ಜಿಲ್ಲೆ

ಜಿಲ್ಲೆಯ 4500 ಕ್ಕೂ ಅಧಿಕ ಮಕ್ಕಳಲ್ಲಿ ರಕ್ತಹೀನತೆ

ವಿಜಯವಾಣಿ ಸುದ್ದಿಜಾಲ ಕಾರವಾರ
ಜಿಲ್ಲೆಯ 4519 ಮಕ್ಕಳಲ್ಲಿ ರಕ್ತ ಹೀನತೆ, 1859 ಮಕ್ಕಳಲ್ಲಿ ಅಪೌಷ್ಠಿಕತೆ ಪತ್ತೆಯಾಗಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಪ್ರತಿ ವರ್ಷ 18 ವರ್ಷದೊಳಗಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಆರೋಗ್ಯ ಇಲಾಖೆ ಮಾಡುತ್ತದೆ. ಈ ತಪಾಸಣೆಯ ವರದಿಯ ಜಿಲ್ಲೆಯಲ್ಲಿ ಮಕ್ಕಳಲ್ಲಿನ ಆರೋಗ್ಯ ಸಮಸ್ಯೆಯ ಗಂಭೀರತೆಯನ್ನು ಹೊರ ಹಾಕಿದೆ.
ಜಿಲ್ಲೆಯ ಸರ್ಕಾರಿ ಅಂಗನವಾಡಿ, ಶಾಲೆ ಹಾಗೂ ಹೈಸ್ಕೂಲ್‌ಗಳಲ್ಲಿ ಓದುತ್ತಿರುವ 2.20 ಲಕ್ಷ ವಿದ್ಯಾರ್ಥಿಗಳಲ್ಲಿ ನವೆಂಬರ್ ಅಂತ್ಯದವರೆಗೆ 1.33 ಲಕ್ಷ ವಿದ್ಯಾರ್ಥಿಗಳ (ಶೇ.93.15) ರಷ್ಟು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಗಿದೆ. ಅದರಲ್ಲಿ ಹಲವು ಮಕ್ಕಳಿಗೆ ಗಂಭೀರ ಸಮಸ್ಯೆ ಇರುವುದು ಕಂಡುಬAದಿದೆ. ಮುಖ್ಯವಾಗಿ ರಕ್ತ ಹೀನತೆ ಹಾಗೂ ಅಗತ್ಯಕ್ಕಿಂತ ಕಡಿಮೆ ತೂಕ ಇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ.
2346 ಮಕ್ಕಳು ಅನಿಮಿಯಾದಿಂದ ಬಳಲುತ್ತಿದ್ದಾರೆ. 76 ಮಕ್ಕಳಲ್ಲಿ ರಕ್ತಹೀನತೆಯ ಗಂಭೀರ ಸಮಸ್ಯೆ ಇದೆ. 2099 ಮಕ್ಕಳ ರಕ್ತದಲ್ಲಿ ಅಗತ್ಯ ಅಂಶಗಳ ಕೊರತೆ ಇದೆ. 923 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದರೆ 936 ಮಕ್ಕಳು ಸಾಮಾನ್ಯ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. 3506 ಮಕ್ಕಳು ತಮ್ಮ ವಯಸ್ಸಿಗೆ ತಕ್ಕಂತ ದೈಹಿಕ ಬೆಳವಣಿಗೆ ಹೊಂದಿಲ್ಲ ಎಂದು ವೈದ್ಯರು ಗುತುತಿಸಿದ್ದಾರೆ. 678 ಮಕ್ಕಳಲ್ಲಿ ವಿಟಾಮಿನ್ ಬಿ' ಕಾಂಪ್ಲೆಕ್ಸ್, 294 ಮಕ್ಕಳಲ್ಲಿ ವಿಟಾಮಿನ್ಡಿ' ಕೊರತೆ ಇದೆ ಎಂದು ಗುರುತಿಸಲಾಗಿದೆ.
3800 ಕ್ಕೂ ಅಽಕ ಮಕ್ಕಳಲ್ಲಿ ದೃಷ್ಟಿ ದೌರ್ಬಲ್ಯ:
226 ಮಕ್ಕಳಲ್ಲಿ ಹುಟ್ಟಿನಿಂದಲೇ ಹೃದಯದ ಕಾಯಿಲೆ ಇರುವುದು ಪತ್ತೆಯಾಗಿದ್ದು ಅದರಲ್ಲಿ ಕುಮಟಾದ 5, ಭಟ್ಕಳ ಅಂಕೋಲಾದ ತಲಾ 1, ಹಳಿಯಾಳ, ಜೊಯಿಡಾದ ತಲಾ 1 ಸೇರಿ 11 ಮಕ್ಕಳಲ್ಲಿ ಗಂಭೀರ ಹೃದಯದ ಸಮಸ್ಯೆಯಿದ್ದು, ಅವರಲ್ಲಿ 7 ವಿದ್ಯಾರ್ಥಿಗಳಿಗೆ ಈಗಾಗಲೇ ಹೃದಯದ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
