ಜಿಲ್ಲೆ

ಜಿಲ್ಲಾಮಟ್ಟದ ಕವಿಗೋಷ್ಠಿ ಸ್ಪರ್ಧೆ, ಕವಿತೆಗಳ ಆಹ್ವಾನ

ಬೀದರ್: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಗಸ್ಟ್ 13 ರಂದು ಬೆಳಿಗ್ಗೆ 11ಕ್ಕೆ ಇಲ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಮಹಾಲಕ್ಷ್ಮಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಸ್ಪರ್ಧೆ ಹಮ್ಮಿಕೊಂಡಿದ್ದು, ಆಸಕ್ತರಿಂದ ಕವಿತೆಗಳನ್ನು ಆಹ್ವಾನಿಸಿದೆ.
‘ಸ್ವರಾಜ್ಯ-ಸುರಾಜ್ಯ' ಶೀರ್ಷಿಕೆಯಡಿ ಕವಿಗೋಷ್ಠಿ ನಡೆಯಲಿದೆ. ಜಿಲ್ಲೆಯ ಕವಿಗಳು ಸ್ವರಚಿತ ಕವನಗಳ ವಾಚನ ಮಾಡಬಹುದಾಗಿದೆ ಎಂದು ಪರಿಷದ್ ಜಿಲ್ಲಾ ಘಟಕದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ತಿಳಿಸಿದ್ದಾರೆ.
ಜಿಲ್ಲಾಮಟ್ಟದಲ್ಲಿ ಮೂರು ಉತ್ಕøಷ್ಟ ಕವಿತೆಗಳಿಗೆ ಪ್ರಮಾಣ ಪತ್ರ ನೀಡಿ, ಗೌರವಿಸಲಾಗುವುದು. ಅವುಗಳನ್ನು ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಬರುವ 100ಕ್ಕೂ ಹೆಚ್ಚು ಕವಿತೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ಕವಿತೆಗಳಿಗೆ ಕ್ರಮವಾಗಿ ರೂ, 10,000, ರೂ. 7,500 ಹಾಗೂ ರೂ. 5,000 ನಗದು ಬಹುಮಾನ, ಫಲಕ ಹಾಗೂ ಪ್ರಮಾಣ ಪತ್ರ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಕವಿತೆ ಕನಿಷ್ಠ 60 ಹಾಗೂ ಗರಿಷ್ಠ 100 ಪದದೊಳಗೆ ಇರಬೇಕು. ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಬಯಸುವವರು ಆಗಸ್ಟ್ 10 ರ ಒಳಗೆ ನಾಗೇಶ ಸ್ವಾಮಿ (7259525145) ಅಥವಾ ಡಾ. ಶ್ರೇಯಾ ಯಶಪಾಲ್ ಮಹೇಂದ್ರಕರ್ (9480463364) ಅವರ ವ್ಯಾಟ್ಸ್‍ಆ್ಯಪ್‍ಗೆ ಕವಿತೆಗಳನ್ನು ಕಳುಹಿಸಬೇಕು ಎಂದು ಮನವಿ ಮಾಡಿದ್ದಾರೆ.