ಜಿಲ್ಲೆ

ಜಿಲ್ಲೆಯ ಬೆಂಬಿಡದ ಕರೊನಾ ಭೂತ

ಧಾರವಾಡ: ಜಿಲ್ಲೆಯಲ್ಲಿ ಮಂಗಳವಾರ 84 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2327ಕ್ಕೆ ಏರಿದೆ. ಮಂಗಳವಾರ 5 ಜನ ಮೃತಪಟ್ಟಿದ್ದು, ಒಟ್ಟು 73 ಜನ ಕರೊನಾಕ್ಕೆ ಬಲಿಯಾಗಿದ್ದಾರೆ. ಕೆಲ ದಿನದಿಂದ 100ರ ಗಡಿಯಾಚೆ ಇರುತ್ತಿದ್ದ ಪ್ರಕರಣಗಳ ಸಂಖ್ಯೆ, ಶತಕಕ್ಕಿಂತ ಹಿಂದೆ ಇರುವುದು ಸ್ವಲ್ಪ ಸಮಾಧಾನದ ಸಂಗತಿಯಾಗಿದೆ.

ಮಂಗಳವಾರ ದೃಢಪಟ್ಟ 84 ಪ್ರಕರಣಗಳ ಮಾಹಿತಿ ತಾಲೂಕುವಾರು ಇಂತಿದೆ.

ಧಾರವಾಡ ತಾಲೂಕು: ಜನ್ನತ್​ನಗರ 4ನೇ ಕ್ರಾಸ್​ನ 28 ವರ್ಷದ ಯುವತಿ, ವಿನಾಯಕನಗರ 3ನೇ ಕ್ರಾಸ್​ನ 38 ವರ್ಷದ ಪುರುಷ, ಗೊಲ್ಲರ ಓಣಿಯ 32 ವರ್ಷದ ಪುರುಷ, ಕಮಲಾಪುರ ಬಾಳಗಿ ಓಣಿಯ 23 ವರ್ಷದ ಯುವಕ, ಎಂ.ಜಿ. ಬ್ಯಾಂಕ್​ನ 58 ವರ್ಷದ ಪುರುಷ, ಕೃಷಿ ವಿವಿಯ 25, 23 ವರ್ಷದ ಯುವರಕರು, ಮದಾರಮಡ್ಡಿ ತಳವಾರ ಓಣಿಯ 23 ವರ್ಷದ ಯುವಕ, ಗರಗ ಗ್ರಾಮದ 18 ವರ್ಷದ ಯುವತಿ, ಸೈದಾಪುರ 8ನೇ ಕ್ರಾಸ್​ನ 14 ವರ್ಷದ ಬಾಲಕ, ಮೃತ್ಯುಂಜಯನಗರದ 45 ವರ್ಷದ ಮಹಿಳೆ, ಜಿಲ್ಲಾ ಆಸ್ಪತ್ರೆ ಸ್ಟಾಫ್ ನರ್ಸ್ 53 ವರ್ಷದ ಮಹಿಳೆ, ಸಂತೋಷ ನಗರದ 29ರ ಯುವತಿ, ಗಣೇಶ ನಗರದ 5 ವರ್ಷದ ಬಾಲಕ, ಎಸ್​ಬಿಐ ಕಾಲನಿಯ 40 ವರ್ಷದ ಪುರುಷ, ಬನಶಂಕರಿ ನಗರದ 91ರ ವೃದ್ಧೆ, ಭೂಸಪ್ಪ ಚೌಕ್​ನ 52 ವರ್ಷದ ಪುರುಷ, ಗಾಂಧಿನಗರದ 38 ವರ್ಷದ ಪುರುಷ, ಎಸ್​ಡಿಎಂ ಆಸ್ಪತ್ರೆಯ 22ರ ಯುವಕ, 27ರ ಯುವತಿ, ಗಾಂಧಿನಗರದ 42 ವರ್ಷದ ಪುರುಷ, ಕೆಲಗೇರಿ ರಸ್ತೆಯ 31ರ ಯುವಕ, ಶೆಟ್ಟರ್ ಕಾಲನಿಯ 15 ವರ್ಷದ ಬಾಲಕ, 26 ವರ್ಷದ ಯುವಕ, ಹತ್ತಿಕೊಳ್ಳ ಶ್ರೀರಾಮನಗರದ 58ರ ಪುರುಷ, ಮೃತ್ಯುಂಜಯನಗರದ 26ರ ಯುವಕ, ಮೆಹಬೂಬನಗರದ 32 ವರ್ಷದ ಪುರುಷ, ಆಂಜನೇಯ ನಗರದ 52 ವರ್ಷದ ಮಹಿಳೆ, ಕೊಪ್ಪದಕೇರಿ ಜನತಾ ಪ್ಲಾಟ್​ನ 43 ವರ್ಷದ ಮಹಿಳೆ, ಮದಿಹಾಳದ 44 ವರ್ಷದ ಪುರುಷ, ಸಪ್ತಾಪುರದ 57ರ ಪುರುಷ, ಗುಡಿಹಾಳ ರಸ್ತೆಯ 42 ವರ್ಷದ ಮಹಿಳೆ, ಆಝಾದ್ ರಸ್ತೆಯ 71 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ.

