ಹಾಸನ: ಹವಾಮಾನ ಇಲಾಖೆಯ ವರದಿಯಂತೆ ಜಿಲ್ಲೆಯಲ್ಲಿ ಮುಂದಿನ 3 ದಿನಗಳವರೆಗೆ ಯೆಲ್ಲೋ ಎಚ್ಚರಿಕೆ ಇರುವುದರಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಂಟು ತಾಲ್ಲೂಕಿನ ತಹಸಿಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ಇಲಾಖೆ, ಸ್ಥಳಿಯ ಸಂಸ್ಥಯ ಅಧಿಕಾರಿಗಳು ಪ್ರತಿ ನಿತ್ಯ ಸಮನ್ವಯ ಸಾಧಿಸಿಕೊಂಡು ಸಭೆ ನಡೆಸಿ ಕೇಂದ್ರ ಸ್ಥಾನದಲ್ಲಿದು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರಭಾರಿ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಜಿಟಿ ಜಿಟಿ ಮಳೆ ಜಿಲ್ಲೆ ಪ್ರವೇಶ ಮಾಡಿದ್ದು ಮಂಕಾಗಿದ್ದ ಕೃಷಿ ಚಟುವಟಿಕೆ ಬಿರುಸು ಪಡೆದುಕೊಳ್ಳುವ ಮೂಲಕ ಅನ್ನದಾತನ ಮುಖದಲ್ಲಿ ಮಂದಹಾಸ ಮೂಡಿದೆ.ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ತುಂತುರು ಮಳೆ ಮುಂದುವರಿದಿದೆ.
ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕಿನಲ್ಲಿ ಕೂಡ ಮುಂಗಾರು ಆರಂಭವಾಗಿದೆ, ಕಳೆದ ತಿಂಗಳು ಬಿದ್ದಿದ್ದ ಮಳೆಗೆ ರೈತರು ಬಿತ್ತನೆ ಕಾರ್ಯ ಮಾಡಿದ್ದರು. ಮಳೆ ಇಲ್ಲದೆ ಬೆಳೆಗಳೆಲ್ಲವೂ ಕೂಡ ಬಾಡಿ ಹೋಗುತ್ತಿತ್ತು.ವರುಣನ ಕೃಪೆಯಿಂದ ಇದೀಗ ಮತ್ತೆ ಚಿಗುರು ಚಿಗುರುಡೆಯುತ್ತಿದ್ದು ಅರ್ಧಕ್ಕೆ ನಿಂತಿದ್ದ ಕೃಷಿ ಕೆಲಸಗಳು ಈಗ ಮತ್ತೆ ಪ್ರಾರಂಭವಾಗುತ್ತಿದೆ.
ಜಿಲ್ಲೆಯ ಬಹುತೇಕ ಕಡೆ ಬುಧವಾರ ಬಿಟ್ಟು ಬಿಟ್ಟು ಬೀಳುತ್ತಿದ್ದ ಮಳೆ,ಗುರುವಾರ ತುಸು ಜೋರಾಗಿದೆ. ಸಕಲೇಶಪುದಲ್ಲಿ ಹೆಚ್ಚಿನ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಬೇಲೂರು, ಅಕಲಗೂಡು, ಆಲೂರು ತಾಲ್ಲೂಕುಗಳಲ್ಲಿ ಸಾಧಾಣ ಮಳೆ ಬೀಳುತ್ತಿದ್ದೆರೆ, ಹೊಳೆನಸೀಪುರ, ಚನ್ನಾಯಪಟ್ಟಣ, ಅರಸೀಕೆರೆ ತಾಲೂಕುಗಳಲ್ಲಿ ಮೋಡಕವಿದ ವಾತಾವಣ ಇದೆ ತುಂತುರು ಮಳಯಾಗಿದೆ. ಶಾಲಾ ಕಾಲೇಜುಗಳಿಗೆ ತೆಳಲು ವಿದ್ಯಾರ್ಥಿಗಳ ಪದಾಡುವಂತಾಗಿದೆ. ತಿಂಗಳುಗಳಿಂದ ಮಳೆ ಇಲ್ಲದೆ ಬೆಳೆ ಕಳೆದುಕೊಂರೋ ಅನ್ನದಾತ ಈಗಿನ ಮಳೆಯಿಂದ ಸಂತೋಷಗೊಂಡಿದ್ದಾರೆ.
ಈ ಬಾರಿ ಮಳೆ ಅಷ್ಟೇನು ಬಿರುಸಾಗಿದಲ್ಲೇ ಇದ್ದೂ,ಹದವಾದ ಮಳೆಯಾಗಿರುವುದರಿಂದ ಬೆಳೆ ಒಣಗುವ ಭೀತಿಯಲ್ಲಿದ್ದ ರೈತರು ತುಸು ಸಮಾಧಾನಗೊಂಡಿದ್ದಾರೆ ಮಳೆ ಹೀಗೆಯೇ ಮುಂದುವರಿಯಲಿ, ಆ ಮೂಲಕ ಬೆಳೆ ಉಳಿದು, ಜಲಾಶಯ, ಕೆರೆಕಟ್ಟೆಗಳು ಭರ್ತಿ ಯಾಗಲಿ ಎಂದು ಪ್ರತಿಯೊಬ್ಬೂ ಆಶಯವಾಗಿದೆ.
