ಜಿಲ್ಲೆ

ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಆಯ್ಕೆ ಪಟ್ಟಿ ಪ್ರಕಟ

ಬಳ್ಳಾರಿ : ಪ್ರಸ್ತಕ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಡಿಡಿಪಿಐ ಉಮಾದೇವಿ ತಿಳಿಸಿದ್ದಾರೆ.
ಕಿರಿಯ ಪ್ರಾಥಮಿಕ ಶಾಲೆ ವಿಭಾಗ : ಬಳ್ಳಾರಿ ತಾಲೂಕಿನ ಬಾಲಯ್ಯ ಕ್ಯಾಂಪ್ ಮಹಾಂತೇಶ ಮೇಟಿ, ಕುರುಗೋಡಿ ಶಾಲೆಯ ಹೊನ್ನುರ್ ಬಿ., ಸಂಡೂರಿನ ಸೋವೇನಹಳ್ಳಿ ಶಾಲೆಯ ಎಲ್. ಕುಮಾರಸ್ವಾಮಿ, ಸಿರುಗುಪ್ಪ ತಾಲೂಕಿನ ದೇವಲಾಪುರ ಶಾಲೆಯ ಪಿ. ಫಕ್ರುದ್ದೀನ್ ಸಾಹೇಬ್ ಕಿರಿಯ ಪ್ರಾಥಮಿಕ ಶಾಲೆಯ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲೆ ವಿಭಾಗ : ಬಳ್ಳಾರಿ ತಾಲೂಕಿನ ಬೈಲೂರು ಶಾಲೆಯ ವಿ.ತ್ರಿವೇಣಿ, ಕುರುಗೋಡು ಶಾಲೆಯ ಗವಿಸಿದ್ದಪ್ಪ, ಸಂಡೂರು ತಾಲೂಕಿನ ಎಂ.ತುಂಬರಗುದ್ದಿಯ ಶಾಲೆಯ ಕೆ.ಅರ್ಚನಾ, ಸಿರುಗುಪ್ಪ ತಾಲೂಕಿನ ಅರಳಿಗನೂರಿನ ಶಾಲೆಯ ಸಿ.ಡಿ.ಎರೆಪ್ಪ, ಕಂಪ್ಲಿ ತಾಲೂಕಿನ ಉಪ್ಪಾರಹಳ್ಳಿ ಮೆಟ್ರಿ ಶಾಲೆಯ ಕೆ.ಎನ್.ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.ಪ್ರೌಢ ಶಾಲೆ ವಿಭಾಗ : ಬಳ್ಳಾರಿ ಪೂರ್ವ ವಲಯದ ಕೆ.ವೀರಾಪುರದ ಶಾಲೆಯ ಟಿ.ಜಿ.ನಾಗರಾಜ, ಕುರುಗೋಡು ಶಾಲೆಯ ಪಿ. ಲತಾ, ಸಂಡೂರಿನ ಭಾಷಾ ಮೆಹಬೂಬ, ಸಿರುಗುಪ್ಪ ತಾಲೂಕಿನ ಕುರಿವಳ್ಳಿ ಶಾಲೆಯ ಆರ್. ಸಂತೋಷ ಪ್ರೌಢಶಾಲೆ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ. ಇಂದು ಆಯ್ಕೆಯಾದ ಶಿಕ್ಷಕರಿಗೆ ಸನ್ಮಾನ ನೀಡಿ ಗೌರವಿಸಲಾಗುವುದು.