ಹುಬ್ಬಳ್ಳಿ ತಾಲೂಕು: ದೇಶಪಾಂಡೆ ನಗರದ 45 ವರ್ಷದ ಪುರುಷ, ಮಂಗಳಾ ಓಣಿಯ 51 ವರ್ಷದ ಮಹಿಳೆ, 53 ವರ್ಷದ ಪುರುಷ, ಇಂಗಳಹಳ್ಳಿ ಗ್ರಾಮ ತೇರಿನ ಓಣಿಯ 41 ವರ್ಷದ ಮಹಿಳೆ, ಗೋಕುಲ ರಸ್ತೆ ಮಹಾಲಕ್ಷ್ಮೀ ಲೇಔಟ್​ನ 73ರ ವೃದ್ಧೆ, ವಿದ್ಯಾನಗರದ 38 ವರ್ಷದ ಪುರುಷ, ಕಿಮ್್ಸ ಆಸ್ಪತ್ರೆಯ 24ರ ಯುವಕ, ವಿದ್ಯಾನಗರದ 51 ವರ್ಷದ ಪುರುಷ, ನಾಗಶೆಟ್ಟಿಕೊಪ್ಪದ 62 ವರ್ಷದ ವೃದ್ಧೆ, ಕುಸುಗಲ್ ಗ್ರಾಮದ 45ರ ಪುರುಷ, ಕಿಮ್್ಸ ಕ್ವಾರ್ಟ್​ಸ್ನ 38 ವರ್ಷದ ಮಹಿಳೆ, ಬಳ್ಳಾರಿ ಗಲ್ಲಿಯ 63ರ ವೃದ್ಧ, ಕೆ.ಬಿ.ನಗರದ 38 ವರ್ಷದ ಮಹಿಳೆ, ಆದರ್ಶನಗರದ 65 ವರ್ಷದ ವೃದ್ಧ, ಇಎಸ್​ಐ ಕ್ವಾರ್ಟ್​ಸ್ 46 ವರ್ಷದ ಪುರುಷ, ವೀರಭದ್ರೇಶ್ವರ ಓಣಿಯ 48 ವರ್ಷದ ಮಹಿಳೆ, ಮಾರುತಿನಗರದ 20ರ ಯುವಕ, ಕಿಮ್್ಸ ಆವರಣದ 20 ವರ್ಷದ ಯುವಕ, ವಿನೂತನಾ ಕಾಲನಿ 66 ವರ್ಷದ ವೃದ್ಧ, ಸಿದ್ಧಾರೂಢ ಮಠ ಬಳಿಯ 68 ವರ್ಷದ ವೃದ್ಧೆ, ಗೂಡ್​ಶೆಡ್ ರಸ್ತೆಯ 54ರ ಪುರುಷ, ಕುಸುಗಲ್ ರಸ್ತೆಯ 35ರಯುವಕ, ಅಯೋಧ್ಯಾನಗರದ 26ರ ಯುವತಿ, ಕಮರಿಪೇಟ ಗವಿ ಓಣಿಯ 41 ವರ್ಷದ ಮಹಿಳೆ, ಅಂಚಟಗೇರಿಯ 70 ವರ್ಷದ ವೃದ್ಧೆ, ವಿದ್ಯಾನಗರದ 50 ವರ್ಷದ ಪುರುಷ, ವೀರಭದ್ರೇಶ್ವರ ಓಣಿಯ 39 ವರ್ಷದ ಪುರುಷ, ಗೋಪನಕೊಪ್ಪದ 30, 58 ವರ್ಷದ ಮಹಿಳೆಯರು, 34 ವರ್ಷದ ಪುರುಷ, ಜೆ.ಪಿ. ನಗರದ 72 ವರ್ಷದ ವೃದ್ಧ, ಹೊಸೂರಿನ 43 ವರ್ಷದ ಇಬ್ಬರು ಪುರುಷರು, ವಿಶಾಲನಗರದ 38 ವರ್ಷದ ಪುರುಷ, ಹುಬ್ಬಳ್ಳಿಯ 25 ವರ್ಷದ ಇಬ್ಬರು ಯುವತಿಯರು, 31 ವರ್ಷದ ಯುವತಿ, 43 ವರ್ಷದ ಇಬ್ಬರು, 48 ವರ್ಷದ ಒಬ್ಬ ಪುರುಷ, 22 ವರ್ಷದ ಯುವಕನಿಗೆ ಸೋಂಕು ಅಂಟಿದೆ.

