ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಬುಧವಾರ 154 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಪ್ರಕರಣ ಸಂಖ್ಯೆ 18,272ಕ್ಕೇರಿದೆ. 74 ಜನ ಬಿಡುಗಡೆಯಾಗಿದ್ದಾರೆ. 2625 ಸಕ್ರಿಯ ಪ್ರಕರಣಗಳಿವೆ. ಇಬ್ಬರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 510ಕ್ಕೆ ತಲುಪಿದೆ.
ಸಂಚಾರಿ ಸ್ವಾಬ್ ಸಂಗ್ರಹಣೆ ಕೇಂದ್ರಗಳ ನಿಲುಗಡೆ ಸ್ಥಳ
ಧಾರವಾಡ: ಜಿಲ್ಲಾಡಳಿತ ಹುಬ್ಬಳ್ಳಿ- ಧಾರವಾಡದ 7 ಸ್ಥಳಗಳಲ್ಲಿ ಸಂಚಾರಿ ಸ್ವಾಬ್ ಸಂಗ್ರಹಣಾ ಕೇಂದ್ರಗಳ ನಿಲುಗಡೆಗೆ ಸ್ಥಳ ಗುರುತಿಸಿದೆ. ಪ್ರತಿದಿನ ಬೆಳಗ್ಗೆ 10.30ರಿಂದ ಮಧ್ಯಾಹ್ನ 2.30ರವರೆಗೆ ಮೂಗು ಮತ್ತು ಗಂಟಲ ದ್ರವದ ಪ್ರಯೋಗಾಲಯದ ಮಾದರಿಯನ್ನು ಉಚಿತವಾಗಿ ಸಂಗ್ರಹಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ ತಿಳಿಸಿದ್ದಾರೆ.
ವಾಹನ ನಿಲುಗಡೆ ಸ್ಥಳಗಳು: ಹುಬ್ಬಳ್ಳಿಯ ಮಹಾನಗರ ಪಾಲಿಕೆ ಆವರಣ, ಹಳೇ ಬಸ್ ನಿಲ್ದಾಣ, ವಲಯ ಕಚೇರಿ 10 ಹಾಗೂ ಗೋಕುಲ ರಸ್ತೆಯ ಅರ್ಬನ್ ಓಯಾಸಿಸ್ ಮಾಲ್ ಹತ್ತಿರ.
ಧಾರವಾಡದ ಜರ್ಮನ್ ಆಸ್ಪತ್ರೆ, ರಾಮನಗೌಡರ ಆಸ್ಪತ್ರೆ ಆವರಣ ಹಾಗೂ ಕರ್ನಾಟಕ ಕಾಲೇಜು ಎದುರು.
ಸಂಚಾರಿ ಸ್ವಾಬ್ ಸಂಗ್ರಹಣಾ ಕೇಂದ್ರಗಳ ಕುರಿತ ಮಾಹಿತಿಗಾಗಿ ಸಾರ್ವಜನಿಕರು ಧಾರವಾಡ ತಾಲೂಕು ಆರೋಗ್ಯಾಕಾರಿ ಡಾ. ಅಯ್ಯನಗೌಡ ಪಾಟೀಲ ಮೊ: 8277511264, 9448418508, ಹುಬ್ಬಳ್ಳಿ ತಾಲೂಕು ಆರೋಗ್ಯಾಕಾರಿ ಡಾ. ಪ್ರಭು ಬಿರಾದಾರ ಮೊ: 7019524517 ಹಾಗೂ ಮಹಾನಗರ ಪಾಲಿಕೆಯ ಡಾ. ಶ್ರೀಧರ ದಂಡಪ್ಪನವರ ಮೊ: 9689886103 ಸಂರ್ಪಸಬೇಕು ಎಂದು ಡಾ. ಮದೀನಕರ ತಿಳಿಸಿದ್ದಾರೆ.
ಗರ್ಭಿಣಿಯರ ಕೋವಿಡ್ ತಪಾಸಣೆಗೆ ಆದ್ಯತೆ
ಧಾರವಾಡ: ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ಕಾರ್ಯ ಉತ್ತಮವಾಗಿ ಸಾಗಿದೆ. ಜಿಲ್ಲಾದ್ಯಂತ ಸಂಚಾರಿ ಸ್ವಾಬ್ ಸಂಗ್ರಹಣೆ ಕೇಂದ್ರಗಳ ವಾಹನಗಳಲ್ಲಿ ಗರ್ಭಿಣಿಯರ ಕೋವಿಡ್ ತಪಾಸಣೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಷ್ಕರದಲ್ಲಿ ತೊಡಗಿದ್ದ ಎನ್ಎಚ್ಎಂ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಕರ್ತವ್ಯಕ್ಕೆ ಮರಳಿದ್ದಾರೆ. ಕೋವಿಡ್ ನಿಯಂತ್ರಣದ ಎಲ್ಲ ಮೊಬೈಲ್ ಆಪ್ ಹಾಗೂ ಸಾಫ್ಟ್್ಟೇರ್ಗಳ ದಾಖಲೀಕರಣದ ನವೀಕರಣ ಸಕಾಲಿಕವಾಗಿ ನಡೆಯಬೇಕು. ಜಿಲ್ಲೆಯಲ್ಲಿ ಸದ್ಯ ಸೋಂಕು ಪತ್ತೆ ಪ್ರಮಾಣ ಇಳಿಮುಖವಾಗಿದೆ. ಮಧುಮೇಹ, ರಕ್ತದೊತ್ತಡ ಮತ್ತಿತರ ರೋಗಲಕ್ಷಣ ಇರುವ ದುರ್ಬಲ ಆರೋಗ್ಯದ ವ್ಯಕ್ತಿಗಳ ಆರೋಗ್ಯ ಸಮೀಕ್ಷೆ ನಿರಂತರವಾಗಿ ನಡೆಯಬೇಕು ಎಂದರು.
ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಮನೆಗಳಲ್ಲಿ ಪ್ರತ್ಯೇಕವಾಗಿರುವ ಸೋಂಕಿತರ ಆರೋಗ್ಯದ ಮೇಲೆ ನಿಗಾ ವಹಿಸುವ ಕಾರ್ಯ ನಿರಂತರವಾಗಿರಬೇಕು. ಲಕ್ಷಣಗಳು ಕಂಡುಬಂದರೆ ಅವರನ್ನು ಕೂಡಲೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಬೇಕು. ಜಿಲ್ಲೆಯ ಆಸ್ಪತ್ರೆಗಳಲ್ಲಿ ಸಾಕಷ್ಟು ಹಾಸಿಗೆಗಳು ಲಭ್ಯ ಇವೆ. ಚಿಕಿತ್ಸೆಯೂ ಉತ್ತಮವಾಗಿದೆ ಎಂದರು. ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.