ಜಿಲ್ಲೆ

ಜಿಲ್ಲಾ ಕೋರ್ಟ್ ಕಟ್ಟಡ ಲೋಕಾರ್ಪಣೆ ಶೀಘ್ರ

ಯಾದಗಿರಿ: ಗಿರಿಜಿಲ್ಲೆ ಕೇಂದ್ರ ಸ್ಥಾನದಲ್ಲಿ ಜಿಲ್ಲಾ ನ್ಯಾಯಾಲಯದ ನೂತನ ಬೃಹತ್ ಕಟ್ಟಡ ಸಿದ್ದವಾಗಿದ್ದು, ಬಹುತೇಕ ಕೆಲಸ ಪೂರ್ಣಗೊಂಡಿದೆ. ಇಷ್ಟರಲ್ಲಿಯೇ ನಮ್ಮ ನ್ಯಾಯಾಧೀಶರು, ವಕೀಲರು ಮತ್ತು ಕಕ್ಷಿದಾರರು ನೂತನ ಕಟ್ಟಡದ ಕೋರ್ಟ್ ಸಭಾಂಗಣದಲ್ಲಿಯೇ ಕಲಾಪಗಳು ನಡೆಸಲಿದ್ದಾರೆ.

ಚಿತ್ತಾಪುರ ರಸ್ತೆಯ ಜಿಲ್ಲಾಧಿಕಾರಿ ಮನೆ ಬಳಿಯ ವಿಶಾಲವಾದ ೧೦ ಎಕರೆ ಭೂಮಿಯಲ್ಲಿ ೩೫ ಕೋಟಿ ರೂ. ವೆಚ್ಚದಲ್ಲಿ ಬಹು ಸುಂದರವಾದ ಕಟ್ಟಡವನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸಿದೆ. ಕಟ್ಟಡದ ನೀಲಿ ನಕ್ಷೆ ಪ್ರಕಾರ ಎಲ್ಲ ಕೆಲಸ ಮುಗಿದಿದ್ದು, ಮುಖ್ಯವಾಗಿ ಫರ್ನಿಚರ್ ಅಳವಡಿಸುವ ಕೆಲಸವೊಂದು ಬಾಕಿ ಇವೆ.

ಇದಕ್ಕೆ ಎರಡು ಕೋಟಿ ರೂ. ಖರ್ಚು ಮಾಡಲಾಗುತ್ತಿದ್ದು, ಅದು ಕೂಡ ಇಷ್ಟರಲ್ಲಿಯೇ ಮುಗಿಸಿ ಲೋಕಾರ್ಪಣೆಗೆ ಅಣಿಯಾಗಲಿದೆ. ಇಲ್ಲಿನ ಕೋರ್ಟ್ ಕಟ್ಟಡದಲ್ಲಿ ಕಲಾಪಗಳು ಆರಂಭವಾದರೆ ಈ ರಸ್ತೆ ಜನಜಂಗುಳಿಯಿAದ ಕೂಡಿರಲಿದೆ. ಕಾರಣ ಈ ಕೋರ್ಟ್ ಎದುರಿಗೆ ಜಿಲ್ಲಾ ರಂಗ ಮಂದಿರದ ಕಟ್ಟಡ ತಲೆ ಎತ್ತಿದೆ. ಸಭೆ, ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಜನರು ನಿತ್ಯ ರಂಗ ಮಂದಿರಕ್ಕೆ ಬಂದರೆ, ಕೋರ್ಟ್ ಕೆಲಸಗಳಿಗಾಗಿ ಜಿಲ್ಲೆಯ ಎಲ್ಲೆಡೆ ಜನರು ನಿತ್ಯ ಇಲ್ಲಿಗೆ ಬರುವುದರಿಂದ ಈಗ ಖಾಲಿ ಇರುವ ಈ ರಸ್ತೆ ಮುಂದೆ ಜನನಿಬೀಡ ಪ್ರದೇಶವಾಗಿ ಮಾರ್ಪಾಡು ಆಗಲಿದೆ.

ಜಿ¯್ಲÁ ಕೇಂದ್ರವಾಗಿ ೧೪ ವರ್ಷಗಳಾದರೂ ಹಳೇ ಕೋರ್ಟ್ ಕಟ್ಟಡದಲ್ಲಿಯೇ ಕಲಾಪ ನಡೆಯುತ್ತಿದ್ದು, ಹೊಸ ಕಟ್ಟಡದ ಜರೂರಿ ಇದ್ದ ಹಿನ್ನೆಲೆಯಲ್ಲಿ ೨೦೨೧-೨೨ರಲ್ಲಿ ಈ ಹತ್ತು ಎಕರೆ ಜಾಗದಲ್ಲಿ ೬೬೬೭ ಸೆಮೀ ವಿಶಾಲ ಸ್ಥಳದಲ್ಲಿ ದೊಡ್ಡ, ದೊಡ್ಡ ೮ ಕೋರ್ಟ್ ಕಲಾಪಗಳ ಸಭಾಂಗಣ ನಿರ್ಮಾಣಗೊಂಡಿವೆ. ಹತ್ತು ಎಕರೆ ಜಾಗಕ್ಕೂ ಸುತ್ತುಗೋಡೆ, ಉದ್ಯಾನವನ, ಪಾರ್ಕಿಂಗ್ ಸ್ಥಳ, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ ಸೇರಿ ಎಲ್ಲ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ.

ಒಟ್ಟು ಮೂರುವರೇ ವರ್ಷಗಳಲ್ಲಿ ಈ ಕಟ್ಟಡ ತಲೆ ಎತ್ತಿದೆ. ಬಾಕಿ ಉಳಿದ ಫರ್ನಿಚರ್ ಕೆಲಸ ಮುಗಿದ ತP್ಷÀಣ ನ್ಯಾಯಾಂಗ ಇಲಾಖೆಗೆ ಲೋಕಾರ್ಪಣೆಗಾಗಿ ಕಟ್ಟಡ ಒಪ್ಪಿಸಲಾಗುವುದು ಎಂದು ಈ ಕಾಮಗಾರಿಯ ಉಸ್ತುವಾರಿ ಹೊತ್ತಿರುವ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸುನೀಲಕುಮಾರ ತಿಳಿಸಿದ್ದಾರೆ.