?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ

ಚಿತ್ರದುರ್ಗ: ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಂಸ್ಕೃತಿಕ ನಾಯಕ,ವಿಶ್ವಗುರು ಬಸ ವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿದರು.
ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಮಾತನಾಡಿದ ಸಚಿವರು,ಸರ್ವರಿಗೂ ಸಮಬಾಳು, ಸಮಪಾಲು ಮೊದಲಾದ ತತ್ವಾದರ್ಶಗಳನ್ನು ಬೋಧಿಸಿದ್ದ ಬಸವಣ್ಣನವರು,ಶೋಷಿತರು,ಬಡವರು,ಜಾತಿ,ವರ್ಗ ಭೇದವಿಲ್ಲದೆ ಎಲ್ಲರನ್ನೂ ಸಮಾಜದ ಮುಖ್ಯ ವಾಹಿನಿಗೆ ತರಲು ಹೋರಾಟ ನಡೆಸಿದ್ದಾರೆ, ಅವರ ತತ್ವಾದರ್ಶಗಳನ್ನು ಆಧರಿಸಿದ ಐದು ಗ್ಯಾರಂಟಿಗಳನ್ನು ರಾಜ್ಯಸರ್ಕಾರ ಈಗಾಗಲೇ ಅನುಷ್ಠಾನಗೊಳಿಸಿದೆ ಎಂದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ,ಉಪವಿಭಾಗಾಧಿಕಾರಿ ಎಂ.ಕಾರ್ತಿಕ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ್,ಮಹಡಿಶಿವಮೂರ್ತಿ,ಕೆಇಬಿ ಷಣ್ಮುಖಪ್ಪ,ಕರಿಯಪ್ಪ,ಆರತಿಶಿವಮೂರ್ತಿ,ಜಿ.ಎನ್.ಮಹೇಶ್,ರೀನಾವೀರಭದ್ರಪ್ಪ, ವಕೀಲ ದಯಾನಂದ,ನಿರ್ಮಲಾಬಸವರಾಜ್,ಬಸವದಳ ಹಾಗೂ ಸಮಾಜದ ಪ್ರಮುಖರು ಇದ್ದರು. ರಂಗಕರ್ಮಿ ಕೆಪಿಎಂ ಗಣೇಶಯ್ಯ ನಿರೂಪಿಸಿದರು.