ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ರೈತರು ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಜಿಲ್ಲಾಡಳಿತ ಭವನಕ್ಕೆ ರೈತರ ಮುತ್ತಿಗೆ

ಬಾಗಲಕೋಟೆ: ವಿಮಾನ ನಿಲ್ದಾಣ ಹಾಗೂ ಕೈಗಾರಿಕೆ ಸ್ಥಾಪನೆಗಳ ಹೆಸರಿನಲ್ಲಿ ಜೀವನಕ್ಕೆ ಆಧಾರವಾಗಿರುವ ಫಲವತ್ತಾದ ಭೂಮಿ ಸ್ವಾನ ಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ರೈತರು ಜಿಲ್ಲಾಡಳಿತ ಭವನಕ್ಕೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನವನಗರದ ಎಪಿಎಂಸಿ ಸರ್ಕಲ್ ದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ ಗ್ರಾಮದ 500 ಕ್ಕೂ ಹೆಚ್ಚು ರೈತರು ಸಚಿವ ಮುರುಗೇಶ ನಿರಾಣಿ ಹಾಗೂ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಡಳಿತ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಅಂದಾಜು 5 ಸಾವಿರ ಜನಸಂಖ್ಯೆ ಇರುವ ಹಲಕುರ್ಕಿ ಗ್ರಾಮದಲ್ಲಿ 3 ಸಾವಿರ ಎಕರೆ ಜಮೀನು ಇದೆ. ಇದು ಸಂಪೂರ್ಣವಾಗಿ ಫಲವತ್ತತೆಯಿಂದ ಕೂಡಿ ಜನತೆಯ ಬದುಕಿಗೆ ಆಸರೆಯಾಗಿದೆ. ಸಚಿವ ಮುರುಗೇಶ ನಿರಾಣಿ ವಿಮಾನ ನಿಲ್ದಾಣ ಹಾಗೂ ಕೈಗಾರಿಕೆ ಸ್ಥಾಪನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದಾರೆ. ತನ್ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ವರ್ಷಕ್ಕೆ ಎರಡು ಬೆಳೆ ಬೆಳೆದು ಜೀವನ ನಡೆಸುತ್ತಿದ್ದಾರೆ. ಈ ಭೂಮಿ ವಶಕ್ಕೆ ಪಡೆದರೇ ಶೇ.60 ರಷ್ಟು ಕುಟುಂಬಗಳು ಬೀದಿ ಪಾಲಾಗುತ್ತವೆ. ಇನ್ನು ಗ್ರಾಮಕ್ಕೆ ಸಚಿವರಾಗಲಿ, ಕಂದಾಯ ಇಲಾಖೆಯ ಅಧಿಕಾರಿಗಳಾಗಿ, ಕೈಗಾರಿಕಾ ಇಲಾಖೆಯ ಅಕಾರಿಗಳಾಗಲಿ, ಕೆಐಎಡಿಬಿ ಅಧಿಕಾರಿಗಳಾಗಲಿ ಭೇಟಿ ನೀಡಿಲ್ಲ. ರೈತರ ಅಭಿಪ್ರಾಯ ಕೇಳಿಲ್ಲ, ಗ್ರಾಮಸಭೆ ನಡೆಸದೇ ಏಕಾಏಕಿ 1500 ಎಕರೆ ಜಮೀನನ್ನು ಸ್ವಾನಪಡಿಸಿಕೊಂಡು ರೈತ ಸಮೂಹವನ್ನು ಬೀದಿ ಪಾಲು ಮಾಡಲು ಹೊರಟಿರುವ ಧೋರಣೆ ಖಂಡನೀಯ. ಕೂಡಲೇ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಭೂಧಿಸ್ವಾನ ಕ್ರಮಕ್ಕೆ ತಡೆ ಹಿಡಿದು ರೈತರ ಹಿತಾಸಕ್ತಿ ಕಾಪಾಡಬೇಕು. ಇಲ್ಲವಾದಲ್ಲಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಲಕುರ್ಕಿ ಗ್ರಾಮದ ದಿಂಗಬರೇಶ್ವರ ಮಠದ ಷಡಕ್ಷರ ಸ್ವಾಮಿ ಅವಧೂತರು, ಬಿ.ಪಿ.ನಾಯ್ಕರ, ಆರ್.ಎಫ್. ನಾಯ್ಕರ, ಚನ್ನಪ್ಪ ಜೋಲಿ, ಕೆ.ಎನ್. ನಾಯ್ಕರ, ಶಂಕ್ರಪ್ಪ ನಾಯ್ಕರ, ಆರ್.ಡಿ. ನಾಯ್ಕರ, ವೈ.ಎಸ್. ಮುಷ್ಠಿಗೇರಿ, ಪಿ.ಆರ್.ಮಾದರ, ಎಂ.ಪಿ.ಮಾದರ ಇತರರು ಇದ್ದರು.