ಜಿಲ್ಲಾ ನ್ಯಾಯಾಲಯದಿಂದ ಇಂದು ಆದೇಶ ಪ್ರಕಟ ?
ಚಿತ್ರದುರ್ಗ:ಪೋಕ್ಸೋ ಪ್ರಕರಣದ ಆರೋಪಿ ಮುರುಘಾ ಶರಣರಿಗೆ ಹೈಕೋರ್ಟ್ ಜಾಮೀನು ನೀಡಿರುವ ಕುರಿತಂತೆ 2ನೇ ಜಿಲ್ಲಾ ಹೆ ಚ್ಚುವರಿ ನ್ಯಾಯಾಲಯ ತನ್ನ ಆದೇಶವನ್ನು ಪ್ರಕಟಿಸುವ ಸಾಧ್ಯತೆ ಇದೆ. ಶರಣರ ಪರ ವಕೀಲರಿಂದ ನ.10ರಂದು ಜಿಲ್ಲಾ ನ್ಯಾಯಾಲಯಕ್ಕೆ ಹೈಕೋರ್ಟ್ ಜಾಮೀನು ನೀಡಿರುವ ಕುರಿತಾದ ದಾಖಲೆ ಸಲ್ಲಿಕೆಯಾಗಿತ್ತು.
ಮುರುಘಾ ಸ್ವಾಮೀಜಿ ವಿರುದ್ಧ ನಗರದ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ 2ನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇರುವ ಬಾಡಿ ವಾರೆಂಟ್ನ್ನು ನ್ಯಾಯಾಂಗ ಬಂಧನವನ್ನಾಗಿ ಪರಿವರ್ತಿಸಬೇಕೆಂದು ಕೋರಿ ಅಂದೇ ಸರ್ಕಾರಿ ಅಭಿಯೋಜಕರು ಅರ್ಜಿ ಸಲ್ಲಿಸಿದ್ದರು. ಈ ದಾಖಲೆ ಮತ್ತು ಅರ್ಜಿ ಕುರಿತಂತೆ ಜಿಲ್ಲಾ ನ್ಯಾಯಾಲಯ ತನ್ನ ಆದೇಶವನ್ನು ಪ್ರಕಟಿಸುವ ಹಾಗೂ ಶರಣರು ಜೈಲಿನಿಂದ ಬಿಡುಗಡೆ ಸಾಧ್ಯತೆ ಕುರಿತಂತೆ ಕೋರ್ಟ್ ತನ್ನ ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ.