ಹಾಸನ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಜಿಲ್ಲಾದ್ಯಂತ ಸೋಮವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಬೆಳಗ್ಗೆ ನಗರದ ಹಳೇ ಈದ್ಗಾ ಮೈದಾನ ಮತ್ತು ಅಬ್ದುಲ್ ಕಲಾಂ ರಸ್ತೆ ಬಳಿ ಇರುವ ಹೊಸ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹೊಸಲೈನ್ ರಸ್ತೆ ಬಳಿ ಇರುವ ಹಳೇ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 7.30ಕ್ಕೆ ಸಾವಿರಾರು ಮುಸ್ಲಿಮರು ಶ್ವೇತ ವಸ್ತ್ರ ಧರಿಸಿ ಪ್ರಾರ್ಥನೆ ನಡೆಸಿದು. ಇದಾದ ಬಳಿಕ ಬೆಳಿಗ್ಗೆ ನಗರದ 80 ಅಡಿ ರಸ್ತೆ ಬಳಿ ಇರುವ ಹೊಸ ಈದ್ಗಾ ಮೈದಾನದಲ್ಲಿ ನಮಾಝ್ ನಂತರ ಮೌಲ್ವ, ಧರ್ಮಗುರುಗಳು ಉಪದೇಶ ನೀಡಿದರು. ಬ್ರಕೀದ್ ಹಬ್ಬದ ಹಿನ್ನಲೆ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಹಾಗು ಭದ್ರತೆ ದೃಷಿಯಿಂದ ಪೊಲೀಸರ ಸಂಖ್ಯೆ ಹೆಚ್ಚಿಸಲಾಗಿತ್ತು.
ಈ ವೇಳೆ ಈದ್ಗಾ ಕಮಿಟಿ ಅಧ್ಯಕ್ಷ ಸಮೀರ್‌ಖಾನ್ ಮಾತನಾಡಿ, ಬಕ್ರೀದ್ ಹಬ್ಬ ಎಂದರೇ ತ್ಯಾಗ, ಬಲಿದಾನದ ಸಂಕೇತ. ಪ್ರವಾದಿ ಇಬ್ರಾಹಿಂ ಅವರು ತನ್ನ ಸ್ವಂತ ಮಗ ಪ್ರವಾದಿ ಇಸ್ಮಾಯಿಲ್ ಅವರನ್ನು ಬಲಿ ಕೊಡುವ ಸಂದರ್ಭ ಒದಗಿ ಬರುತ್ತದೆ. ಇಬ್ರಾಹಿಂರನ್ನು ಪರೀಕ್ಷೆಗೆ ಒಳಪಡಿಸುವಂತಹ ಒಂದು ಸನ್ನಿವೇಶ. ಆ ಒಂದು ಪರೀಕ್ಷೆಯಲ್ಲಿ ಪ್ರವಾದಿ ಇಬ್ರಾಹಿಂರು ಉತ್ತೀರ್ಣರಾಗುತ್ತಾರೆ. ಆ ನೆನಪಿಗಾಗಿ ಹಬ್ಬವನ್ನು ಆರಿಸುತ್ತೇವೆ. ಪ್ರಪಂಚದ ನಾನಾ ಮೂಲೆಗಳಿಂದ ಬಕ್ರೀದ್ ಹಬ್ಬದ ವೇಳೆ ಹಜ್ ಯಾತ್ರೆ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಉತ್ತಮ ರೀತಿಯಲ್ಲಿ ಮಳೆ, ಬೆಳೆಯಾಗಿ ಜನರು ಸುಖ ಶಾಂತಿಯಿಂದ ಇರಲಿ ಎಂದು ನಾವೆಲ್ಲ ಸೇರಿ ವಿಶೇಷ ಪ್ರಾರ್ಥನೆ ಮಾಡಿದ್ದೇವೆ. ಈ ದೇಶದ ಪ್ರಗತಿಗಾಗಿ ಸೌಹಾದರ್ತೆಗಾಗಿ, ಸಹೋದರತ್ವಕ್ಕಾಗಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿ, ಸಮಸ್ತ ನಾಗರಿಕ ಬಂಧುಗಳಿಗೆ ಬಕ್ರೀದ್ ಹಬ್ಬದ ಶುಭಾಶಯ ಹೇಳಿದರು.