ಜಿಲ್ಲೆ

ಜಿಲ್ಲಾಧ್ಯಕ್ಷರಾಗಿ ರಾಮಕೃಷ್ಣನ್ ಪುನರಾಯ್ಕೆ

ಬೀದರ್: ವಿಶ್ವ ಹಿಂದು ಪರಿಷತ್ (ವಿಎಚ್ ಪಿ) ಬೀದರ್ ಜಿಲ್ಲಾ ಘಟಕ ಪುನರ್ ರಚನೆ ಮಾಡಲಾಗಿದೆ. ಸಂಘದ ಹಿರಿಯರಾದ ರಾಮಕೃಷ್ಣನ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಪುನರಾಯ್ಕೆ ಮಾಡಲಾಯಿತು.

ನಗರದ ಸರಸ್ವತಿ ಶಾಲೆ ಗಿರಿಜಾ ಭವನದಲ್ಲಿ ವಿ ಎಚ್ ಪಿ ಉತ್ತರ ಪ್ರಾಂತದ ಸಹ ಸಂಘಟನಾ ಕಾರ್ಯದರ್ಶಿ ಮನೋಹರ ಮಠದ್ ಹಾಗೂ ಕಲಬುರಗಿ ವಿಭಾಗದ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ನೇತೃತ್ವದಲ್ಲಿ ಜರುಗಿದ ಬೈಠಕ್ ನಲ್ಲಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಇದೇ ವೇಳೆ ಪರಿಷತ್ ಅಂಗ ಘಟಕವಾದ ಬಜರಂಗ ದಳಕ್ಕೆ ಯುವ ಮುಖಂಡ ಸುನೀಲ ದಳವೆ ಅವರನ್ನು ಜಿಲ್ಲಾ ಸಂಯೋಜಕರಾಗಿ ನೇಮಿಸಲಾಗಿತು.

ರಾಮಕೃಷ್ಣನ್(ಅಧ್ಯಕ್ಷ), ಸಂದೀಪ ತೇಲಗಾಂವಕರ್ (ಕಾರ್ಯಾಧ್ಯಕ್ಷ), ಕಲ್ಪನಾ ದೇಶಪಾಂಡೆ (ಉಪಾಧ್ಯಕ್ಷೆ), ಸತೀಶ ನೌಬಾದೆ (ಕಾರ್ಯದರ್ಶಿ), ಸುನೀಲ ದಳವೆ (ಬಜರಂಗ ದಳ ಸಂಯೋಜಕ), ಬಸವರಾಜ ಕನ್ನಳ್ಳಿ (ಬಜರಂಗ ದಳ ಸಹ ಸಂಯೋಜಕ), ರೇಖಾ ಕುಲಕರ್ಣಿ (ಸತ್ಸಂಗ ಪ್ರಮುಖ), ಮಹೇಶ ವಿಶ್ವಕರ್ಮ (ಸಹ ಸತ್ಸಂಗ ಪ್ರಮುಖ), ಶಿವಾಜಿರಾವ ಮಾನೆ (ಧರ್ಮಾಚಾರ್ಯ ಸಂಪರ್ಕ ಪ್ರಮುಖ), ಸಂಗಯ್ಯಾ ಸ್ವಾಮಿ ಮಠ (ಮಂದಿರ ಸಂಪರ್ಕ ಪ್ರಮುಖ), ಶಿವಲೀಲಾ ಕೊಡಗೆ (ದುರ್ಗಾವಾಹಿನಿ ಸಂಯೋಜಕಿ), ಜಯಸ್ವಾಮಿ (ಸೇವಾ ಪ್ರಮುಖ), ಅನುಪಮಾ ರಾಜ್ (ಗೋರಕ್ಷಾ ಪ್ರಮುಖ), ಆಕಾಶ ಗುತ್ತೆದಾರ, ಸತೀಶ ಶತಗುಂಡೆ, ಜಗನ್ನಾಥ ಬಾಮಂಡಿ, ಬಾಬುರಾವ ಮುಸ್ತರಗೆ (ಕಾರ್ಯಕಾರಣಿ ಸದಸ್ಯರು).

ಬೀದರ್ ನಗರ ಘಟಕಕ್ಕೆ ಡಾ. ವೀರೇಂದ್ರ ಶಾಸ್ತ್ರಿ (ಅಧ್ಯಕ್ಷ), ರಘುನಾಥರಾವ ಕುಲಕರ್ಣಿ (ಉಪಾಧ್ಯಕ್ಷ), ರಾಜಕುಮಾರ ಅಳ್ಳೆ (ಕಾರ್ಯದರ್ಶಿ), ಮಹೇಶ ಕಟ್ಟೆ (ಬಜರಂಗ ದಳ ಸಂಯೋಜಕ), ರಾಜು ನೆಲವಾಡೆ (ವಿದ್ಯಾರ್ಥಿ ಪ್ರಮುಖ), ಶ್ರೀಶೈಲ ಮೂಲಗೆ (ವಿದ್ಯಾರ್ಥಿ ಸಹ ಪ್ರಮುಖ).