ಜಿಲ್ಲೆ

ಜಿಲ್ಲೆಯಲ್ಲಿ ಏರುತ್ತಲೇ ಸಾಗಿದೆ ಕರೊನಾ

ಧಾರವಾಡ: ಜಿಲ್ಲೆಯಲ್ಲಿ ಚೀನಿ ವೈರಸ್ ಪೀಡೆ ಮೇಲ್ಮುಖವಾಗಿಯೇ ಸಾಗಿದ್ದು, ಶನಿವಾರ 184 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ದಿನದಿಂದ ದಿನಕ್ಕೆ ಹೆಚ್ಚು ಜನರಲ್ಲಿ ಕರೊನಾ ದೃಢಪಡುತ್ತಿರುವುದು ಭಯ-ಆತಂಕವನ್ನು ಹೆಚ್ಚು ಮಾಡುತ್ತಿದೆ. ಜತೆಗೆ, ಇದು ಮುಗಿಯುವ ಪೀಡೆಯೇ ಅಲ್ಲವೇನೋ ಎಂದು ಚಿಂತಿಸುವಂತೆ ಮಾಡುತ್ತಿದೆ.

ಹೊಸ 184 ಪ್ರಕರಣಗಳಿಂದಾಗಿ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 4272ಕ್ಕೆ ಜಿಗಿದಿದೆ. ಈವರೆಗೆ 1921 ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2212 ಪ್ರಕರಣಗಳು ಸಕ್ರಿಯವಾಗಿದ್ದು, ಕರೊನಾ ಕಂಡುಬಂದವರು ವಿವಿಧ ಆಸ್ಪತ್ರೆ, ಕೋವಿಡ್ ಸೆಂಟರ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತ್ತೆ 8 ಜನರು ಕರೊನಾದಿಂದ ಸಾವಿಗೀಡಾಗಿದ್ದಾರೆ. ಇದರಿಂದಾಗಿ, ಚೀನಿ ರೋಗಕ್ಕೆ ಬಲಿಯಾದವರ ಸಂಖ್ಯೆ 139ಕ್ಕೆ ಏರಿದೆ. ಶನಿವಾರ ಪತ್ತೆಯಾದ ಪ್ರಕರಣಗಳ ತಾಲೂಕುವಾರು ಮಾಹಿತಿ ಇಂತಿದೆ.

ಧಾರವಾಡ ತಾಲೂಕು: ಗಾಂಧಿನಗರ, ಕೆಲಗೇರಿ ರಸ್ತೆ ಶಾಂತಿನಿಕೇತನ ನಗರ, ಸಾಧನಕೇರಿ, ಸಪ್ತಾಪುರ, ಸತ್ತೂರಿನ ಎಸ್​ಡಿಎಂ ಆಸ್ಪತ್ರೆ, ಚನ್ನಬಸವೇಶ್ವರ ನಗರ, ಕಲಘಟಗಿ ರಸ್ತೆ ಪೊಲೀಸ್ ತರಬೇತಿ ಶಾಲೆ, ಮರೇವಾಡ ಗ್ರಾಮ, ದಾನೇಶ್ವರ ನಗರ, ಕಾಮನಕಟ್ಟಿ, ಶ್ರೀನಗರ, ಪೊಲೀಸ್ ವಸತಿಗೃಹ, ಮದಿಹಾಳ, ಸಾಧನಕೇರಿ ಮುಖ್ಯರಸ್ತೆ, ಮಣಿಕಂಠ ನಗರ, ಸವದತ್ತಿ ರಸ್ತೆ ಶಿವಾಜಿ ವೃತ್ತ, ನರೇಂದ್ರ ಗ್ರಾಮ, ಎಂ.ಆರ್. ನಗರ, ತೇಜಸ್ವಿ ನಗರ, ಗಾಂಧಿ ನಗರ, ಎಸ್​ಡಿಎಂ ಆಸ್ಪತ್ರೆ, ಕಲ್ಯಾಣನಗರ, ಗೋವನಕೊಪ್ಪ, ತಾವರಗೇರಿ ಆಸ್ಪತ್ರೆ ಹತ್ತಿರ, ಹೊಸ ಬಸ್ ನಿಲ್ದಾಣ ಹಾಗೂ ಅಂಬಲಿಕೊಪ್ಪ ಗ್ರಾಮ.

