ಜಿಲ್ಲೆ

ಜಿಲ್ಲಾ ಕಸಾಪದಿಂದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ೧೫ರಂದು


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸುಭದ್ರ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಿಲ್ಲೆಯ ಆಯ್ದ ಶಿಕ್ಷಕರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸೆಪ್ಟೆಂಬರ್ ೧೫ರಂದು ಸಂಜೆ ೩.೩೦ಕ್ಕೆ ನಗರದ ಕನ್ನಡ ಭವನದಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ತಿಳಿಸಿದ್ದಾರೆ.
ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣವರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಿಡಿಪಿಐ ಸೂರ್ಯಕಾಂತ ಮದಾನೆ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ ಹೂಗಾರ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಪರಮೇಶ್ವರ ದೇಸಾಯಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪ್ರಶಸ್ತಿಗೆ ಭಾಜನರಾದ ಶಿಕ್ಷಕರು
ರಾಜೇಂದ್ರ ರಂಗದಾಳ, ಗಂಗೋತ್ರಿ ಸಜ್ಜನ್, ಅನಿತಾ ಬಡಿಗೇರ, ಮಾಳಪ್ಪ ನಾಗಲಗಾಂವ, ಚಾಂದಸಾಬ್ ಹಕೀಮ್, ಲಲಿತಾ ಅವ್ಣಣ್ಣ ಮ್ಯಾಕೇರಿ, ರಾಜಶ್ರೀ ಕುಲಕರ್ಣಿ, ಡಾ.ಸೌಮ್ಯ ಗುರುನಾಥ ಪೂಜಾರಿ, ಅನುಪಮಾ ಅಪಗೊಂಡ, ಶ್ರೀಮಂತ ಗಂಜಿ, ಶ್ರೀಶೈಲ್ ಮಾಳಗೆ, ಹಣಮಂತರಾವ ಪಾಟೀಲ, ಕೆ. ಶಂಕ್ರೆಪ್ಪ, ಮಡಿವಾಳಪ್ಪ ಬಾಗೇವಾಡಿ, ಸುರೇಖಾ ಜೋಶಿ, ಮಲ್ಲಿಕಾರ್ಜುನ ಹೊಸಮನಿ, ಗುರುದೇವಿ ಪಾಟೀಲರಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಗುವುದು ಎಂದು ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ ತಿಳಿಸಿದ್ದಾರೆ.