ಜಿಲ್ಲೆ

ಜಿಲ್ಲಾ ಕೃಷಿಕ ಸಮಾಜಕ್ಕೆ ಚಿಕ್ಕಸ್ವಾಮಿ ಅಧ್ಯಕ್ಷ

ಚಾಮರಾಜನಗರ: ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ಅರಕಲವಾಡಿ ಚಿಕ್ಕಸ್ವಾಮಿ ಅವಿರೋಧ ಆಯ್ಕೆಯಾಗಿದ್ದಾರೆ. ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಕೃಷಿಕ ಸಮಾಜದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಂದರ್ಭ ಚಿಕ್ಕಸ್ವಾಮಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.

ಇದೇ ಸಂದರ್ಭ ಉಪಾಧ್ಯಕ್ಷ ಸ್ಥಾನಕ್ಕೆ ಆರ್.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕೆ.ಎಸ್. ರಾಜು, ಖಜಾಂಚಿ ಸ್ಥಾನಕ್ಕೆ ಎಂ.ಪಿ. ಶ್ರೀಕಂಠಮೂರ್ತಿ ಹಾಗು ರಾಜ್ಯ ಪ್ರತಿನಿಧಿ ಸ್ಥಾನಕ್ಕೆ ರಾಘವೇಂದ್ರ ನಾಯ್ಡು ಅವರೂ ಅವಿರೋಧ ಆಯ್ಕೆಯಾದರು.

ಚುನಾವಣಾಧಿಕಾರಿಯೂ ಆಗಿದ್ದ ಪ್ರಭಾರ ಜಂಟಿ ಕೃಷಿ ನಿರ್ದೇಶಕಿ ಕೆ.ಸಿ. ಸುಷ್ಮಾ, ಸಹಾಯಕ ಚುನಾವಣಾಧಿಕಾರಿ ನಿಶಾಂತ್ ಪ್ರಕ್ರಿಯೆ ನೆರವೇರಿಸಿದರು.

ಅಭಿವೃದ್ದಿಗೆ ಬೆಂಬಲಿಸುವೆ:

ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ಅರಕಲವಾಡಿ ಚಿಕ್ಕಸ್ವಾಮಿ, ಕೃಷಿಕರು ಹಾಗೂ ಸರ್ಕಾರ ನಡುವೆ ಸೇತುವೆಯಾಗಿ ಜವಾಬ್ದಾರಿ ನಿರ್ವಹಿಸುವೆ ಎಂದರು. ರೈತರಿಗೆ ಸರ್ಕಾರದಿಂದ ದೊರೆಯುವ ನೆರವು ಹಾಗೂ ತಾಂತ್ರಿಕ ಮಾಹಿತಿಗಳು ಸೇರಿದಂತೆ ಕಾಲ ಕಾಲಕ್ಕೆ ರೈತರಿಗೆ ದೊರೆಯುವ ಸಲವತ್ತುಗಳನ್ನು ಕಲ್ಪಿಸಿಕೊಟ್ಟು ರೈತರ ಆರ್ಥಿಕ ಅಭಿವೃದ್ದಿಗೆ ಬೆಂಬಲಿಸುವೆ. ಕೃಷಿಕ ಸಮಾಜದ ಮೂಲಕ ರೈತರಿಗೆ ತರಬೇತಿ, ಕಾರ್ಯಾಗಾರ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಜಿಲ್ಲಾ ಪ್ರತಿನಿಧಿಗಳಾದ ವಿ.ವಿ. ಪ್ರಸಾದ್, ವೃಷಭೇಂದ್ರಸ್ವಾಮಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಯಳಂದೂರು ಎಸ್. ರವಿ, ಚಾ.ನಗರ ಅಧ್ಯಕ್ಷ ಎಸ್. ಶಾಂತಪ್ಪ ಕೊತ್ತಲವಾಡಿ, ಗುಂಡ್ಲುಪೇಟೆ ಅಧ್ಯಕ್ಷ ದೇಪುಪುರ ಸಿದ್ದಪ್ಪ, ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ವಡ್ಗಲ್‌ಪುರ ದೊರೆಸ್ವಾಮಿ, ಕೃಷಿಕ ಸಮಾಜದ ತಾಲೂಕು ಉಪಾಧ್ಯಕ್ಷ ತಮ್ಮಡಹಳ್ಳಿ ಶಿವಕುಮಾರ್, ನಿರ್ದೇಶಕ ಯರಗನಹಳ್ಳಿ ಶಿವಕುಮಾರ್, ಜಿಲ್ಲಾ ಸಹಕಾರ ಯೂನಿಯನ್ ಮಾಜಿ ಅಧ್ಯಕ್ಷ ಮಡಿವಾಳಪ್ಪ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ನಿರ್ದೇಶಕ ಬಿಸಲವಾಡಿ ಉಮೇಶ್ ಇದ್ದರು.