ಜಿಲ್ಲೆ

ಜಿಲ್ಲಾ ಕೃಷಿಕ ಸಮಾಜಕ್ಕೆ ಅವಿರೋಧ ಆಯ್ಕೆ

ಚಿತ್ರದುರ್ಗ: ಜಿಲ್ಲಾ ಕೃಷಿಕ ಸಮಾಜದ ಐದು ವರ್ಷಗಳ ಅವಧಿಗೆ ಪದಾಧಿಕಾರಿಗಳ ಆಯ್ಕೆ ಸಭೆ ಬುಧವಾರ ಕೃಷಿ ಇಲಾಖೆ ಜಂಟಿ ನಿದೇ ಶರ್ಕರ ಕಚೇರಿಯಲ್ಲಿ ಜರುಗಿತು. ಅಧ್ಯಕ್ಷರಾಗಿ ಎನ್.ಆರ್.ಮಹೇಶ್ವರಪ್ಪ,ಉಪಾಧ್ಯಕ್ಷರಾಗಿ ಎಸ್.ಧರಣೇಶ್,ಪ್ರಧಾನ ಕಾರ‌್ಯದರ್ಶಿಯಾಗಿ ಶಿ ವಮೂರ್ತಪ್ಪ, ಖಜಾಂಚಿಯಾಗಿ ಸಿ.ಭಕ್ತಪ್ರಹ್ಲಾದ್,ರಾಜ್ಯಪ್ರತಿನಿಧಿಯಾಗಿ ವಿ.ಜಿ.ಪರಮೇಶ್ವರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಂಗಾಮಿ ಅಧ್ಯಕ್ಷ ರಮೇಶಪ್ಪ ಹೊಳಲ್ಕೆರೆ ಸಭೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೃಷಿಕ ಸಮಾಜದ ಪದನಿಮಿತ್ತ ಕಾರ‌್ಯದರ್ಶಿ ಬಿ.ಮಂಜುನಾಥ್, ಕಂದಿಕೆರೆ ಜಗದೀಶ್,ನಾಗಿರೆಡ್ಡಿ,ನವೀನ್ ಚಾಲುಕ್ಯ,ಕಾಂತರಾಜ್,ಕೇಶವ್,ಚಂದ್ರಶೇಖರಪ್ಪ ಮತ್ತಿತರರು ಇದ್ದಾರೆ.

----