ಹುಬ್ಬಳ್ಳಿ ತಾಲೂಕು: ತಾಜ್​ನಗರ ಲಿಟಲ್ ಶಾಲೆ ಹತ್ತಿರ, ಗೋಕುಲ ರಸ್ತೆ, ರಾಜ್​ನಗರ ಫಾರೆಸ್ಟ್ ಕಾಲನಿ, ರೈಲ್ವೆ ಸುರಕ್ಷಾ ದಳ, ನವನಗರ ಗಂಗಾಧರನಗರ, ಬ್ಯಾರಕ್ ರೈಲ್ವೆ ಕ್ವಾರ್ಟರ್ಸ್, ಮೃತ್ಯುಂಜಯ ಎಕ್ಸಿಟ್, ಭೈರಿದೇವರಕೊಪ್ಪ, ಕೇಶ್ವಾಪುರ ಅಶ್ವಮೇಧ ಕ್ಯಾಸ್ಟಲ್, ಹಸ್ತಿನಾಪುರ ಲೇಔಟ್, ಶಾಂತಿನಗರ ನಕ್ಷತ್ರ ಕಾಲನಿ, ಕುಸಗಲ್ ರಸ್ತೆ, ರೈಲ್ವೆ ಸುರಕ್ಷಾ ದಳದ ಆಫೀಸರ್ ಕಾಲನಿ, ವಿಮಾನ ನಿಲ್ದಾಣ, ಕ್ಲಬ್ ರಸ್ತೆ ಕೃಷ್ಣಾ ಅಪಾರ್ಟಮೆಂಟ್, ಬಸವೇಶ್ವರ ಪಾರ್ಕ್, ರಾಯಾಪುರ ಪೊಲೀಸ್ ವಸತಿಗೃಹ, ರೇವಡಿಹಾಳ ಗ್ರಾಮ ದ್ಯಾಮವ್ವನ ಗುಡಿ ಬಳಿ, ಅಮರಗೋಳದ ಕುಂಬಾರ ಓಣಿ, ಬಂಕಾಪುರ ಚೌಕ್ ಹನುಮಾನ್ ಮಂದಿರ ಬಳಿ, ಬ್ಯಾಹಟ್ಟಿ ಗ್ರಾಮದ ನೀರಾವರಿ ಕಾಲನಿ, ಗೋಕುಲ ರಸ್ತೆ, ಭಂಡಿವಾಡ, ಗೋಕುಲ ರಸ್ತೆ ಸನ್ಮಾನ ಕಾಲನಿ ಲಕ್ಷ್ಮೀ ಪಾರ್ಕ್, ಹಳೇ ಹುಬ್ಬಳ್ಳಿ ಚನ್ನಪೇಟೆ, ಸಹದೇವ ನಗರ, ನೇಕಾರನಗರ, ಕೃಷ್ಣಾಪುರ, ಜೋಳದ ಓಣಿ, ಗದಗ ರಸ್ತೆ ಗಾಂಧಿವಾಡ, ಉಣಕಲ್ ಶ್ರೀನಗರ, ಕಮರಿಪೇಟೆಯ ನಂ.6 ಶಾಲೆ ಹತ್ತಿರ, ಆನಂದ ನಗರ, ಪಗಡಿ ಗಲ್ಲಿ, ಹಳೇ ಹುಬ್ಬಳ್ಳಿ ಜಂಗಲಿಪೇಟೆ, ತಾರಿಹಾಳ.

ಕಲಘಟಗಿ ತಾಲೂಕಿನ ಹುಲಿಕಟ್ಟಿ ಗ್ರಾಮ, ದ್ಯಾಮವನ ಗುಡಿ ಓಣಿ ಬಳಿ, ಅಳ್ನಾವರ, ನವಲಗುಂದ ತಾಲೂಕಿನ ಕುಮಾರಗೊಪ್ಪ, ಆರೇಕುರಹಟ್ಟಿ ಗ್ರಾಮದ ಮೆಣಸಿನಕಾಯಿ ಓಣಿ, ಶಿರಕೋಳ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಗದಗ ಜಿಲ್ಲೆ ಬೆಟಗೇರಿ, ವಿಜಯಪುರ ಜಿಲ್ಲೆ ತಾಳಿಕೋಟಿಯ ಎಸ್.ಕೆ. ನಗರ, ಹಾವೇರಿ ಜಿಲ್ಲೆ ಹಾನಗಲ್ಲ, ಶಿಗ್ಗಾಂವಿ ಹಳೇಪೇಟದಲ್ಲಿ ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿದರು.