ನವಲಗುಂದ ತಾಲೂಕು ಭದ್ರಾಪುರದ 32 ವರ್ಷದ ಪುರುಷ, 29 ವರ್ಷದ ಯುವಕ, ಕಲಘಟಗಿ ತಾಲೂಕು ಮಿಶ್ರಿಕೋಟಿ ಗ್ರಾಮದ 62 ವರ್ಷದ ವೃದ್ಧ, ಸಂಶಿ ಗ್ರಾಮದ ಗೌಡರ ಓಣಿಯ 52 ವರ್ಷದ ಮಹಿಳೆ, ಗದಗ ಜಿಲ್ಲೆ ನರಗುಂದದ 51 ವರ್ಷದ ಪುರುಷ, ಗಜೇಂದ್ರಗಡ ಬಸವೇಶ್ವರನಗರದ 75 ವರ್ಷದ ವೃದ್ಧ, ಉತ್ತರ ಕನ್ನಡ ಜಿಲ್ಲೆ ಸೋನಾರವಾಡದ 43 ವರ್ಷದ ಪುರುಷ, ದಾಂಡೇಲಿಯ 74 ವರ್ಷದ ವೃದ್ಧೆ, ಹಾವೇರಿ ಜಿಲ್ಲೆ ಸವಣೂರಿನ 1 ವರ್ಷದ ಮಗು ಹಾಗೂ ಬಳ್ಳಾರಿ ಜಿಲ್ಲೆ ಮೈಲಾರದ 34 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಪಾಲಿಕೆ ಜಿಎ ಶಾಖೆ ಸೀಲ್​ಡೌನ್

ಹುಬ್ಬಳ್ಳಿ: ಸಿಬ್ಬಂದಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿರುವ ಸಾಮಾನ್ಯ ಆಡಳಿತ (ಜಿಎ) ಶಾಖೆಯನ್ನು ಮಂಗಳವಾರ ಸೀಲ್​ಡೌನ್ ಮಾಡಲಾಗಿದೆ.

ಜಿಎ ಶಾಖೆಯ ಸಿಬ್ಬಂದಿಗೆ ಕರೊನಾ ಸೋಂಕು ಇರುವುದು ಸೋಮವಾರ ದೃಢಪಟ್ಟಿತ್ತು. ಅನಾರೋಗ್ಯದ ನಿಮಿತ್ತ ಕಳೆದ 4 ದಿನಗಳಿಂದ ಅವರು ಕಚೇರಿಗೆ ಬಂದಿರಲಿಲ್ಲ. ಆದರೂ ಶಾಖೆಯ ಉಳಿದ ಸಿಬ್ಬಂದಿ ಹಾಗೂ ಸಂಪರ್ಕಕ್ಕೆ ಒಳಪಟ್ಟವರಿಗೆ ಆತಂಕ ಶುರುವಾಗಿದೆ. ಪ್ರಾಥಮಿಕ ಸಂರ್ಪತರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. 2 ದಿನ ಜಿಎ ಶಾಖೆ ಬಂದ್ ಇರಲಿದೆ.

ಇದೇ ರೀತಿ ಪಾಲಿಕೆ ಒಡೆತನದ ಗಣೇಶಪೇಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಗಳವಾರ ಹಾಗೂ ಬುಧವಾರ ಬಂದ್ ಇಡಲಾಗಿದೆ. ಇಲ್ಲಿಯ ಸಿಬ್ಬಂದಿಯೊಬ್ಬರಿಗೆ ಕರೊನಾ ಇರುವುದು ದೃಢಪಟ್ಟಿರುತ್ತದೆ.

