ಗದಗ: ಜಿಲ್ಲೆಯಲ್ಲಿ ಬುಧವಾರ 39 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 369ಕ್ಕೇರಿಕೆಯಾಗಿದೆ.
ಗದಗ ತಾಲೂಕು: ಧಾರವಾಡ ಪ್ರಯಾಣ ಹಿನ್ನೆಲೆಯ ಗದಗ ನಗರದ ಕೆಎಸ್ಆರ್ಟಿಸಿ ಡಿಪೋ ಹಿಂದಿನ ಹೂಗಾರ ಗಲ್ಲಿ ನಿವಾಸಿ 36 ವರ್ಷದ ಪುರುಷ, ರಾಯಚೂರ ಪ್ರಯಾಣದ ಹಿನ್ನೆಲೆಯ ಗದಗ ನಗರದ ಹುಬ್ಬಳ್ಳಿ ರಸ್ತೆಯ ಈಶ್ವರ ನಗರದ ಮಿಟ್ಟಿ ಪೆಟ್ರೋಲ್ ಬಂಕ್ ಹತ್ತಿರದ ನಿವಾಸಿ 59 ವರ್ಷದ ಪುರುಷನಿಗೆ ಕರೊನಾ ಸೋಂಕು ತಗುಲಿದೆ.
ಪಿ-35062 ಸಂಪರ್ಕದಿಂದ ಗದಗ ವಿವೇಕಾನಂದ ನಗರ 2ನೇ ಕ್ರಾಸ್ ನಿವಾಸಿ 54 ವರ್ಷದ ಪುರುಷನಿಗೆ ಕೋವಿಡ್ ದೃಢಪಟ್ಟಿದೆ.
ತೀವ್ರ ಉಸಿರಾಟದ ತೊಂದರೆಯಿದ್ದ ಗದಗ ಗಂಗಾಪುರಪೇಟೆ ನಿವಾಸಿ 56 ವರ್ಷದ ಪುರುಷನಿಗೆ, ಗದಗ ಜಾಕೀರ ಹುಸೇನ್ ಕಾಲನಿ ನಿವಾಸಿ 27 ವರ್ಷದ ಪುರುಷನಿಗೆ ಬಳ್ಳಾರಿ ಜಿಲ್ಲೆ ಪ್ರಯಾಣದಿಂದ ಕೋವಿಡ್ ಬಂದಿದೆ.
ಗದಗ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ ಹತ್ತಿರದ ಅಜಾದ್ ಗಲ್ಲಿ ನಿವಾಸಿ 34 ವರ್ಷದ ಪುರುಷನಿಗೆ ಕೆಮ್ಮು, ಜ್ವರ ಲಕ್ಷಣಗಳಿಂದ ಸೋಂಕು ದೃಢಪಟ್ಟಿದೆ. ಗದಗ ನಗರದ ಟ್ಯಾಗೋರ್ ರಸ್ತೆ ಅಣ್ಣಿಗೇರಿ ಗಾರ್ಡನ್ ನಿವಾಸಿ 30 ವರ್ಷದ ಪುರುಷನಿಗೆ ಕೋವಿಡ್ ದೃಢಪಟ್ಟಿದ್ದು, ಸೋಂಕಿನ ಪತ್ತೆಕಾರ್ಯ ನಡೆದಿದೆ. ಗದಗ ಜಿಮ್್ಸ ಆಸ್ಪತ್ರೆ ನಿವಾಸಿ 24 ವರ್ಷದ ಪುರುಷನಿಗೆ ಪಿ-31106 ಸಂಪರ್ಕದಿಂದ ಸೋಂಕು ತಗುಲಿದೆ. ಗದಗ ನಿಸರ್ಗ ಬಡಾವಣೆ ಸಾಯಿ ದೇವಸ್ಥಾನ ಹತ್ತಿರ ನಿವಾಸಿ 59 ವರ್ಷದ ಪುರುಷ, 47 ವರ್ಷದ ಮಹಿಳೆ, 17 ವರ್ಷದ ಯುವತಿಗೆ ತೆಲಂಗಾಣ ರಾಜ್ಯದ ಹೈದಾರಾಬಾದ್ ಪ್ರಯಾಣದಿಂದ ಕರೊನಾ ವೈರಸ್ ಬಂದಿದೆ.
