ಜಿಲ್ಲೆ

ಜಿಲ್ಲೆಯಲ್ಲಿ ಗಾರ್ನಿಯರ್ ಪ್ರಚಾರ ಕ್ಯಾಂಪೇನ್

ಚಿತ್ರದುರ್ಗ: ರಾಜ್ಯದ ನಂ. 1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಸಹಯೋಗದಲ್ಲಿ ಗಾರ್ನಿಯರ್ ಹೇರ್ ಕಲರ್ ಕಂಪನಿಯಿಂದ ಜಿಲ್ಲೆಯಲ್ಲಿ ಗಾರ್ನಿಯರ್ ಪ್ರಚಾರದ ಕ್ಯಾಂಪೇನ್ ನಡೆಯುತ್ತಿದ್ದು, ಹೊಳಲ್ಕೆರೆಯಲ್ಲಿ ಗುರುವಾರ ಹಲವರಿಗೆ ಹೇರ್ ಕಲರ್ ಮಾಡಲಾಯಿತು.

ಉಚಿತ ಕ್ಯಾಂಪೇನ್ ಇದಾಗಿದ್ದು, ಪ್ರತಿದಿನ ಸ್ತ್ರೀಯರು, ಪುರುಷರು ಸೇರಿ ಒಟ್ಟು 80ರಿಂದ 100 ಮಂದಿಗೆ ಹೇರ್ ಕಲರ್ ಮಾಡಲಾಗುತ್ತಿದೆ. ಅದರಲ್ಲೂ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗಿದೆ.

ಜಿಲ್ಲೆಯ ಹಲವೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಆಸಕ್ತರು ಕ್ಯಾಂಪೇನ್‌ನಲ್ಲಿ ಪಾಲ್ಗೊಂಡು ಉಚಿತ ಹೇರ್ ಕಲರ್ ಮಾಡಿಸಿಕೊಂಡು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಚಿತ್ರದುರ್ಗದಲ್ಲಿ ಏ. 30ರಂದು ಚಾಲನೆ ದೊರೆತ ನಂತರ ಮೇ 19ರ ವರೆಗೂ ಒಟ್ಟು 20 ದಿನ ನಗರ ಸೇರಿ ಹಲವೆಡೆ, ಭೀಮಸಮುದ್ರದಲ್ಲಿ ಒಂದು ದಿನ ಕ್ಯಾಂಪೇನ್ ನಡೆಯಿತು. ಹೊಳಲ್ಕೆರೆ ಬಳಿಕ ಹೊಸದುರ್ಗದಲ್ಲೂ ನಡೆಯಲಿದೆ.

ಚಳ್ಳಕೆರೆ, ಮೊಳಕಾಲ್ಮೂರಿನಲ್ಲೂ ಕ್ಯಾಂಪೇನ್ ಕೈಗೊಳ್ಳಲು ಕಂಪನಿ ಕೋ-ಆರ್ಡಿನೇಟರ್ ಒಬ್ಬರನ್ನು ನಿಯೋಜಿಸಿದೆ. 22 ದಿನಗಳಿಂದ ಐದು ಮಂದಿಯ ತಂಡ ಉಚಿತವಾಗಿಯೇ ಹೇರ್ ಕಲರ್ ಮಾಡಿದೆ ಎಂದು ಜಿಲ್ಲೆಯ ಉಸ್ತುವಾರಿ ವಹಿಸಿರುವ ವಿನಾಯಕ್ ಬೇವಿನಮರದ ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯ ಕ್ಯಾಂಪೇನ್ ಮುಗಿದ ಬಳಿಕ ತಂಡವೂ ದಾವಣಗೆರೆ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲೂ ಕ್ಯಾಂಪೇನ್ ನಡೆಸಲಿದೆ. ಕಾರ್ತಿಕ್, ವಿದ್ಯಾಶ್ರೀ, ದೈವಾಣಿ, ಮಧು ತಂಡದಲ್ಲಿದ್ದಾರೆ.