ಜಿಲ್ಲೆ

ಜಿಲ್ಲೆಯ ಆರ್ಥಿಕ ಬೆನ್ನೆಲುಬು ತಿಪಟೂರು

ತುಮಕೂರು ಡೆಸ್ಕ್

ವಿಜಯವಾಣಿ ಸಂಪಾದಕ ಚನ್ನೇಗೌಡ ಬಣ್ಣನೆ, ಮೈಸೂರು ಆನಂದ್​ಗೆ ಸಾಹಿತ್ಯ ಕಲ್ಪತರು ಪ್ರಶಸ್ತಿ ಪ್ರದಾನ

ತಿಪಟೂರು: ಜಿಲ್ಲೆಯ ಆರ್ಥಿಕ ಬೆನ್ನೆಲುಬಾಗಿರುವ ತಿಪಟೂರಿನ ಬಯಲು ಸೀಮೆಯಲ್ಲಿ ಸಾಂಸತಿಕ ಕೃಷಿ ನಡೆದಿರುವುದು ಸ್ತುತ್ಯರ್ಹ ಎಂದು ವಿಜಯವಾಣಿ ಪ್ರಧಾನ ಸಂಪಾದಕ ಕೆ.ಎನ್​.ಚನ್ನೇಗೌಡ ಬಣ್ಣಿಸಿದರು.

ನಗರದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಭಾನುವಾರ ಸಂಜೆ ಬಯಲುಸೀಮೆ ಸಾಮಾಜಿಕ, ಸಾಂಸತಿಕ ಸಂದಿಂದ ಆಯೋಜಿಸಿದ್ದ ಭಾವಗೀತೆ ಗಾಯನ, ಸಾಹಿತ್ಯ ಕಲ್ಪತರು ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುದ್ಧದ ಕಾಮೋರ್ಡದ ಸಂದರ್ಭ ನಾಳಿನ ಸುದ್ದಿಯ ಬಗ್ಗೆ ಯೋಚಿಸುತ್ತಿರುವಾಗ ಹಿರಿಯ ಪತ್ರಕರ್ತರಾದ ವೆಂಕಟನಾರಾಯಣ್​ ನನಗೆ ಧೈರ್ಯ ತುಂಬಿ ಇಲ್ಲಿಗೆ ಕರೆ ತಂದಿದ್ದಾರೆ. ಪುಣ್ಯಕ್ಕೆ ಇದೇ ಸಂದರ್ಭ ಕದನ ವಿರಾಮ ೂಷಣೆಯಾಗಿರುವುದು ಸ್ವಲ್ಪ ನೆಮ್ಮದಿ ತಂದಿದೆ. ಬಯಲುಸೀಮೆ ಸಾಮಾಜಿಕ ಹಾಗೂ ಸಾಂಸತಿಕ ಸಂ ಕಳೆದ 5 ವರ್ಷಗಳಿಂದ ನಾಡಿನ ಪ್ರಸಿದ್ಧ ಕಲಾವಿದರನ್ನು ಗುರುತಿಸಿ "ಸಾಹಿತ್ಯ ಕಲ್ಪತರು' ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಅಭಿನಂದನೀಯ. ಮುಂದೆ "ಕನ್ನಡದ ಕಲ್ಪತರು' ಎಂಬ ಹೆಸರಿನಲ್ಲಿ ಪ್ರಶಸ್ತಿ ನೀಡಿದರೆ ಪ್ರಶಸ್ತಿಗೆ ಮತ್ತಷ್ಟು ಮೆರುಗು ಬರುತ್ತದೆ ಎಂದು ಸಲಹೆ ನೀಡಿದರು.

ದೇಶ ಕಾಯುವ ಸೈನಿಕರಿಲ್ಲದಿದ್ದರೆ ನಾವಿಂದು ನಿರ್ಭೀತಿಯಿಂದ ಇಲ್ಲಿ ಸೇರಲು ಸಾಧ್ಯವಾಗುತ್ತಿರಲಿಲ್ಲ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ದೇಶವಾಸಿಗಳಿಗೆ ನೆಮ್ಮದಿಯ ವಾತಾವರಣ ಕಲ್ಪಿಸುತ್ತಿರುವ ದೇಶದ ಹೆಮ್ಮೆಯ ಸೈನಿಕರಿಗೆ ಈ ಕಾರ್ಯಕ್ರಮದ ಮೂಲಕ ಅಭಿನಂದನೆ ಸಲ್ಲಿಸೋಣ ಎಂದರು.

ಸಂದ ಪ್ರಧಾನ ಕಾರ್ಯದರ್ಶಿ ಎನ್​. ಭಾನುಪ್ರಶಾಂತ್​ ಮಾತನಾಡಿ, ನಾಡಿನ ಹೆಸರಾಂತ ಕಲಾವಿದರನ್ನು ಗುರುತಿಸಿ ಸಾಹಿತ್ಯ ಕಲ್ಪತರು ಪ್ರಶಸ್ತಿ ನೀಡುವ ಕಾರ್ಯಕ್ರಮ 5 ವರ್ಷಗಳಿಂದ ಮುಂದುವರಿದಿದೆ ಎಂದು ತಿಳಿಸಿದರು.

ಪ್ರಸಿದ್ಧ ಮಿಮಿಕ್ರಿ ಹಾಗೂ ಹಾಸ್ಯ ಕಲಾವಿದ ಮೈಸೂರು ಆನಂದ್​ ಅವರಿಗೆ ಸಾಹಿತ್ಯ ಕಲ್ಪತರು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಧ ಅಧ್ಯಕ್ಷ ಎಚ್​.ಸಿ.ನಾಗರಾಜು, ಎಸ್​ಡಿಎಂಇ ಸೊಸೈಟಿಯ ಸಂಹವನ ಮುಖ್ಯಸ್ಥ ಅಶ್ವಿನ್​ ಗೌತಮ್​, ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿ ಮುಖ್ಯಸ್ಥ ಆರ್​.ಡಿ.ರವೀಂದ್ರ, ರಾಷ್ಟ್ರೀಯ ವಾಲಿಬಾಲ ತೀರ್ಪುಗಾರ ಎಂ.ಬಿ.ಲೋಕೇಶ್​, ತಾಪಂ ಇಒ ಎಚ್​.ಎಂ.ಸುದರ್ಶನ್​. ಗ್ರೇಡ್​&2 ತಹಸೀಲ್ದಾರ್​ ಎಸ್​.ಕೆ.ಜಗನ್ನಾಥ್​ ಇದ್ದರು.