ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ಮಾನ ವ ಹಕ್ಕುಗಳ ಸಾಮಾಜಿಕ ನ್ಯಾಯ ಮಿಷನ್‌ನ ಮುಖಂಡರು ಜಿಲ್ಲಾಸ್ಪತ್ರೆಯ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು. ಎಚ್.ಡಿ.ಮನೀಶ್‌ಗೌಡ, ಹರೀಶ್, ರಾಘವೇಂದ್ರ ಇದ್ದರು. 
ಜಿಲ್ಲೆ

ಜಿಲ್ಲಾಸ್ಪತ್ರೆಗೆ ಮೂಲಸೌಲಭ್ಯ ಒದಗಿಸಲು ಡಿಸಿಗೆ ಮನವಿ

ಚಿಕ್ಕಮಗಳೂರು: ಮೂಲಸೌಕರ್ಯವಿಲ್ಲದೇ ಜಿಲ್ಲಾಸ್ಪತ್ರೆಯಲ್ಲಿ ಸಂಕಷ್ಟ ಎದುರಿಸುತ್ತಿರುವ ರೋಗಿಗಳಿಗೆ ಶೀಘ್ರವೇ ಸವಲತ್ತು ಒದಗಿಸುವ ಮೂಲಕ ಸಹಾಯಹಸ್ತ ಚಾಚಬೇಕು ಎಂದು ಮಾನ ವ ಹಕ್ಕುಗಳ ಸಾಮಾಜಿಕ ನ್ಯಾಯ ಮಿಷನ್‌ನ ಮುಖಂಡರುಗಳು ಬುಧವಾರ ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮಿಷನ್ ರಾಜ್ಯ ರಾಯಭಾರಿ ಎಚ್.ಡಿ.ಮನೀಶ್‌ಗೌಡ, ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಮೂಲಸೌಲಭ್ಯಗಳಿಲ್ಲ ಮತ್ತು ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದೇ ತೀವ್ರ ಸಂಕಷ್ಟ ಎದುರಾಗುತ್ತಿರುವ ಪರಿಣಾಮ ರೋಗಿಗಳ ಆರೋಗ್ಯದಲ್ಲಿ ಏರುಪೇರುಗಳಾಗುತ್ತಿವೆ ಎಂದರು.

ಹೊರರೋಗಿಗಳ ನೊಂದಣಿ ವಿಭಾಗದಲ್ಲಿ ಸರಿಯಾದ ಸಿಬ್ಬಂದಿಗಳಿಲ್ಲ. ನೋಂದಣಿ ಚೀಟಿಗಾಗಿ ಗಂಟೆ ಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಅಲ್ಲದೇ ಚೀಟಿ ನೋಂದಾಯಿಸಲು ಕನಿಷ್ಟ ೧೫ ನಿಮಿಷಗಳ ಕಾಲ ಸಮಯ ಕಾಯಬೇಕಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಸಮರ್ಪಕ ವೈದ್ಯರಿಲ್ಲ, ವೀಲ್‌ಚೇರ್, ಸ್ಟçಚ್ಚರ್‌ಗಳು ಹಾಗೂ ಸ್ಕಾö್ಯನಿಂಗ್ ಸೌಲಭ್ಯಗಳ ಕೊರತೆಯು ಎದ್ದು ಕಾಣುತ್ತಿದೆ. ಎಂ.ಆರ್.ಐ. ಸ್ಕಾö್ಯನಿಂಗ್‌ಗಳು ಇಲ್ಲದಿರುವ ಕಾರಣ ಖಾಸಗೀ ಸ್ಕಾö್ಯನಿಂಗ್ ಸೆಂಟರ್‌ಗಳಿಗೆ ರೋಗಿಗಳು ತೆರಳಿ ದುಬಾರಿ ವೆಚ್ಚ ಭರಿಸುವಂತಾಗಿದೆ ಎಂದು ಹೇಳಿದರು.

ಆಸ್ಪತ್ರೆಯ ವಾರ್ಡ್ಗಳಲ್ಲಿ ಸೂಕ್ತ ಶೌಚಾಲಯದ ವ್ಯವಸ್ಥೆಯಿಲ್ಲ. ಆಸ್ಪತ್ರೆ ಸಿಬ್ಬಂದಿಗಳು ಹಣ ಪಡೆದು ಕೊಂಡ ರೋಗಿಗಳಿಗೆ ಚಿಕಿತ್ಸೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಅಲ್ಲ ದೇ ವಾಹನ ನಿಲುಗಡೆಗೆ ಸ್ಥಳವಿಲ್ಲದೇ ಪರದಾಡುವ ಸ್ಥಿತಿ ಎದುರಾಗಿದೆ ಎಂದರು.

ರೋಗಿಯ ಆರೋಗ್ಯದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾದರೆ ಕೂಡಲೇ ಮಂಗಳೂರು ಅಥವಾ ಮಣಿಪಾಲಕ್ಕೆ ತೆರಳಲು ಸೂಚಿಸಲಾಗುತ್ತಿದೆ. ಇದರಿಂದ ಬಡರೋಗಿಗಳು ಒಂದೆಡೆ ಜೀವಿಸಲು ಸಾಧ್ಯವಾಗದೇ ಹತಾಶೆಗೆ ಒಳಗಾಗುತ್ತಿದ್ದಾರೆ ಎಂದು ದೂರಿದರು.

ಆದ್ದರಿಂದ ಜಿಲ್ಲಾಡಳಿತ ಜಿಲ್ಲಾಸ್ಪತ್ರೆಯ ಕಡೆ ಹೆಚ್ಚು ಗಮನಹರಿಸಿ ಬಡವರ್ಗದ ಜನರಿಗೆ ಆಧಾರವಾಗಿ ರುವ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಿ ಉತ್ತಮ ಸೇವೆ ಒದಗಿಸಲು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಿಷನ್‌ನ ಸದಸ್ಯರಾದ ಹರೀಶ್, ರಾಘವೇಂದ್ರ ಇದ್ದರು.