ಕಲಬುರಗಿ
ಹಿಂದುಳಿದ ವರ್ಗಗಳ ಅಭಿವೃದ್ಧಿ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಹೆಸರಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೊಡಮಾಡಲಾಗುತ್ತಿದ್ದ ಜಿಲ್ಲಾ ಮಟ್ಟದ ಅರಸು ಪ್ರಶಸ್ತಿಯನ್ನು ಕಾಂಗ್ರೆಸ್ ಸರ್ಕಾರ ರದ್ದು ಪಡಿಸಿದ್ದಕ್ಕೆ ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಶರಣಪ್ಪ ತಳವಾರ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿz್ದÁಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿ ಜಿಲ್ಲೆಯ ಮಟ್ಟದಲ್ಲಿ ಅರಸು ಪ್ರಶಸ್ತಿ ನೀಡಲು ಆದೇಶಿಸಿದ್ದರು. ಪ್ರಶಸ್ತಿ ೫೦ ಸಾ.ರೂ.ನಗದು, ಫಲಕ ಹೊಂದಿದ್ದು, ಜಿಲ್ಲೆಯಲ್ಲಿ ಹಿಂದುಳಿದವರ ಒಳಿತಿಗಾಗಿ ಶ್ರಮಿಸಿದವರಿಗೆ ಸಿಗುವ ಪ್ರಶಸ್ತಿಗೂ ಕಲ್ಲು ಹಾಕಲಾಗಿದೆ ಎಂದು ಒಬಿಸಿ ಮೋರ್ಚಾ ಉಪಾಧ್ಯಕ್ಷ ಶರಣಪ್ಪ ತಳವಾರ ಕಿಡಿಕಾರಿದರು.
ಜಿಲ್ಲಾ ಮಟ್ಟದ ಪ್ರಶಸ್ತಿ ಕೊಡದಿರುವುದು ಅರಸು ಅವರಿಗೆ ಮಾಡಿದ ಅಪಮಾನ.ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ೧೨ ಜನಪರ ಯೋಜನೆಗಳನ್ನು ಕೈಬಿಡುವ ಮೂಲಕ ದ್ವೇಷದ ರಾಜಕೀಯ ಮಾಡುತ್ತಿದೆ. ಈ ಎಲ್ಲ ನೀತಿಗಳನ್ನು ಖಂಡಿಸಿ ಹೋರಾಟ ಮಾಡಲಾಗುವುದು ಎಂದು ಪತ್ರಕರ್ತರಿಗೆ ತಿಳಿಸಿದರು.