ಜಿಲ್ಲೆ

ಜಿಲ್ಲಾದ್ಯಂತ ಸರಾಸರಿ 17.9 ಮಿ.ಮೀ ಮಳೆ

ಚಿತ್ರದುರ್ಗ: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸುರಿದ ಮಳೆ ವಿವರದನ್ವಯ ಸರಾಸರಿ 17.9 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲೂಕಿನಲ್ಲಿ 24.3 ಮಿ.ಮೀ, ಚಿತ್ರದುರ್ಗ-30.1, ಹಿರಿಯೂರು-16.7, ಹೊಳಲ್ಕೆರೆ-10.7, ಹೊಸದುರ್ಗ-9.2, ಮೊಳಕಾಲ್ಮೂರು ತಾಲೂಕಿನಲ್ಲಿ 8.3 ಮಿ.ಮೀ ಮಳೆಯಾಗಿದೆ.

ನೀರನ್ನು ಅಡ್ಡಗಟ್ಟಿದ ಗ್ರಾಮಸ್ಥರು: ತಾಲೂಕಿನ ಕೊಡಗವಳ್ಳಿ ಕೆರೆ ಕೋಡಿ ಬಿದ್ದಿದ್ದು, ದೊಡ್ಡದಾದ ಕೊರಕಲು ಸೃಷ್ಟಿಯೊಂದಿಗೆ ನೀರಿನ ಹರಿವು ಹೆಚ್ಚಾಗಿ, ಅಪಾಯ ತಂದೊಡ್ಡುವ ಸಾಧ್ಯತೆ ಮನಗಂಡು ಗ್ರಾಮಸ್ಥರು ಹರಿಯುವ ನೀರನ್ನು ತಡೆಯಲು ದೊಡ್ಡ ಕಲ್ಲುಗಳನ್ನು ಅಡ್ಡಲಾಗಿ ಹಾಕಿದ್ದು, ಹರಿವು ನಿಯಂತ್ರಿಸುವಲ್ಲಿ ಸಫಲರಾಗಿರುವುದಾಗಿ ಬೇತೂರಿನ ಸಿದ್ದೇಶ್, ಲೋಕೇಶ್ ತಿಳಿಸಿದ್ದಾರೆ.