ಹುಬ್ಬಳ್ಳಿ: ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಡಾ. ಅಶ್ವತ್ಥ ನಾರಾಯಣ ಹಾಗೂ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಇಬ್ಬರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಟಿಪ್ಪು ರೀತಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮುಗಿಸಬೇಕು ಎಂದು ಡಾ. ಅಶ್ವತ್ಥ ನಾರಾಯಣ ಹೇಳಿಕೆ ನೀಡಿದ್ದನ್ನು ಹಾಗೂ ಕಾಗೇರಿಯವರು ಈಶ್ವರ್ ಖಂಡ್ರೆಯವರನ್ನು ಸದನದಲ್ಲಿ ಅವಮಾನ ಮಾಡಿರುವುದನ್ನು ಖಂಡಿಸಿದರು. ಇಬ್ಬರ ವಿರುದ್ಧ ಘೊಷಣೆ ಕೂಗಿದರು.
ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರು, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಹೂವಪ್ಪ ದಾಯಿಗೋಡಿ, ಸುವರ್ಣ ಕಲ್ಲಕುಂಟ್ಲ, ಆರೀಫ್ ಭದ್ರಾಪುರ, ಗಿರೀಶ ಗದಿಗೆಪ್ಪಗೌಡರ್, ಯೂಸುಫ್ ಸವಣೂರು, ಶಹಜಮಾನ್ ಮುಜಾಹಿದ್, ಸುನೀಲ ಮಠಪತಿ, ಗೋಪಾಲ್ ಯೆನ್ನಿಚವಡಿ, ಜಸ್ವಂತ್ ಗಾಣದಾಳ, ಹರ್ಷ ಮಲ್ಕಣ್ಣವರ, ಮದಾರ ಮಕಾಂದಾರ್, ಬಾಳಮ್ಮ ಜಂಗಣ್ಣವರ, ಕಲಾವತಿ ದತ್ತವಾಡ, ಬಸವರಾಜ ಮ್ಯಾಗೇರಿ, ಇತರರು ಇದ್ದರು.