ಜಿಲ್ಲೆ

ಜಿಲ್ಲೆಯಲ್ಲಿ ಕರೊನಾ ನಾಗಾಲೋಟ

ಗದಗ: ಜಿಲ್ಲೆಯಲ್ಲಿ ದಿನೇ ದಿನೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಸೋಮವಾರ ಮತ್ತೆ 100 ಜನರಿಗೆ ಸೋಂಕು ತಗುಲಿದೆ. ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.

ಇದರಿಂದ ಜಿಲ್ಲೆಯಿಂದ ಸೋಂಕಿತರ ಸಂಖ್ಯೆ 1668ಕ್ಕೆ ಏರಿದೆ. ಸೋಮವಾರ 40 ಜನರು ಸೇರಿ ಒಟ್ಟು 580 ಜನರು ಸೋಂಕಿನಿಂದ ಗುಣವಾಗಿದ್ದಾರೆ. ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.

ಕೋವಿಡ್ -19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ನಂದೀಶ್ವರ ನಗರ, ಕೇಶವ ನಗರ, ಶಿವಸಾಯಿ ನಗರ, ಪಂಚಾಕ್ಷರಿನಗರ, ಕೆ.ಎಚ್.ಬಿ. ಕಾಲನಿ, ವಿವೇಕಾನಂದ ನಗರದ ವಾಟರ್ ಟ್ಯಾಂಕ್ ಹತ್ತಿರದ ಪ್ರದೇಶ, ವೀರನಾರಾಯಣ ದೇವಸ್ಥಾನದ ಹಿಂಭಾಗದ ಖಾನತೋಟ ಓಣಿ, ಗೌರಿಗುಡಿ ಓಣಿ, ಗಂಜಿಬಸವೇಶ್ವರ ನಗರ, ಹುಡ್ಕೋ ಕಾಲನಿ, ವಿಶ್ವೇಶ್ವರಯ್ಯನಗರ, ಕೆ.ಸಿ.ರಾಣಿ ರೋಡ್, ಮುಳಗುಂದ ನಾಕಾ, ಗದಗ ತಾಲೂಕಿನ ಕುರ್ತಕೋಟಿ, ಹೊಸಳ್ಳಿ, ಸೊರಟೂರು, ಲಿಂಗಧಾಳ, ಹುಯಿಲಗೋಳ, ಅಂತೂರು, ಕೋಟುಮಚಗಿ, ಹೊಂಬಳ, ಹುಲಕೋಟಿ. ನರಗುಂದ ಪಟ್ಟಣದ 6ನೇ ವಾರ್ಡ್, ಅಧ್ಯಾಪಕನಗರ, ಕಸಬಾ ಓಣಿ, ನರಗುಂದ ತಾಲೂಕಿನ ಶಿರೋಳ, ಕಲ್ಲಾಪುರ, ಕೊಣ್ಣೂರು, ಸುರಕೋಡ, ಕೊಣ್ಣೂರು, ಗುರ್ಲಕಟ್ಟಿ, ಅರಿಷಿಣಗೋಡೆ, ಹದ್ಲಿ, ದಂಡಾಪುರ, ರೋಣ ತಾಲೂಕಿನ ಸೂಡಿ, ನಿಡಗುಂದಿ, ಮುಶಿಗೇರಿ, ಡ.ಸ.ಹಡಗಲಿ,ಬೆಳವಣಕಿ, ಮುಂಡರಗಿ ಪಟ್ಟಣದ ಸ್ವಾಮಿ ವಿವೇಕಾನಂದನಗರ, ಭಜಂತ್ರಿ ಓಣಿ, ಮುಂಡರಗಿ ತಾಲೂಕಿನ ಹಮ್ಮಿಗಿ, ಡಂಬಳ, ಹಾರೋಗೇರಿ, ಗಂಗಾಪುರ ಶುಗರ್ ಫ್ಯಾಕ್ಟರಿ, ಹಿರೇವಡ್ಡಟ್ಟಿ, ಶಿರಹಟ್ಟಿ, ತಾಲೂಕಿನ ಕಡಕೋಳ, ಬಾವನೂರು, ಲಕ್ಷ್ಮೇಶ್ವರ ಪಟ್ಟಣದ ಹಳ್ಳದಕೇರಿಯಲ್ಲಿ ಸೋಂಕು ಪತ್ತೆಯಾಗಿದೆ.

ಮೃತರ ವಿವರ: ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ನಿವಾಸಿ 64 ವರ್ಷದ ಪುರುಷ ಮೃತಪಟ್ಟಿದ್ದಾರೆ. ಜುಲೈ 24 ರಂದು ಅವರು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 26 ರಂದು ಕೋವಿಡ್-19 ದೃಢಪಟ್ಟಿತ್ತು. ನ್ಯುಮೋನಿಯಾ, ಶ್ವಾಸಕೋಶದ ತೊಂದರೆಯಿಂದಾಗಿ ಜುಲೈ 30 ರಂದು ಮೃತಪಟ್ಟಿದ್ದಾರೆ. ಗದಗ ಬೆಟಗೇರಿ ನಿವಾಸಿ 52 ವರ್ಷದ ಪುರುಷ ಮೃತಪಟ್ಟಿದ್ದಾರೆ. ಜುಲೈ 29 ರಂದು ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ಅವರು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ನ್ಯುಮೋನಿಯಾ ಹಾಗೂ ಶ್ವಾಸಕೋಶದ ತೊಂದರೆಯಿಂದಾಗಿ ಅಗಸ್ಟ್ 1 ರಂದು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದುಬಂದಿದೆ. ಮೃತರ ಅಂತ್ಯಕ್ರಿಯೆಯನ್ನು ಕೋವಿಡ್-19ರ ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.