3828 ಮಕ್ಕಳಲ್ಲಿ ದೃಷ್ಟಿ ದೌರ್ಬಲ್ಯವಿದ್ದು, ಅದರಲ್ಲಿ 1537 ಮಕ್ಕಳಲ್ಲಿ ಕಣ್ಣಿನ ತೀವ್ರ ಸಮಸ್ಯೆ ಇರುವುದು ಪತ್ತೆಯಾಗಿದೆ. ಈಗಾಗಲೇ 3 ವಿದ್ಯಾರ್ಥಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. 1280 ಮಕ್ಕಳಿಗೆ ಕನ್ನಡಕ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು 256 ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ. 116 ಮಕ್ಕಳಲ್ಲಿ ಕಿವಿಯ ಸಮಸ್ಯೆ ಇದ್ದು, 23 ಮಕ್ಕಳಿಗೆ ಶಸ್ತç ಚಿಕಿತ್ಸೆ ಮಾಡಬೇಕಾಗಬಹುದು ಎಂದು ವೈದ್ಯರು ಗುರುತಿಸಿದ್ದಾರೆ.
713 ಡುಮ್ಮಣ್ಣರು
343 ಹುಡುಗರು, 370 ಹುಡುಗಿಯರು ಸೇರಿ 713 ಮಕ್ಕಳು ತಮ್ಮ ವಯಸ್ಸಿಗಿಂತ ಹೆಚ್ಚು ತೂಕ ಹೊಂದಿದ್ದಾರೆ `ಒಬೇಸಿಟಿ' ಎಂದು ಗುರುತಿಸಲಾಗಿದೆ. 19833 ವಿದ್ಯಾರ್ಥಿಗಳಲ್ಲಿ ಹಲ್ಲಿನ ತೊಂದರೆ ಇದೆ. 5482 ವಿದ್ಯಾರ್ಥಿಗಳಲ್ಲಿ ಚರ್ಮ ಸಂಬಂಧಿ ಕಾಯಿಲೆಗಳು, 2889 ವಿದ್ಯಾರ್ಥಿಗಳಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆ ಇದೆ ಎಂದು ಗುರುತಿಸಲಾಗಿದೆ.
*543 ಮಕ್ಕಳು ಕಲಿಕೆಯಲ್ಲಿ ಸಮಸ್ಯೆ ಹೊಂದಿದ್ದಾರೆ.
*26 ಮಕ್ಕಳು ಹೈಪರ್ ಆಕ್ಟಿವಿಟಿ ಡಿಸ್‌ಆರ್ಡರ್ ಹೊಂದಿದ್ದಾರೆ.
*43 ಮಕ್ಕಳು ಬಿಹೇವಿಯರ್ ಡಿಸ್ ಆರ್ಡರ್ ಹೊಂದಿದ್ದಾರೆ
*206 ಮಕ್ಕಳು ಮಾತನಾಡಲು ತೊಂದರೆಪಡುತ್ತಿದ್ದಾರೆ.


ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿ ಗುರುತಿಸಲಾದ ಗಂಭೀರ ಆರೋಗ್ಯ ಸಮಸ್ಯೆ ಇರುವ ವಿದ್ಯಾರ್ಥಿಗಳಿಗೆ ಉತ್ತಮ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ರಕ್ತಹೀನತೆ, ಅಪೌಷ್ಠಿಕತೆ, ವಿಟಾಮಿನ್‌ಗಳ ಕೊರತೆ ಇರುವ ಮಕ್ಕಳಿಗೆ ಆಯಾ ಸಂದರ್ಭಗಳಲ್ಲಿಯೇ ಮಾತ್ರೆಗಳನ್ನು ನೀಡಲಾಗುತ್ತದೆ. ಕಣ್ಣಿನ ಸಮಸ್ಯೆ ಇರುವ ಮಕ್ಕಳಿಗೆ ಶೀಘ್ರ ಕನ್ನಡಕ ನೀಡಲು ಕ್ರಮ ವಹಿಸಲಾಗುವುದು.
ಡಾ.ರಮೇಶ ರಾವ್
ಆರ್‌ಸಿಎಚ್‌ಒ, ಉತ್ತರ ಕನ್ನಡ

……….