ಬಾಗಲಕೋಟೆ: ಜಿಲ್ಲೆಯಲ್ಲಿ ಕೈಗೊಂಡ ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-೨೦೨೫ಕ್ಕೆ ಸಂಬAಽಸಿದAತೆ ಜ.೬ ರಂದು ಜಿಲ್ಲೆಯಾದ್ಯಂತ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಒಟ್ಟು ೧೬,೩೫,೫೧೮ ಮತದಾರರು ಇದ್ದಾರೆ ಎಂದು ಜಿಲ್ಲಾಽಕಾರಿ ಜಾನಕಿ ಕೆ.ಎಂ ಹೇಳಿದರು.
ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿ ವಿವಿಧ ರಾಜಕೀಯ ಮುಖಂಡರಿಗೆ ಅಂತಿಮ ಮತದಾರರ ಪಟ್ಟಿಗಳ ಸೆಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು ೧೭೩೪ ಮತಗಟ್ಟೆಗಳಿದ್ದು, ಒಟ್ಟು ೧೬,೩೫,೫೧೮ ಮತಗಳ ಪೈಕಿ ೮,೦೬,೫೬೪ ಪುರುಷ ಮತದಾರರು, ೮,೨೮,೮೫೭ ಮಹಿಳಾ ಮತದಾರರು ಹಾಗೂ ೯೭ ತೃತೀಯ ಲಿಂಗ ಮತದಾರರು ಇದ್ದಾರೆ. ಲಿಂಗಾನುಪಾತ ವಾರು ಪ್ರತಿ ೧೦೦೦ ಪುರುಷ ಮತದಾರರಿಗೆ ೧೦೨೮ ಮಹಿಳಾ ಮತದಾರರು ಇದ್ದಾರೆ. ಜನಸಂಖ್ಯಾವಾರು ಮತದಾರರ ಪ್ರಮಾಣ ೧೦೦ ಜನರಿಗೆ ಶೇ.೭೦.೮೫ ಮತದಾರರು ಇದ್ದಾರೆ ಎಂದರು.
ಕಳೆದ ವರ್ಷ ಅಂತಿಮ ಮತದಾರರ ಪಟ್ಟಿಗೆ ಹೋಲಿಸಿದರೆ ಈ ವರ್ಷ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-೨೦೨೫ರ ಸಂದರ್ಭದಲ್ಲಿ ಹೊಸದಾಗಿ ೪೪,೩೧೦ ಮತದಾರರು ಮತದಾರರ ಪಟ್ಟಿಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊAಡಿದ್ದಾರೆ. ಯುವ ಮತದಾರರು ಪುರುಷ ೧೭೮೮೪, ಮಹಿಳಾ ೧೭೩೨೮ ಹಾಗೂ ಇತರೆ ಸೇರಿ ಒಟ್ಟು ೩೫೨೧೪ ಮತದಾರರು ಇದ್ದರೆ, ೮೫ ವರ್ಷ ಮೇಲ್ಪಟ್ಟ ಹಿರಿಯ ಮತದಾರರು ಪುರುಷ ೫೬೩೬, ಮಹಿಳೆ ೮೯೨೪ ಸೇರಿ ಒಟ್ಟು ೧೪೫೬೦ ಮತದಾರರು ಇದ್ದಾರೆ. ಒಟ್ಟು ೨೩೭೨೧ ವಿಶೇಷ ಚೇತನ ಮತದಾರರಲ್ಲಿ ಪುರುಷ ೧೩೪೭೫, ಮಹಿಳೆ ೧೦೨೪೫ ಹಾಗೂ ಇತರೆಯಲ್ಲಿ ಒಬ್ಬರು ಮತದಾರರಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಂಖಡರುಗಳು ಉಪಸ್ಥಿತರಿದ್ದರು.