ಜಿಲ್ಲೆ

ಜಿಲ್ಲೆಯಲ್ಲಿ 1.29 ಲಕ್ಷ ಜನರಿಗೆ ಕೋವಿಡ್ ಪರೀಕ್ಷೆ

ಕಾರವಾರ: ಜಿಲ್ಲೆಯಲ್ಲಿ ಇದುವರೆಗೆ 1,29,400 ಜನರ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ 11,705 ಜನರಿಗೆ ಪಾಸಿಟಿವ್ ಬಂದಿದೆ. 10287 ಜನ ಗುಣವಾಗಿದ್ದು, 149 ಜನ ಮೃತಪಟ್ಟಿದ್ದಾರೆ.

ಆರ್​ಟಿ-ಪಿಸಿಆರ್ ಯಂತ್ರದಲ್ಲಿ 75,955, ರ್ಯಾಪಿಡ್ ಆಂಟಿಜನ್ ಕಿಟ್​ನಿಂದ 53,445 ಮಾದರಿ ಪರೀಕ್ಷೆ ಮಾಡಲಾಗಿದೆ. ಇದುವರೆಗೆ ಕಾರವಾರದಲ್ಲಿ 1623, ಅಂಕೋಲಾದಲ್ಲಿ 737, ಕುಮಟಾದಲ್ಲಿ 1533, ಹೊನ್ನಾವರದಲ್ಲಿ 1070, ಭಟ್ಕಳದಲ್ಲಿ 1062, ಶಿರಸಿಯಲ್ಲಿ 1349, ಸಿದ್ದಾಪುರದಲ್ಲಿ 547, ಯಲ್ಲಾಪುರದಲ್ಲಿ 737, ಮುಂಡಗೋಡಿನಲ್ಲಿ 1104, ದಾಂಡೇಲಿ ಮತ್ತು ಹಳಿಯಾಳ ಸೇರಿ 1774, ಜೊಯಿಡಾದಲ್ಲಿ 219 ಜನರಿಗೆ ಪಾಸಿಟಿವ್ ಬಂದಿದೆ.

ಶಿರಸಿ ಮತ್ತು ಕಾರವಾರದಲ್ಲಿ ತಲಾ 17, ಅಂಕೋಲಾದಿಂದ 8, ಭಟ್ಕಳ ಹಾಗೂ ಕುಮಟಾದಲ್ಲಿ ತಲಾ 18, ಹೊನ್ನಾವರದಲ್ಲಿ 19, ಸಿದ್ದಾಪುರದಲ್ಲಿ 4, ಯಲ್ಲಾಪುರದಲ್ಲಿ 6, ಮುಂಡಗೋಡಿನಲ್ಲಿ 11, ಹಳಿಯಾಳ ಮತ್ತು ದಾಂಡೇಲಿ ಸೇರಿ 30 ಜೊಯಿಡಾದಲ್ಲಿ ಒಬ್ಬರು ಕೋವಿಡ್​ನಿಂದ ಸಾವನ್ನಪ್ಪಿದ್ದಾರೆ.

72 ಜನರಿಗೆ ಸೋಂಕು:

ಗುರುವಾರದ ವರದಿಯಂತೆ ಜಿಲ್ಲೆಯಲ್ಲಿ 72 ಜನರಿಗೆ ಕರೊನಾ ಸೋಂಕು ತಗುಲಿದೆ. 102 ಜನ ಗುಣವಾಗಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ. ಕಾರವಾರದಲ್ಲಿ 12, ಭಟ್ಕಳ ಮತ್ತು ಅಂಕೋಲಾದಲ್ಲಿ 4, ಕುಮಟಾದಲ್ಲಿ 8, ಹೊನ್ನಾವರದಲ್ಲಿ 10, ಶಿರಸಿಯಲ್ಲಿ 3, ಸಿದ್ದಾಪುರದಲ್ಲಿ 5, ಯಲ್ಲಾಪುರದಲ್ಲಿ 2, ಮುಂಡಗೋಡಿನಲ್ಲಿ 24 ಜನರಿಗೆ ಸೋಂಕು ತಗುಲಿದೆ. ಕುಮಟಾದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಕಾರವಾರದಲ್ಲಿ 10, ಅಂಕೋಲಾದಲ್ಲಿ 8, ಕುಮಟಾದಲ್ಲಿ 27, ಹೊನ್ನಾವರದಲ್ಲಿ 7, ಭಟ್ಕಳ, ಯಲ್ಲಾಪುರ ಹಾಗೂ ಜೊಯಿಡಾದಲ್ಲಿ 1, ಶಿರಸಿಯಲ್ಲಿ 12, ಮುಂಡಗೋಡಿನಲ್ಲಿ 28, ಹಳಿಯಾಳದಲ್ಲಿ 5 ಜನ ಗುಣವಾಗಿದ್ದಾರೆ. 1269 ಸಕ್ರಿಯ ಪ್ರಕರಣಗಳಿವೆ.