ಜಿಲ್ಲೆ

ಜಿಲ್ಲಾ ಯುವಜನೋತ್ಸವ ಫಲಿತಾಂಶ

ಬೀದರ್: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಇತ್ತೀಚೆಗೆ ನಗರದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಜುರುಗಿತು. ಯುವಕ, ಯುವತಿಯರಿಗಾಗಿ ವಿವಿಧ ಸ್ಪರ್ಧೆಗಳು ಜರುಗಿದವು. ಯುವ ಸಮೂಹ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದರು. ವಿಜೇತರ ಪಟ್ಟಿ ಇಂತಿದೆ.

ಜಾನಪದ ನೃತ್ಯ: ಅಂಬಾದಾಸ ಮತ್ತು ತಂಡ-ಹುಲಿ ಕುಣಿತ (ಪ್ರಥಮ), ಲಕ್ಷ್ಮೀಬಾಯಿ ಮತ್ತು ತಂಡ-ಲಂಬಾಣಿ ನೃತ್ಯ (ದ್ವಿತೀಯ ), ಸುಶಾಂತ ರಾಠೋಡ್ ಮತ್ತು ತಂಡ (ತೃತೀಯ). ಜಾನಪದ ಗೀತೆ: ವಿಷ್ಣುಕಾಂತ ಮತ್ತು ತಂಡ (ಪ್ರಥಮ), ನಿರ್ಜಲಾ ತಂಡ (ದ್ವಿತೀಯ), ಸಾರಿಕಾ, ರಕ್ಷಿತಾ ತಂಡ (ತೃತೀಯ). ಶಾಸ್ತ್ರೀಯ ಗಾಯನ: ರಶ್ಮಿ ಶರ್ಮಾ-ಹಿಂದುಸ್ತಾನಿ ಸಂಗೀತ (ಪ್ರಥಮ), ವೈಷ್ಣವಿ ವೈಜಿನಾಥ (ದ್ವಿತೀಯ), ಶಾಂಭವಿ ಕೆ. (ತೃತೀಯ). ಶಾಸ್ತ್ರೀಯ ವಾದ್ಯಸಿತಾರ: ರಿತೇಶ ಕಾಳಶೆಟ್ಟಿ (ಪ್ರಥಮ).

ಶಾಸ್ತ್ರೀಯ ವಾದ್ಯ ತಬಲಾ: ಅನಂತಕುಮಾರ (ಪ್ರಥಮ), ಮೈಕಲ್ ಫರ್ನಾಂಡಿಸ್ (ದ್ವಿತೀಯ), ಪ್ರವೀಣಕುಮಾರ (ತೃತೀಯ). ಹಾರ್ಮೊನಿಯಂ(ಲೈಟ್): ಪ್ರವೀಣಕುಮಾರ (ಪ್ರಥಮ), ಪವನ ರಮೇಶ (ದ್ವಿತೀಯ). ಶಾಸ್ತ್ರೀಯ ನೃತ್ಯ ಭರತ ನಾಟ್ಯ: ಸ್ವಾತಿ (ಪ್ರಥಮ), ವೈಷ್ಣವಿ (ದ್ವಿತೀಯ) ಏಕಾಂಕ ನಾಟಕ (ಹಿಂದಿ): ರಿಯಾಜ್ ಪಾಶಾ ಮತ್ತು ತಂಡ (ಪ್ರಥಮ), ಪವನ ಮತ್ತು ತಂಡ (ದ್ವಿತೀಯ ), ಗೌರಿಪ್ರಿಯಾ (ತೃತೀಯ). ಆಶುಭಾಷಣ ಹಿಂದಿ: ಮೇಘಾ (ಪ್ರಥಮ), ಆದರ್ಶ (ದ್ವಿತೀಯ), ಶಿವಕುಮಾರ (ತೃತೀಯ).