ಗದಗ ಹುಡ್ಕೋ ಕಾಲನಿ ನಿವಾಸಿ 63 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿನ ಪತ್ತೆಕಾರ್ಯ ನಡೆದಿದೆ.
ಸೀತಾಲಹರಿ ಗ್ರಾಮದ ನಿವಾಸಿಗಳಾದ 40 ವರ್ಷದ ಮಹಿಳೆ, 60 ವರ್ಷದ ಮಹಿಳೆ, 42 ವರ್ಷದ ಪುರುಷ, 46 ವರ್ಷದ ಮಹಿಳೆ, 40 ವರ್ಷದ ಮಹಿಳೆ, 36 ವರ್ಷದ ಪುರುಷ, 46 ವರ್ಷದ ಪುರುಷ, 28 ವರ್ಷದ ಮಹಿಳೆ, 58 ವರ್ಷದ ಪುರುಷ, 29 ವರ್ಷದ ಮಹಿಳೆ, 36 ವರ್ಷದ ಪುರುಷನಿಗೆ ಪಿ-31130 ಸಂರ್ಪತರಿಂದ ಹಾಗೂ ಇದೇ ಗ್ರಾಮದ ನಿವಾಸಿ 12 ವರ್ಷದ ಬಾಲಕನಿಗೆ ಹಾಗೂ 36 ವರ್ಷದ ಮಹಿಳೆಗೆ ಪಿ-28944 ಸಂಪರ್ಕದಿಂದ ಸೋಂಕು ತಗುಲಿದೆ.
ನಾಗಾವಿ ಗ್ರಾಮದ ನಿವಾಸಿ 48 ವರ್ಷದ ಪುರುಷನಿಗೆ, ಕಣವಿ ಹೊಸೂರ ಗ್ರಾಮದ ನಿವಾಸಿ 69 ವರ್ಷದ ಮಹಿಳೆ, ಕಬಲಾಯತಕಟ್ಟಿ ತಾಂಡಾ ನಿವಾಸಿ 65 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿನ ಪತ್ತೆಕಾರ್ಯ ನಡೆದಿದೆ.
ನರಗುಂದ ತಾಲೂಕು: ಪಿ-36666 ಸಂಪರ್ಕದಿಂದ ನರಗುಂದ ಕಸಬಾದ ನಿವಾಸಿ 46 ವರ್ಷದ ಪುರುಷನಿಗೆ, ಪಿ-35072 ಸಂಪರ್ಕದಿಂದ ನರಗುಂದ ಪಟ್ಟಣದ ಹೊರಕೇರಿ ಓಣಿ ನಿವಾಸಿಗಳಾದ 9 ವರ್ಷದ ಬಾಲಕ, 29 ವರ್ಷದ ಪುರುಷನಿಗೆ, 49 ವರ್ಷದ ಮಹಿಳೆಗೆ, 32 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಇದೇ ಓಣಿ ನಿವಾಸಿಗಳಾದ 50 ವರ್ಷದ ಮಹಿಳೆಗೆ ಪಿ-35072 ಸಂಪರ್ಕದಿಂದ ಹಾಗೂ 6 ವರ್ಷದ ಬಾಲಕಿಗೆ ಪಿ-31130 ಸಂಪರ್ಕದಿಂದ ಸೋಂಕು ತಗುಲಿದೆ. ಕೆಮ್ಮು, ಜ್ವರ ಲಕ್ಷಣಗಳುಳ್ಳ ನರಗುಂದ ಪಟ್ಟಣದ ಚಿನಿವಾಲಗಟ್ಟಿ ನಿವಾಸಿ 31 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ರೋಣ ತಾಲೂಕು: ಪಟ್ಟಣದ ಹನುಮಾನ ದೇವಸ್ಥಾನ ಹತ್ತಿರದ ಶಾಮರಾ ಚಾಳ ನಿವಾಸಿ 41 ವರ್ಷದ ಪುರುಷ, ವಾರ್ಡ್ ನಂ. 10ರ ಮುದೇನಗುಡಿ ರಸ್ತೆ ನಿವಾಸಿ 29 ವರ್ಷದ ಪುರುಷ, ವಾರ್ಡ್ ನಂ. 16ರ ಕುರುಬ ಗಲ್ಲಿ ನಿವಾಸಿ 42 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿನ ಪತ್ತೆ ಕಾರ್ಯ ನಡೆದಿದೆ.
