ಜಿಲ್ಲೆ

ಜಿಲ್ಲಾ ಮಟ್ಟದ ದಾಸಕೃತಿ ಗಾಯನ ಸ್ಪರ್ಧೆ

ಮೈಸೂರು: ಅಜ್ಜನ ಮನೆ ಕಲಾ ಪ್ರಪಂಚದಿಂದ ದಶ (ಹತ್ತು) ಜಿಲ್ಲಾ ಮಟ್ಟದ ದಾಸಕೃತಿ ಗಾಯನ ಸ್ಪರ್ಧೆಯನ್ನು ಜುಲೈ 7,8,9 ಮತ್ತು 15, 16 ರಂದು ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಏರ್ಪಡಿಸಲಾಗಿದೆ.
ಮೈಸೂರು, ಮಂಡ್ಯ, ಮಡಿಕೇರಿ, ಹಾಸನ, ಚಾಮರಾಜನಗರ, ರಾಮನಗರ, ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಬೆಂಗಳೂರು ಜಿಲ್ಲೆಯ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಕರ್ನಾಟಕ ಸಂಗೀತ ಕಿರಿಯ ದರ್ಜೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ 12 ರಿಂದ 16 ವರ್ಷದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರು. ಪ್ರಥಮ ಬಹುಮಾನ 15,000, ದ್ವಿತೀಯ ಬಹುಮಾನ 10,000 ಮತ್ತು ತೃತೀಯ ಬಹುಮಾನ 5,000 ರೂ. ಜತೆಗೆ ಪ್ರಮಾಣ ಪತ್ರ ನೀಡಲಾಗುವುದು. ಪ್ರವೇಶ ಪತ್ರ ಸಲ್ಲಿಸಲು ಜೂ. 16 ಕೊನೆಯ ದಿನವಾಗಿದೆ. ಮಾಹಿತಿಗೆ ಮೊ.9110453540 ಅಥವಾ 8310279953 ಸಂಪರ್ಕಿಸಬಹುದು ಎಂದು ಅಜ್ಜನ ಮನೆ ಕೃಷ್ಣ ಕೋರಿದ್ದಾರೆ.