಬ್ಬರ ಮಾರಾಟ ಮಳಿಗೆಯ ಮುಂದೆ ಎದ್ದು ಕಾಣುವಂತೆ ವಿವಿಧ ರಸಗೊಬ್ಬರಗಳ ದಾಸ್ತಾನು ಮಾಹಿತಿ ಮತ್ತು ಗರಿಷ್ಟ ಮಾರಾಟ ದರವನ್ನು ಪ್ರದರ್ಶಿಸಬೇಕು. ರಸಗೊಬ್ಬರಗಳನ್ನು ಹಿಡಿದಿಟ್ಟುಕೊಂಡು ಕೃತಕ ಅಭಾವ ಸೃಷ್ಟಿಸಕೂಡದು ಹಾಗೂ ಸರಿಯಾಗಿ ದಾಖಲೆಗಳನ್ನು ನಿರ್ವಹಿಸಿ ರಸಗೊಬ್ಬರ ವಹಿವಾಟು ನಡೆಸಲು ಸೂಚಿಸುತ್ತಾ, ಕಾನೂನು ಉಲ್ಲಂಘಿಸಿ ವಹಿವಾಟು ನಡೆಸುವವರ ಮೇಲೆ ಸೂಕ್ತ ಕ್ರಮ ಜರೂಗಿಸಲಾಗುವುದು ಎಂದು ಚೇತನಾ ಪಾಟೀಲ ತಿಳಿಸಿದ್ದಾರೆ.