ಸೋಂಕಿತರಿಗೆ ನಿಗದಿತ ಕೋವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ತಿಳಿಸಿದ್ದಾರೆ.
ಗದಗ ಜಿಲ್ಲೆಯ ಕರೊನಾ ಅಂಶಗಳು
39: ಇಂದಿನ ಸೋಂಕಿತರು
13378: ನಿಗಾದಲ್ಲಿ ಇರುವವರು
14004: ಮಂದಿಯ ಗಂಟಲ ದ್ರವ ಸಂಗ್ರಹ
477: ಏಳು ದಿನ ಕ್ವಾರಂಟೈನ್ನಲ್ಲಿರುವವರು
164: ಆಸ್ಪತ್ರೆಯಲ್ಲಿ ಐಸೋಲೇಷನ್ನಲ್ಲಿ ಇರುವವರು
369: ಪಾಸಿಟಿವ್ ಪ್ರಕರಣಗಳು
196: ಗುಣವಾಗಿ ಬಿಡುಗಡೆಯಾದವರು
164: ಸಕ್ರಿಯ ಪ್ರಕರಣಗಳು
816: ಬಾಕಿ ಇರುವ ವರದಿಗಳು
12581: ನೆಗೆಟಿವ್ ಮಾದರಿಗಳು
9: ಮೃತರು
ಕೋವಿಡ್ ರ್ಯಾಂಡಂ ಪರೀಕ್ಷೆ ನಡೆಸಲು ಒತ್ತಾಯ
ರೋಣ: ಪಟ್ಟಣದ ಪುರಸಭೆಯ ವ್ಯಾಪ್ತಿಯ 23 ವಾರ್ಡ್ಗಳಲ್ಲಿ ಕೋವಿಡ್ ರ್ಯಾಂಡಂ ಪರೀಕ್ಷೆ ನಡೆಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಜಗದೀಶ ಮಡಿವಾಳರ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜು. 11ರಂದು ಪಟ್ಟಣದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಪಟ್ಟಣದ ಬೀದಿ ಬದಿಯ ವ್ಯಾಪಾರಿಗಳು, ಪುರಸಭೆ ಪೌರ ಕಾರ್ವಿುಕರಿಗಾಗಿ ನಡೆಸಲಾದ ಕೋವಿಡ್ ರ್ಯಾಂಡಂ ಪರೀಕ್ಷೆಯಲ್ಲಿ ಬೀದಿ ಬದಿಯ ಇಬ್ಬರು ವ್ಯಾಪಾರಿಗಳು, ರೋಣ ಪುರಸಭೆ ಒಬ್ಬ ಪೌರ ಕಾರ್ವಿುಕನಿಗೆ ಕರೊನಾ ಸೋಂಕು ಪತ್ತೆಯಾಗಿದೆ. ಇದರಿಂದ ಜನರಲ್ಲಿ ಆತಂಕ ಮೂಡಿದೆ. ಕೋವಿಡ್ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆಗಳು ದಟ್ಟವಾಗಿವೆ. ಇದನ್ನು ತಾಲೂಕಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಪಟ್ಟಣದ 23 ವಾರ್ಡ್ಗಳಲ್ಲಿ ಹಾಗೂ ಸರ್ಕಾರಿ ಕಚೇರಿ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸುವುದರಿಂದ ಕೋವಿಡ್ ಪ್ರಕರಣಗಳನ್ನು ಶೀಘ್ರ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಲಾಕ್ಡೌನ್ ಘೊಷಿಸಲು ಆಗ್ರಹ
ಗದಗ: ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಕರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಒಂಬತ್ತು ಜನರು ಮೃತಪಟ್ಟಿದ್ದಾರೆ. ಕೂಡಲೆ, ಜಿಲ್ಲೆಯಲ್ಲಿ ಲಾಕ್ಡೌನ್ ಘೊಷಿಸಬೇಕು ಎಂದು ಜಿಲ್ಲಾ ಜೈ ಭೀಮ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈಗಾಗಲೇ ಕರೊನಾ ಸೋಂಕು ಸಮುದಾಯಕ್ಕೆ ಹಬ್ಬಿರುವ ಆತಂಕ ಜಿಲ್ಲೆಯ ಜನರಲ್ಲಿ ಭಯ ಹುಟ್ಟಿಸಿದೆ. ಪೌರ ಕಾರ್ವಿುಕರು, ಬೀದಿ ಬದಿ ವ್ಯಾಪಾರಸ್ಥರು, ಕೆಎಸ್ಆರ್ಟಿಸಿ, ವೈದ್ಯಕೀಯ ಸಿಬ್ಬಂದಿಗೂ ವ್ಯಾಪಿಸಿರುವುದು ಜನರಲ್ಲಿ ದುಗುಡವನ್ನು ಹೆಚ್ಚಿಸಿದೆ. ಗದಗ ಜಿಲ್ಲೆ ಡೇಂಜರ್ ಜೋನ್ನಲ್ಲಿ ಇರುವುದರಿಂದ ತಕ್ಷಣವೇ ಜಿಲ್ಲೆಯನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘದ ಜಿಲ್ಲಾಧ್ಯಕ್ಷ ವಿಜಯ ಕಲ್ಮನಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಮನಗುಂಡಿ, ಆಟೋ ಚಾಲಕರು, ಮಾಲೀಕರು ಇದ್ದರು.