ಆಶುಭಾಷಣ ಆಂಗ್ಲ: ಸಂಗಮೇಶ (ಪ್ರಥಮ), ರೋಶನಿ (ದ್ವಿತೀಯ), ವೈಶಾಲಿ (ತೃತೀಯ). ಪ್ರಾದೇಶಿಕ ಉಡುಗೆ ಸ್ಪರ್ಧೆ ಸಾಂಪ್ರದಾಯಿಕ: ಸುಜಾತಾ ಮತ್ತು ಪ್ರೀತಮ್ (ಪ್ರಥಮ), ವಿಷ್ಣು ಮತ್ತು ಸಂಗಮೇಶ (ದ್ವಿತೀಯ ), ಸುಲೋಚನಾ, ಶ್ರೀದೇವಿ, ಮಲ್ಲಮ್ಮ ಮತ್ತು ಭಾಗ್ಯವಂತಿ (ತೃತೀಯ). ಪ್ರಾದೇಶಿಕ ಉಡುಗೆ ಸ್ಪರ್ಧೆ ಆಧುನಿಕ: ಸುಜಾತಾ ಮತ್ತು ಪ್ರೀತಮ್ (ಪ್ರಥಮ), ಲೀನಾ ಮತ್ತು ಅಂಬಿಕಾ (ದ್ವಿತೀಯ), ಸರೋಜನಿ ಮತ್ತು ಅಂಬಿಕಾ (ತೃತೀಯ).

ಬೀದಿ ನಾಟಕ (ಸಾಮಾಜಿಕ ಸಂದೇಶ ಸಾರುವ): ಭವ್ಯಾ ಮತ್ತು ತಂಡ (ಪ್ರಥಮ), ಸಾರಿಕಾ ಮತ್ತು ತಂಡ (ದ್ವಿತೀಯ), ಲಕ್ಷ್ಮಣ ಮತ್ತು ತಂಡ (ತೃತೀಯ). ದೃಶ್ಯ ಕಲೆ (ಚಿತ್ರಕಲೆ): ಸಿದ್ದಪ್ಪ ಬಾಬುರಾವ (ಪ್ರಥಮ), ವಿರೇಶ ಎಂ. (ದ್ವಿತೀಯ), ಉಮೇಶ ರಾಜಕುಮಾರ (ತೃತೀಯ). ದೃಶ್ಯ ಕಲೆ (ಮಣ್ಣಿನ ಶಿಲ್ಪಕಲೆ): ಬೀರಪ್ಪ ಮಾಲೆಗಾಂವ (ಪ್ರಥಮ), ಮಹಾಂತೇಶ ಲಕ್ಷ್ಮಣ (ದ್ವಿತೀಯ). ದೃಶ್ಯ ಕಲೆ (ಫೋಟೋಗ್ರಾಫಿ-ಪರಿಸರ): ಸಿದ್ದಪ್ಪ (ಪ್ರಥಮ), ಲಕ್ಷ್ಮಣ ಗಣಪತಿ (ದ್ವಿತೀಯ), ಶಿಲ್ಪಾವತಿ ರೇವಣಯ್ಯಾ (ತೃತೀಯ).

ಅಭಿವ್ಯಕ್ತಿ ಕಲೆ (ಇಂಗ್ಲೀಷ್/ಹಿಂದಿ): ಚೈತನ್ಯ ರಾಯಗೊಂಡ (ಪ್ರಥಮ), ಶ್ರದ್ಧಾ ಸಂಗಮೇಶ (ದ್ವಿತೀಯ), ವೈಶಾಲಿ ಸಾಗರ (ತೃತೀಯ). ಅಭಿವ್ಯಕ್ತಿ ಕಲೆ (ಕವನ ಬರವಣಿಗೆ): ಶಿವರಾಜ ಗುರುನಾಥ (ಪ್ರಥಮ), ಜ್ಞಾನ ವಿಭಾಗ (ಹೊಸ ಯುಗದ ಉದ್ಯಮಶೀಲತೆ ಬಗ್ಗೆ ಗುಂಪು ಚರ್ಚೆ): ರೂಪಾಲಿ ಮತ್ತು ತಂಡ (ಪ್ರಥಮ), ರತ್ನದೀಪ ಮತ್ತು ತಂಡ (ದ್ವಿತೀಯ), ವೈಶಾಲಿ ಸಾಗರ ಮತ್ತು ತಂಡ (ತೃತೀಯ).

ಸಮಾರೋಪದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ ನಾಡಿಗೇರ್, ಪ್ರಮುಖರಾದ ಶಿವಯ್ಯ ಸ್ವಾಮಿ, ವಿಜಯಕುಮಾರ ಸೋನಾರೆ, ಪ್ರಭುಲಿಂಗ ಸ್ವಾಮಿ, ಶರಣಪ್ಪ ಬಿರಾದಾರ, ದೇವಿದಾಸ ಜೋಶಿ, ಮಹೇಶ ಗೊರನಾಳಕರ್ ಇತರರಿದ್ದರು.