ಹೆತ್ತೂರು,ಯಸಳೂರಿನಲ್ಲಿ ಉತ್ತಮ ಮಳೆ.
ಬುಧುವಾರ ಸಕಲೇಶಪುರ ತಾಲೂಕಿನ ಯಸಳೂರಿನಲ್ಲಿ 33.5 ಮಿ.ಮಿ ಹೆತ್ತೂರಿನಲ್ಲಿ 32.3, ಹಾನಬಾಳು 25.1, ಅರೇಹಳ್ಳಿ22.3, ಕೊಣನೂರು17.3 ಹೋಬಳಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಶಾಲೆ ಕಾಲೇಜುಗಳಿಗೆ ವಿದ್ಯಾರ್ಥಿಗಳು ಮನೆಗೆ ತೆರಳಲು ಕೊಡೆ ಮೊರೆ ಹೋಗುವಂತಾಗಿತ್ತು. ವ್ಯಾಪಾರ, ವಹಿವಾಟು ನಡೆಸಲು ಬಂದಿದ್ದ ಜನರು ಅಂಗಡಿ ಮುಗ್ಗಟ್ಟು ಬಳಿ ಆಶ್ರಯ ಪಡೆಯುತ್ತಿದ್ದ ದೃಶ್ಯ ಕಂಡು ಬಂದಿತು.ಜಿಲ್ಲೆಯಲ್ಲಿ ಬೀದಿ ವ್ಯಾಪಾರಿಗಳು ಕಿರಿ ಕಿರಿ ಅನುಭವಿಸಬೇಕಾಗಿದೆ.
ಆಂಭದ ಮಳೆಯಲ್ಲಿ ಹಾನಿ ಆತಂಕ:
ಮುಂಗಾರು ಮಳೆ ಎಂಟ್ರಿಕೊಟ್ಟಿದ್ದು ಮಲೆನಾಡು ಭಾಗದಲ್ಲಿ ಸುರಿದ ಮೊದಲ ಮಳೆಗೆ ಅಪಾರ ಹಾನಿಯುಂಟಾಗಿದೆ. ಭಾರೀ ಮಳೆ, ಬಿರುಗಾಳಿಗೆ ಮನೆಯ ಮೇಲೆ ಮರ ಬಿದ್ದಿದ್ದರೆ, ಮನೆಯ ತಡೆ ಗೋಡೆ ಕುಸಿತವಾಗಿದೆ. ಮರ, ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.
ಸಕಲೇಶಪುರ ತಾಲ್ಲೂಕಿನ ಹಲವೆಡೆ ಬುಧವಾರ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಮಳೆ, ಬಿರುಗಾಳಿಗೆ ತಾಲ್ಲೂಕಿನ, ಹಾನಬಾಳು ಗ್ರಾಮದ ಪರಮೇಶ್-ಕಮಲ ಎಂಬ ವೃದ್ಧ ದಂಪತಿಯ ಮನೆಯ ಮೇಲೆ ಮರ ಮುರಿದು ಬಿದ್ದಿದ್ದು, ವಾಸದ ಮನೆ ಸಂಪೂರ್ಣ ಜಖಂಗೊಂಡಿದ್ದು ಮನೆಯಲ್ಲಿದ್ದ ವೃದ್ದ ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೆತ್ತೂರು ಹೋಬಳಿ, ಬನ್ನಹಳ್ಳಿ ಗ್ರಾಮದ ಸೋಮಶೇಖರ್ ಎಂಬುವವರ ಮನೆಯ ಮುಂದಿನ ತಡೆ ಗೋಡೆ ಕುಸಿತಗೊಂಡಿದ್ದು ಯಾವುದೇ ಪ್ರಾಣಹಾನಿಯಾಗಿಲ್ಲ. ಇದೇ ತಾಲ್ಲೂಕಿನ, ಹುಲ್ಲಹಳ್ಳಿ ಸಮೀಪ ವಿದ್ಯುತ್ ತಂತಿಯ ಮೇಲೆ ಬಿದ್ದ ರಸ್ತೆ ಬದಿಯ ಮರ ಮುರಿದು ಬಿದ್ದಿದ್ದು, ಹುಲ್ಲಹಳ್ಳಿ ಸುತ್ತಮುತ್ತ ವಿದ್ಯುತ್ ಪೂರೈಕೆ ಸ್ಥಗಿತಗೊಂಡು, ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ವಿದ್ಯುತ್ ಇಲಾಖೆ ಸಿಬ್ಬಂದಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.