ಜಿಲ್ಲೆ

ಜಿಲ್ಲೆಯಲ್ಲಿ ನಮ್ಮ ನಡೆ, ಜಾಗೃತಿಯ ಕಡೆ 23ರಿಂದ ಆರಂಭ

ಚಿತ್ರದುರ್ಗ: ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಿಲ್ಲೆಯ ವಿವಿಧೆಡೆ ನಮ್ಮ ನಡೆ, ಜಾಗೃತಿಯ ಕಡೆ’ ಕಾರ್ಯಕ್ರಮ ಹಾಗೂ ಸಾರ್ವಜನಿಕ ಸಂಪರ್ಕ ಸಭೆಗಳನ್ನು ಜೂ. 23ರಿಂದ ಹಮ್ಮಿಕೊಳ್ಳಲಾಗಿದೆ.

ಹಿರಿಯೂರಲ್ಲಿ 23ರಿಂದ 25ರವರೆಗೆ ಜಾಗೃತಿ ಕಾರ‌್ಯಕ್ರಮ ಹಾಗೂ 24ರಂದು ಸಾರ್ವಜನಿಕ ಸಂಪರ್ಕ ಸಭೆಗಳನ್ನು ಏರ್ಪಡಿಸಲಾಗಿದೆ.

ಹೊಸದುರ್ಗದಲ್ಲಿ 30ರಿಂದ ಜುಲೈ 2ರವರೆಗೆ ಜಾಗೃತಿ, 1ರಂದು ಸಾರ್ವಜನಿಕ ಸಂಪರ್ಕ ಸಭೆ. ಚಳ್ಳಕೆರೆಯಲ್ಲಿ ಜು. 7ರಿಂದ 9ರವರೆಗೆ ಜಾಗೃತಿ, 8ರಂದು ಸಾರ್ವಜನಿಕ ಸಂಪರ್ಕ ಸಭೆ. ಮೊಳಕಾಲ್ಮೂರಲ್ಲಿ ಜು. 15ರಿಂದ 17ರವರೆಗೆ ಜಾಗೃತಿ, 16 ರಂದು ಸಾರ್ವಜನಿಕ ಸಂಪರ್ಕ ಸಭೆ. ಹೊಳಲ್ಕೆರೆಯಲ್ಲಿ ಜು. 21ರಿಂದ 23ರವರೆಗೆ ಜಾಗೃತಿ ಹಾಗೂ 22 ರಂದು ಸಾರ್ವಜನಿಕ ಸಂಪರ್ಕ ಸಭೆ ಹಾಗೂ ಭರಮಸಾಗರದಲ್ಲಿ ಜು.25ರಿಂದ 26ವರೆಗೆ ನಮ್ಮ ನಡೆ-ಜಾಗೃತಿಯ ಕಡೆ ಕಾರ್ಯಕ್ರಮ ಹಾಗೂ 26 ರಂದೇ ಸಾರ್ವಜನಿಕ ಸಂಪರ್ಕ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದ್ದಾರೆ.

ಈ ಕಾರ್ಯಕ್ರಮದ ಮೂಲಕ ಸೈಬರ್ ಅಪರಾಧ, ಮಾದಕ ವಸ್ತು, ಸಂಚಾರ ಸುರಕ್ಷತೆ, ಬಾಲ್ಯವಿವಾಹ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಜಾಗೃತಿ, ಆಯುಧ ಪ್ರದರ್ಶನ, ಪ್ರಾತ್ಯಕ್ಷಿಕೆ ಹಾಗೂ ಸಾರ್ವಜನಿಕ ಸಂಪರ್ಕ ಸಭೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.