ಯಾದಗಿರಿ: ರಾಜ್ಯದಲ್ಲಿನ ಪ್ರತಿ ಮನೆಗಳಲ್ಲೂ ಬೆಳಕು ಮೂಡಿಸುವ ಕೆಲಸ ಕಳೆದ ಒಂದು ವರ್ಷದಲ್ಲಿ ಸಮರ್ಪಕವಾಗಿ ನಡೆದಿದೆ ಎಂದು ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಕುಮಾರ ಹೇಳಿದರು.
ಗುರುವಾರ ನಗರದ ಕೆಇಬಿ ಕಚೇರಿ ಆವರಣದಲ್ಲಿ ನೂತನವಾಗಿ ನಿಮರ್ಿಸಿದ ಜೆಸ್ಕಾಂ ವಿಭಾಗೀಯ ಕಚೇರಿ ಲೋಕಾರ್ಪಣೆಗೊಳಿಸಿ ಮಾತನಾಡಿ, ರಾಜ್ಯದಲ್ಲಿ ಇಂಧನ ಇಲಾಖೆ ಹೊಸ ಮೈಲಿಗಲ್ಲು ಸ್ಥಾಪನೆ ಮಾಡುತ್ತಿದೆ. ನಾನು ಈ ಇಲಾಖೆ ಜವಾಬ್ದಾರಿ ಹೊತ್ತ ನಂತರ ರಾಜ್ಯಾದ್ಯಂತ 237, 110/11 ಕೆ.ವಿ ವಿದ್ಯುತ್ ಉಪಕೇಂದ್ರ್ರಗಳನ್ನು ನಿಮರ್ಾಣ ಮಾಡಲಾಗಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಕರ್ಾರ ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಬೆಳಕು ಯೋಜನೆಯಡಿ ರಾಜ್ಯದ ಲಕ್ಷಾಂತರ ಮನೆಗಳಲ್ಲಿ ವಿದ್ಯುತ್ ದೀಪ ಉರಿಯುತ್ತಿವೆ. ಕಲ್ಯಾಣ ಕನರ್ಾಟಕ ಭಾಗದಲ್ಲಿ ಕಳೆದೊಂದು ವರ್ಷದಿಂದ ಜೆಸ್ಕಾಂ ದೊಡ್ಡ ಸಾಧನೆ ಮಾಡಿದೆ. ಯಾದಗಿರಿ ಜಿಲ್ಲೆಯೊಂದಕ್ಕೆ 20 ಉಪ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ಇನ್ನೂ ಸ್ಥಳೀಯ ಶಾಸಕ ವೆಂಕಟರಡ್ಡಿ ಮುದ್ನಾಳ್ ಅಭಿವೃದ್ಧಿ ಪರ ಕಾಳಜಿಯುಳ್ಳ ವ್ಯಕ್ತಿಯಾಗಿದ್ದಾರೆ ಎಂದು ಸಚಿವ ಸುನೀಲ್ ಕುಮಾರ್ ಗುಣಗಾನ ಮನಾಡಿದರು.
ಶಾಸಕ ವೆಂಕಟರಡ್ಡಿ ಮುದ್ನಾಳ್ ಮಾತನಾಡಿ, ಸುನೀಲ್ ಕುಮಾರ್ ಇಂಧನ ಸಚಿವರಾದ ಮೇಲೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದಾರೆ. ಯಾದಗಿರಿ ಕ್ಷೇತ್ರದಲ್ಲಿ ಈ ಮೊದಲು ವಿದ್ಯುತ್ ಪರಿವರ್ತಕದ ಅಭಾವವಿತ್ತು. ಆದರೆ ಈಗ ಕಡಿಮೆಯಾಗಿದೆ. ಗ್ರಾಮೀಣ ಭಾಗದಲ್ಲಿ ಟಿಸಿ ಸುಟ್ಟರೆ ಕೇವಲ ಒಂದೆರಡು ದಿನಗಳಲ್ಲಿ ಹೊಸ ಟಿಸಿ ಕೊಡಿಸುವ ಕೆಲಸವಾಗುತ್ತಿದೆ ಎಂದು ಹೇಳಿದರು.
ಕ್ಷೇತ್ರದ ರಾಮಸಮುದ್ರ ಗ್ರಾಮದಲ್ಲಿ ವಿದ್ಯುತ್ ಉಪಕೇಂದ್ರ ನಿಮರ್ಾಣಗೊಂಡಿದ್ದು, ಗಡ್ಡೆಸುಗೂರು ಗ್ರಾಮಕ್ಕೂ ಮಂಜೂರು ಮಾಡಲಾಗಿದೆ. ಇದರಿಂದ ಭವಿಷ್ಯದಲ್ಲಿ ರೈತಾಪಿ ವರ್ಗಕ್ಕೆ ವಿದ್ಯುತ್ ಸಮಸ್ಯೆ ದೂರಾಗಲಿದೆ. ನಮ್ಮ ಮನವಿ ಸ್ಪಂದನೆ ಮಾಡಿದ್ದಕ್ಕಾಗಿ ಸಚಿವರಿಗೆ ಕ್ಷೇತ್ರದ ಜನರ ಪರವಾಗಿ ಧನ್ಯವಾದ ಅಪರ್ಿಸಿದರು.