ಜಿಲ್ಲೆ

ಜಿಲ್ಲೆಯಲ್ಲಿ ಮತ್ತಿಬ್ಬರಿಗೆ ಸೋಂಕು

Gadag

ಗದಗ: ತಾಲೂಕಿನ ಹರ್ತಿ ಗ್ರಾಮದ 81 ವರ್ಷದ ಪುರುಷ ಹಾಗೂ 24 ವರ್ಷದ ಪುರುಷನಿಗೆ ಶನಿವಾರ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಇಬ್ಬರೂ ರೋಗಿಗಳು ಹುಬ್ಬಳ್ಳಿಯ 45 ವರ್ಷದ ಪುರುಷನ ಸಂಪರ್ಕದಿಂದ ಸೋಂಕು ಹರಡಿದೆ. ಹುಬ್ಬಳ್ಳಿಯ ಪುರುಷ ಹರ್ತಿ ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಜೂ. 6ರಂದು ಆಗಮಿಸಿ ಅದೇ ದಿನ ಮರಳಿ ಹುಬ್ಬಳ್ಳಿಗೆ ಪ್ರಯಾಣಿಸಿದ್ದರು. ಇವರಿಗೆ ಜೂ. 12ರಂದು ಸೋಂಕು ಇರುವುದು ದೃಢಪಟ್ಟಿತ್ತು. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 12 ಜನರನ್ನು ಗುರುತಿಸಿ ಅವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಇಬ್ಬರು ಸೋಂಕಿತರನ್ನು ಜಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕೋವಿಡ್ 19 ಸೋಂಕಿನಿಂದ ಗುಣವಾದ ಮೂವರನ್ನು ಶನಿವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಗದಗ ನಗರದವರಾದ 40 ವರ್ಷದ ಪುರುಷ ಹಾಗೂ 45 ವರ್ಷದ ಪುರುಷ ಹಾಗೂ 30 ವರ್ಷದ ಪುರುಷನಿಗೆ ಜೂ. 5ರಂದು ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಅದೇ ದಿನ ಮೂವರು ರೋಗಿಗಳನ್ನು ಜಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆಯ ನಂತರ ಜೂ. 19ರಂದು ಜಿಮ್್ಸ ಪ್ರಯೋಗಾಲಯದಲ್ಲಿ ಮೂವರ ಗಂಟಲ ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಅವರನ್ನು ಶನಿವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡುತ್ತಿದ್ದೇವೆ. ಮುಂದಿನ 7 ದಿನಗಳ ಕಾಲ ಬಿಡುಗಡೆಗೊಂಡ ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗುತ್ತಿದೆ ಎಂದು ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಡಾ. ಆರ್.ಟಿ. ಪಾಟೀಲ, ಡಾ. ಕೊಟ್ರೇಶ ಹಾಗೂ ಜಿಮ್ಸ್ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು. ಜಿಲ್ಲೆಯಲ್ಲಿ ಒಟ್ಟು 60 ಸೋಂಕಿತರ ಪೈಕಿ 42 ಜನರು ಗುಣವಾಗಿದ್ದಾರೆ. 16 ಸಕ್ರಿಯ ಕೇಸ್​ಗಳಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಬಟ್ಟೂರು ಸರ್ಕಾರಿ ಶಾಲೆ ಸೀಲ್​ಡೌನ್

ಲಕ್ಷ್ಮೇಶ್ವರ: ಗದಗ ತಾಲೂಕಿನ ಹರ್ತಿ ಗ್ರಾಮದ ಖಾಸಗಿ ವೈದ್ಯರೊಬ್ಬರಿಗೆ ಶುಕ್ರವಾರ ಕರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ತಾಲೂಕಿನ ಜನರನ್ನು ಆತಂಕಕ್ಕೀಡು ಮಾಡಿದೆ. ಕಾರಣ ವೈದ್ಯರ ಪತ್ನಿ ಬಟ್ಟೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿದ್ದು ಇವರು ಜೂ. 8ರಂದು ಶಾಲೆಗೆ ಬಂದು ಹೋಗಿದ್ದಾರೆ. ಶಿಕ್ಷಕಿಯ ಗಂಟಲ ದ್ರವವನ್ನು ಪರೀಕ್ಷೆಗೊಳಪಡಿಸಲಾಗಿದ್ದು ವರದಿ ನೆಗೆಟಿವ್ ಬಂದಿದೆ ಎಂಬ ಮಾಹಿತಿ ಇದೆ. ಆದಾಗ್ಯೂ ಶಾಲೆಯಲ್ಲಿನ 8 ಜನ ಶಿಕ್ಷಕರು ಮತ್ತು ನಾಲ್ವರು ಅಡುಗೆ ಸಹಾಯಕರಿಗೆ ಹೋಂ ಕ್ವಾರಂಟೈನ್​ಗೆ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಆದೇಶಿಸಿದ್ದಾರೆ. ಶನಿವಾರ ಶಾಲೆಗೆ ಸ್ಯಾನಿಟೈಸ್ ಮಾಡಿ ಸೀಲ್​ಡೌನ್ ಮಾಡಲಾಗಿದೆ ಎಂದು ಬಿಇಒ ವಿ.ವಿ. ಸಾಲಿಮಠ ತಿಳಿಸಿದರು.

EndFragment