ುಹಿಳಾ ಪಿಎಸ್​ಐಗೆ ಕರೊನಾ

ಕರೊನಾ ಸೇನಾನಿಗಳಾದ ಪೊಲೀಸ್ ಸಿಬ್ಬಂದಿಗೆ ಕರೊನಾ ಬೆಂಬಿಡದೆ ಕಾಡುತ್ತಿದೆ. ಶನಿವಾರವೂ ನಗರದ ಪೊಲೀಸ್ ಠಾಣೆಯ ಪಿಎಸ್​ಐ ಒಬ್ಬರಿಗೆ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಶಹರ ಠಾಣೆಯ ಕೆಲ ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಇದೀಗ ಅಲ್ಲಿನ ಪಿಎಸ್​ಐಗೆ ಸೋಂಕು ತಗುಲಿದ್ದರಿಂದ ಉಳಿದವರು ಆತಂಕದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ. ಇದಲ್ಲದೆ, ಪೊಲೀಸ್ ತರಬೇತಿ ಶಾಲೆ ಸಿಬ್ಬಂದಿ ಸೇರಿ ಕೆಲ ಅಭ್ಯರ್ಥಿಗಳಿಗೆ ಈಗಾಗಲೇ ಕರೋನಾ ಸೋಂಕು ತಗುಲಿದ್ದರಿಂದ ತರಬೇತಿ ಸ್ಥಗಿತಗೊಳಿಸಲಾಗಿದೆ. ಇನ್ನು ಶನಿವಾರ ಸಹ ಕೆಲವರಿಗೆ ಸೋಂಕು ತಗುಲಿದ್ದರಿಂದ ಅಲ್ಲಿನ ಸಿಬ್ಬಂದಿ ಮತ್ತಷ್ಟು ತೊಂದರೆಗೆ ಸಿಲುಕುವಂತಾಗಿದೆ.

ಕೋವಿಡ್​ನಿಂದ 8 ಜನ ಸಾವು

ಧಾರವಾಡ: ಕರೊನಾ ಸೋಂಕು ತಗುಲಿದ ಜಿಲ್ಲೆಯ 7 ಜನ ಹಾಗೂ ಹಾವೇರಿ ಜಿಲ್ಲೆಯ ಒಬ್ಬ ಸೇರಿ ಒಟ್ಟು 8 ಜನರು ಐದು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶನಿವಾರದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ತೀವ್ರ ಉಸಿರಾಟದ ತೊಂದರೆ, ಜ್ವರ, ಕಫ, ಎದೆ ನೋವು ಮತ್ತಿತರ ಲಕ್ಷಣಗಳಿಂದ ಬಳಲುತ್ತಿದ್ದ ಹುಬ್ಬಳ್ಳಿ ದಾಜಿಬಾನಪೇಟೆಯ 74 ವರ್ಷದ ವೃದ್ಧ, ಜೆ.ಪಿ. ನಗರದ 53 ವರ್ಷದ ಪುರುಷ, ವಿಜಯನಗರದ 72 ವರ್ಷದ ವೃದ್ಧ, ಹೊಸೂರಿನ 72 ವರ್ಷದ ವೃದ್ಧ, ನವಲಗುಂದ ತಾಲೂಕಿನ ಅಣ್ಣಿಗೇರಿಯ 34 ವರ್ಷದ ಪುರುಷ, ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ 73 ವರ್ಷದ ವೃದ್ಧ, ಹೊನ್ನಾಪುರದ 56 ವರ್ಷದ ಪುರುಷ ಹಾಗೂ ಹಾವೇರಿ ಜಿಲ್ಲೆ ಸವಣೂರ ತಾಲೂಕಿನ ಹತ್ತಿಮತ್ತೂರಿನ 55 ವರ್ಷದ ಪುರುಷ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ.

ಚಿತ್ರಮಂದಿರ, ಈಜುಗೊಳಕ್ಕೆ 5ರಿಂದ ಅನುಮತಿ

ಮುಚ್ಚಿದ ಮೇಲೆ ಬಾಗಿಲು ತೆಗೆಯುವ ಭಾಗ್ಯ ಕಾಣದಿದ್ದ ಚಿತ್ರಮಂದಿರ, ಈಜುಗೊಳ ಮೊದಲಾದವುಗಳು ಮತ್ತೆ ಜನರ ಬಳಕೆಗೆ ಮುಕ್ತವಾಗುವ ದಿನ ಸಮೀಪಿಸಿದೆ. ಇದೇ ಮೊದಲ ಬಾರಿಗೆ ಭಾನುವಾರದ ಲಾಕ್​ಡೌನ್ ಆ. 2ರಂದು ತೆರವಾಗುತ್ತಿದೆ.

