ಜಿಲ್ಲೆ

ಜಿಲ್ಲೆಯಲ್ಲಿ 12.39 ಮಿ.ಮೀ. ಮಳೆ

ಮಡಿಕೇರಿ: ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 12.39 ಮಿ.ಮೀ. ಮಳೆಯಾಗಿದೆ.

ಕಳೆದ ವರ್ಷ 12.47 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿವರೆಗೆ 111.89 ಮಿ.ಮೀ. ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 60.72 ಮಿ.ಮೀ. ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಸರಾಸರಿ 23.50 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ 3.57 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ 10.10 ಮಿ.ಮೀ. ಮಳೆಯಾಗಿದೆ.

ಹೋಬಳಿವಾರು: ಮಡಿಕೇರಿ ಕಸಬಾ 16.20, ನಾಪೋಕ್ಲು 20.40, ಸಂಪಾಜೆ 19.40, ಭಾಗಮಂಡಲ 38, ವಿರಾಜಪೇಟೆ ಕಸಬಾ 7, ಹುದಿಕೇರಿ 4, ಶ್ರೀಮಂಗಲ 2, ಪೊನ್ನಂಪೇಟೆ 5.40, ಅಮ್ಮತ್ತಿ 3, ಸೋಮವಾರಪೇಟೆ ಕಸಬಾ 4.60, ಶನಿವಾರಸಂತೆ 15.60, ಶಾಂತಳ್ಳಿ 15.20, ಕೊಡ್ಲಿಪೇಟೆ 20.20, ಕುಶಾಲನಗರ 1.80, ಸುಂಟಿಕೊಪ್ಪ 3.20 ಮಿ.ಮೀ.ಮಳೆಯಾಗಿದೆ.