ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆಯಲ್ಲಿರುವ ಲಕ್ಷಿö್ಮÃ ರಂಗನಾಥ ಸಭಾಂಗಣದಲ್ಲಿ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಯಪ್ರಕಾಶ್, ಶಿವಣ್ಣ, ಅಂಭಾವತಿ, ಸುರೇಶ್, ಹರೀಶ್, ತಂಪಿತ ಮತ್ತಿತರರಿದ್ದರು. 
ಜಿಲ್ಲೆ

ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘಕ್ಕೆ ಆಯ್ಕೆ

ಚಿಕ್ಕಮಗಳೂರು: ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷರಾಗಿ ಜಯ ಪ್ರಕಾಶ್, ಗೌರವಾಧ್ಯಕ್ಷರಾಗಿ ಶಿವಣ್ಣ ಸೇರಿದಂತೆ ನೂತನ ಪದಾಧಿಕಾರಿಗಳನ್ನು ನಗರದ ಮಲ್ಲಂದೂರು ರಸ್ತೆ ಸಮೀಪ ಲಕ್ಷಿö್ಮÃ ರಂಗನಾಥ ಸಭಾಂಗಣದಲ್ಲಿ ಭಾನುವಾರ ಆಯ್ಕೆ ಮಾಡಲಾಯಿತು.

ಜಿಲ್ಲಾ ಉಪಾಧ್ಯಕ್ಷರಾಗಿ ಅಂಭಾವತಿ, ಸುರೇಶ್, ಪ್ರಧಾನ ಕಾರ್ಯದರ್ಶಿ ಹರೀಶ್, ಸಹ ಕಾರ್ಯದರ್ಶಿ ಗಳಾಗಿ ಮಧು, ತಂಪಿತ, ಖಜಾಂಚಿ ರವಿಪ್ರಸಾದ್, ಪ್ರಧಾನ ಸಂಚಾಲಕ ಮಹೇಂದ್ರ, ಸಾಂಸ್ಕೃತಿಕ ರಾಯಭಾರಿ ಡಾ. ವಿಜಯ್‌ಕುಮಾರ್ ಜನಪದ, ಜಾನಪದ ಸಂಚಾಲಕರಾಗಿ ಅಶೋಕ್, ಸಂದೀಪ್, ಜಾಲತಾಣ ನಿರ್ವಹಣೆ ಅಜಿತ್ ಕೆವಿಯಾರ್, ಸಾಂಸ್ಕೃತಿಕ ಸಂಚಾಲಕಿ ಭೂಮಿಕಾ, ಕಾನೂನು ಸಲಹೆಗಾರರಾಗಿ ಪ್ರತಿಭಾ ಅವರನ್ನು ಆಯ್ಕೆ ಮಾಡಲಾಯಿತು.

ಚಿಕ್ಕಮಗಳೂರು ತಾಲೂಕು ಸಂಚಾಲಕರಾಗಿ ಪೂರ್ಣೇಶ್, ಮೂಡಿಗೆರೆ ಸಂಚಾಲಕರಾಗಿ ವಿದ್ಯಾ, ಕಡೂರು ತಾಲೂಕು ಸಂಚಾಲಕರಾಗಿ ಗೋಪಿ ಆಯ್ಕೆಯಾದರು.