ಹಲವರಿಗೆ ಪಾಸಿಟಿವ್: ಇಲ್ಲಿಯವರೆಗೆ ಮಹಾನಗರ ಪಾಲಿಕೆಯ 12ಕ್ಕೂ ಹೆಚ್ಚು ಸಿಬ್ಬಂದಿಗೆ ಕರೊನಾ ದೃಢಪಟ್ಟಿದೆ. 6 ಜನ ಪೌರ ಕಾರ್ವಿುಕರು, ಇಬ್ಬರು ಆರೋಗ್ಯ ನಿರೀಕ್ಷಕರು, ಇಬ್ಬರು ಅಧೀಕ್ಷಕರು, ಒಬ್ಬ ವಾಹನ ಚಾಲಕ, ಜಿಎ ಶಾಖೆ ಸಿಬ್ಬಂದಿಗೆ ಕರೊನಾ ಇರುವುದು ದೃಢ ಪಟ್ಟಿದೆ. ‘ಕರ್ತವ್ಯದ ವೇಳೆ ಅಗತ್ಯ ಸುರಕ್ಷಾ ಕ್ರಮಗಳನ್ನು ಅನುಸರಿಸುವಂತೆ ನಮ್ಮ ಸಿಬ್ಬಂದಿಗೆ ಕಾಲ ಕಾಲಕ್ಕೆ ಹೇಳಿದ್ದೇವೆ. ನಮ್ಮ ಸಿಬ್ಬಂದಿ ನಿತ್ಯ ನೇರವಾಗಿ ಜನ ಸಂಪರ್ಕಕ್ಕೆ ಒಳಪಡುವುದರಿಂದ ಕರೊನಾ ಆತಂಕ ಇರುತ್ತದೆ. ಇದೀಗ ಅವಳಿ ನಗರದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಫೇಸ್ ಶೀಲ್ಡ್ ಮಾಸ್ಕ್ ಬಳಕೆ ಮಾಡುವಂತೆ ಸೂಚಿಸಿದ್ದೇವೆ’ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.

ಕರೊನಾದಿಂದ ಮಾಜಿ ಯೋಧ ಸಾವು

ಹುಬ್ಬಳ್ಳಿ: ಪಾಕಿಸ್ತಾನದ ವಿರುದ್ಧ ಎರಡೂ (1965, 1971) ಯುದ್ಧಗಳಲ್ಲಿ ಭಾಗಿಯಾಗಿ ಶೌರ್ಯ ಮೆರೆದಿದ್ದ ಸುಬೇದಾರ್ ರಂಗಪ್ಪ ಕೌಡಿಮಟ್ಟಿ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. 76 ವಯೋಮಾನದ ಅವರು ಜು. 16ರಂದು ಉಸಿರಾಟದ ಸಮಸ್ಯೆಯಿಂದ ಎಸ್​ಡಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ಬಾರಿಯೂ ನೆಗೆಟಿವ್ ಬಂದಿದ್ದ ಅವರ ಕೋವಿಡ್ ವರದಿ ಮೂರನೇ ಬಾರಿ ಪಾಸಿಟಿವ್ ಬಂದಿದೆ. ಮೂಲತಃ ಬಾದಾಮಿ ತಾಲೂಕು ಹಂಗರಗಿ ಗ್ರಾಮದವರಾದ ಅವರು 28 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. 30 ವರ್ಷಗಳಿಂದ ಹುಬ್ಬಳ್ಳಿಯ ವಿದ್ಯಾನಗರ ಲೋಕಪ್ಪನಹಕ್ಕಲ್​ದಲ್ಲಿ ನೆಲೆಸಿದ್ದರು. ಅವರ ಇಬ್ಬರು ಪುತ್ರರು ಕೂಡ ಸೇನೆಯಲ್ಲಿದ್ದಾರೆ. ಒಬ್ಬ ಪುತ್ರಿ ಇದ್ದಾರೆ. ಸುಬೇದಾರ್ ರಂಗಪ್ಪ ಅವರ ಕೆಚ್ಚು, ದೇಶಾಭಿಮಾನ ಹೇಗಿತ್ತೆಂದರೆ, ಕಾರ್ಗಿಲ್ ಕದನ ಆರಂಭವಾದಾಗ ಮೂರನೇ ಬಾರಿ ಪಾಕ್ ವಿರುದ್ಧ ಹೋರಾಡಲು ತಮಗೆ ಅವಕಾಶ ನೀಡುವಂತೆ ಅವರು ಸೇನೆಯನ್ನು ಕೋರಿದ್ದರು.