ಸ್ವಯಂಪ್ರೇರಿತ ಬಂದ್ಗೆ ಸಾರ್ವಜನಿಕರ ಒಲವು
ಮುಳಗುಂದ: ಕರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕರು ಬುಧವಾರದಿಂದ ಸ್ವಯಂಪ್ರೇರಿತ ಬಂದ್ಗೆ ನಿರ್ಧರಿಸಿದ್ದಾರೆ.
(ಸಮೀಪದ ಸೀತಾಲಹರಿ ಹಾಗೂ ಮುಳಗುಂದ ಸೇರಿ 13 ಕರೊನಾ ಪ್ರಕರಣಗಳು ದೃಢವಾಗಿದ್ದರಿಂದ) ಪಪಂ ಸಭಾಭವನದಲ್ಲಿ ಏರ್ಪಡಿಸಿದ್ದ ಸಾರ್ವಜನಿಕರೊಂದಿಗಿನ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.
ಜು. 16ರಿಂದ ಜು. 23ರವರೆಗೆ ನಿತ್ಯ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ವ್ಯಾಪಾರ ನಡೆಸಲು ದಿನಸಿ, ತರಕಾರಿ ಮಾರಾಟಗಾರರು, ಚಹಾ, ಮದ್ಯ ಮತ್ತಿತರ ಅಂಗಡಿಗಳ ಮಾಲೀಕರು, ಪಪಂ ಸದಸ್ಯರು ಒಪ್ಪಿದರು.
ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ. ಬಡ್ನಿ, ಪಪಂ ಸದಸ್ಯರಾದ ಕೆ.ಎಲ್. ಕರಿಗೌಡ್ರ, ವಿಜಯ ನೀಲಗುಂದ, ನಾಗರಾಜ ದೇಶಪಾಂಡೆ, ಎಸ್.ಸಿ. ಬಡ್ನಿ, ಮಹಾಂತಪ್ಪ ನೀಲಗುಂದ, ದ್ಯಾಮಣ್ಣ ನೀಲಗುಂದ, ಮಹಾದೇವಪ್ಪ ಗಡಾದ, ಬಸವರಾಜ ಹಾರೋಗೇರಿ, ಚಂಪಾವತಿ ಗುಳೇದ, ನೀಲವ್ವ ಅಸುಂಡಿ, ಪಾರವ್ವ ಅಳ್ಳಣ್ಣವರ, ಉಮಾ ಮಟ್ಟಿ, ಮಲ್ಲವ್ವ ಕವಲೂರ, ಗಣ್ಯರಾದ ಆರ್.ಎನ್. ದೇಶಪಾಂಡೆ, ಎಂ.ಡಿ. ಬಟ್ಟೂರ, ಆರ್.ಸಿ. ಕಮಾಜಿ, ಬಿ.ವಿ. ಸುಂಕಾಪುರ, ಪಪಂ ಮುಖ್ಯಾಧಿಕಾರಿ ಉಮಾ ಯಟ್ಟಿ, ಮುಳಗುಂದ ಪೊಲೀಸ್ ಠಾಣಾಧಿಕಾರಿ ವಾಸುದೇವ ಹುಲ್ಲೂರ, ವರ್ತಕರ ಸಂಘದ ಅಧ್ಯಕ್ಷರು, ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರು, ಇತರರಿದ್ದರು.