???????????????????????????????????? 
ಜಿಲ್ಲೆ

ಜಿಲ್ಲಾಡಳಿತದಿಂದ ಕೊಳೆಗೇರಿ ನಿವಾಸಿಗಳ ನಿರ್ಲಕ್ಷ್ಯ ;  ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಆಕ್ರೋಶ

ತುಮಕೂರು : ನಗರದ ೋಷಿತ ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ, ಅೋಷಿತ ಕೊಳಚೆ ಪ್ರದೇಶಗಳ ೋಷಣೆಗೆ ಪ್ರಸ್ತಾವನೆ ಹಾಗೂ ನಿವೇಶನ ರಹಿತ 398 ಕುಟುಂಬಕ್ಕೆ ಭೂಮಿ ಮಂಜೂರಾತಿಗೆ ಒತ್ತಾಯಿಸಿ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರದ ಕೊಳೆಗೇರಿ ಅಭಿವೃದ್ಧಿ ಮಂಡಳಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ನಗರದಲ್ಲಿರುವ 398 ನಿವೇಶನ ರಹಿತರಿಗೆ ಸರ್ಕಾರಿ ಭೂಮಿ ಗುರುತಿಸಲು ಜಿಲ್ಲಾಡಳಿತಕ್ಕೆ ಸರ್ಕಾರ ಸೂಚಿಸಿದ್ದರೂ ಈವರೆಗೆ ಕ್ರಮಕೈಗೊಂಡಿಲ್ಲ. ಕೊಳೆಗೇರಿ ನಿವಾಸಿಗಳ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯ ತಾಳಿದೆ ಎಂದು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

ಅೋಷಿತ ಕೊಳಚೆ ಪ್ರದೇಶಗಳಾಗಿರುವ 16ನೇ ವಾರ್ಡ್ ಸಂಪಾದನೆ ಮಠ, 18ನೇ ವಾರ್ಡ್ ಇಸ್ಮಾಯಿಲ್‌ನಗರ, 21ನೇ ವಾರ್ಡ್ ಭಾರತಿನಗರ ಭಾಗ 2, 23ನೇ ವಾರ್ಡ್ ಸತ್ಯಮಂಗಲ ಜನತಾ ಕಾಲನಿ/ ಕೆ ಕಾಲನಿ, 35ನೇ ವಾರ್ಡ್ ಎಳ್ಳರಬಂಡೆ ಕೊಳಚೆ ಪ್ರದೇಶಗಳನ್ನು ಸ್ಲಂ ಕಾಯ್ದೆ 1973ರ ಕಲಂ 3 ಮತ್ತು 11ರಲ್ಲಿ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಡಳಿತಕ್ಕೆ ಅಧಿಸೂಚನೆಗೆ ಅಗತ್ಯವಿರುವ ಪ್ರಸ್ತಾವನೆಯನ್ನು ನಿಗದಿತ ಕಾಲಮಿತಿಯೊಳಗಾಗಿ ಸಲ್ಲಿಸಬೇಕು. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 17 ಸರ್ಕಾರಿ ಒಡೆತನದ ಕೊಳಚೆಪ್ರದೇಶಗಳಿಗೆ 90 ದಿನಗಳೊಳಗಾಗಿ ಹಕ್ಕುಪತ್ರ ನೀಡಬೇಕು, ತಪ್ಪಿದಲ್ಲಿ ಸ್ಲಂ ಬೋರ್ಡ್ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ದಿಬ್ಬೂರಿನ ದೇವರಾಜ್ ಅರಸು ಬಡಾವಣೆಯ 1200 ವಸತಿ ಸಮುಚ್ಛಯಗಳ ಲಾನುಭವಿಗಳಿಗೆ ಮನೆ ಹಂಚಿಕೆ ಪತ್ರ ಮತ್ತು ಅಗತ್ಯವಿರುವ ಮೂಲಸೌಲಭ್ಯ ಕಲ್ಪಿಸಲು ಮಂಡಳಿ ಮುಂದಾಗಬೇಕು ಎಂದು ಕೊಳಗೇರಿ ಸಮಿತಿ ಗೌರವಧ್ಯಕ್ಷೆ ದೀಪಿಕಾ ಹೇಳಿದರು. ಕೊಳೆಗೇರಿ ಅಭಿವೃದ್ಧಿ ಮಂಡಳಿ ಇಂಜಿನಿಯರ್ ಚೇತನ್‌ಗೆ ಮನವಿ ಸಲ್ಲಿಸಲಾಯಿತು. ಸಮಿತಿ ಕಾರ್ಯದರ್ಶಿ ಅರುಣ್, ಬೀದಿ ವ್ಯಾಪಾರಿಗಳ ಸಂದ ಬಾಬಾ, ಪದಾಧಿಕಾರಿಗಳಾದ ಶಂಕರಯ್ಯ. ಹಯಾತ್, ರಂಗನಾಥ್, ಮೋಹನ್, ಗುಲ್ನಾಜ್, ಚಕ್ರಪಾಣಿ, ಕಣ್ಣನ್, ವಾರಿಮುತ್ತು, ಸುಬ್ಬ, ಮಂಗಳಮ್ಮ, ಹನುಮಕ್ಕ, ಸುಧಾ, ತಿಮ್ಮಕ್ಕ ನೇತೃತ್ವ ವಹಿಸಿದ್ದರು.

ತುಮಕೂರಿನ 17 ಕೊಳಚೆಪ್ರದೇಶಗಳ ಪೈಕಿ 6ಕ್ಕೆ ಹದ್ದುಬಸ್ತು ಪ್ರಕ್ರಿಯೆ ಪೂರ್ಣಗೊಂಡು ಲಾನುಭವಿಗಳ ಸಮೀಕ್ಷೆ ನಡೆಯುತ್ತಿದೆ. ಇದರ ಸಾಧಕ ಬಾಧಕ ನೋಡಿಕೊಂಡು ಉಳಿದೆಡೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು. 398 ನಿವೇಶನ ರಹಿತ ಸ್ಲಂ ನಿವಾಸಿಗಳಿಗೆ ಅಗತ್ಯವಿರುವ ಸರ್ಕಾರಿ ಭೂಮಿ ಮಂಜೂರಾತಿಗೆ 1 ವಾರಗಳೊಳಗಾಗಿ ಜಿಲ್ಲಾಧಿಕಾರಿಗಳಿಗೆ ಮಂಡಳಿಯಿಂದ ಪ್ರಸ್ತಾವನೆ ಸಲ್ಲಿಸಲಾಗುವುದು. ಚೇತನ್, ಇಂಜಿನಿಯರ್, ಕೊಳೆಗೇರಿ ಅಭಿವೃದ್ಧಿ ಮಂಡಳಿ