ಬಾಗಲಕೋಟೆ: ಸಾರ್ವಜನಿಕರಿಗೆ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಉತ್ತಮವಾಗಿ ನೀಡಿರುವ ಕಾರಣಕ್ಕೆ ಜಿಲ್ಲೆಯ ವಿವಿಧ ಅಽಕಾರಿಗಳಿಗೆ ವರ್ಷದ ಅತ್ಯುತ್ತಮ ಕಂದಾಯ ಅಽಕಾರಿ ೨೦೨೪ರ ಪ್ರಶಸ್ತಿ ದೊರೆಕಿದೆ.
ಕಂದಾಯ ಇಲಾಖೆಯ ೨೦೨೩-೨೪ನೇ ಸಾಲಿನ ಅತ್ಯುತ್ತಮ ಕಂದಾಯ ಅಽಕಾರಿಗಳ ಪ್ರಶಸ್ತಿಯನ್ನು ಜಿಲ್ಲಾಽಕಾರಿ ಜಾನಕಿ ಕೆ.ಎಂ, ಬಾಗಲಕೋಟೆ ಉಪವಿಭಾಗಾಽಕಾರಿ ಸಂತೋಷ ಜಗಲಾಸರ, ಜಮಖಂಡಿ ಉಪವಿಭಾಗಾಽಕಾರಿ ಶ್ವೇತಾ ಬೀಡಿಕರ, ಬಾದಾಮಿ ತಹಶೀಲ್ದಾರ ಜೆ.ಬಿ.ಮಜ್ಜಗಿ, ಹುನಗುಂದ ತಾಲೂಕಿನ ಸಂಗಮ ಗ್ರಾಮ ಆಡಳಿತ ಅಽಕಾರಿ ನಾಗರಾಜ ಜಿ. ಅವರಿಗೆ ಪ್ರಶಸ್ತಿ ದೊರೆತಿದೆ. ಸೆಪ್ಟೆಂಬರ ೨೭ ರಂದು ಬೆಳಗ್ಗೆ ೧೦ ಗಂಟೆಗೆ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಕಾಸ ಸೌಧ, ಕೊಠಡಿ ಸಂ.೪೧೯ರಲ್ಲಿ ನಡೆಯಲಿರುವ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.