ಲಾಕ್​ಡೌನ್ ತೆರವಿನ ಕುರಿತು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಷರತ್ತುಬದ್ಧ ಆದೇಶ ಹೊರಡಿಸಿದ್ದಾರೆ. ಇದರನ್ವಯ ಕಂಟೇನ್ಮೆಂಟ್ ವಲಯಗಳ ಹೊರ ಭಾಗದಲ್ಲಿ ಸುರಕ್ಷಿತ ಅಂತರ ನಿರ್ವಹಣೆ ಸೇರಿ ನಿಯಮಾವಳಿಗಳ ಪಾಲನೆಯೊಂದಿಗೆ ವಿವಿಧ ಚಟುವಟಿಕೆಗೆ ಅನುವು ಮಾಡಿಕೊಡಲಾಗಿದೆ. ಕಂಟೇನ್ಮೆಂಟ್ ವಲಯಗಳಲ್ಲಿನ ಲಾಕ್​ಡೌನ್ ಆ. 31ರವರೆಗೆ ಮುಂದುವರಿಯುತ್ತದೆ.

ಸಿನಿಮಾ ಮಂದಿರ, ಈಜುಗೊಳ, ಉದ್ಯಾನ, ಬಾರ್​ಗಳು, ಸಭಾಂಗಣಗಳು, ಯೋಗ ಕೇಂದ್ರಗಳು, ಜಿಮ್ನಾಷಿಯಂಗಳನ್ನು ಆ. 5ರಿಂದ ತೆರೆಯಲು ಅನುಮತಿಸಲಾಗುತ್ತದೆ. ಈ ಸಂಬಂಧ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಮತ್ತು ರಾಜ್ಯ ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರಮಾಣಿತ ಕಾರ್ಯ ವಿಧಾನವನ್ನು ಹೊರಡಿಸಲಾಗುತ್ತದೆ.

ಬೃಹತ್ ಸಾರ್ವಜನಿಕ ಸಭೆ ಮತ್ತು ಒಂದೆಡೆ ದೊಡ್ಡ ಗುಂಪು ಸೇರುವುದರ ಮೇಲೆ ನಿಷೇಧ ಮುಂದುವರಿಸಲಾಗಿದೆ. ಮದುವೆ ನಡೆಯುವುದಿದ್ದರೆ ಅತಿಥಿಗಳ ಸಂಖ್ಯೆ 50ನ್ನು ಮೀರಬಾರದು. ಶವ ಸಂಸ್ಕಾರ/ಅಂತಿಮ ವಿಧಿ ಸಂಬಂಧಿತ ಕಾರ್ಯಗಳಿಗೆ 20ಕ್ಕಿಂತ ಹೆಚ್ಚು ಜನ ಸೇರಬಾರದು ಎಂದು ತಿಳಿಸಲಾಗಿದೆ.

ಶಾಲಾ-ಕಾಲೇಜಿಲ್ಲ...

ಶಾಲಾ-ಕಾಲೇಜುಗಳು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಆ. 31ರವರೆಗೆ ಮುಚ್ಚಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಆನ್​ಲೈನ್/ದೂರ ಶಿಕ್ಷಣಕ್ಕೆ ಅನುಮತಿ ಮುಂದುವರಿಸಲಾಗಿದೆ.

ಮನೆಯಲ್ಲೇ ಇರಲು ಸಲಹೆ

65 ವರ್ಷಕ್ಕಿಂತ ಮೇಲ್ಪಟ್ಟವರು, ಅಸ್ವಾಸ್ಥ್ಯ ಹೊಂದಿರುವವರು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಮತ್ತು ಆರೋಗ್ಯ ಉದ್ದೇಶಗಳನ್ನು ಹೊರತುಪಡಿಸಿ ಮನೆಯಲ್ಲಿಯೇ ಇರುವಂತೆ ಆದೇಶದಲ್ಲಿ ಸಲಹೆ ನೀಡಲಾಗಿದೆ.

ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ದಿನಾಚರಣೆಯನ್ನು ಹು-ಧಾ ಮಹಾನಗರ ಪಾಲಿಕೆ, ಉಪ ವಿಭಾಗಗಳು, ತಾಲೂಕುಗಳು, ಮುನ್ಸಿಪಲ್ ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ಮನೆಗಳಲ್ಲೂ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಷರತ್ತುಗಳನ್ನು ಪಾಲಿಸುವುದರೊಂದಿಗೆ ಆಚರಿಸಲು ಅನುಮತಿಸಲಾಗಿದೆ.

EndFragment