ಜಿಲ್ಲೆ

ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ಇಲ್ಲ:ರೇವಣ್ಣ ಆಕ್ರೋಶ

 ಹಾಸನ: ಕೆಎಂಎಫ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕನಾಗಿ ನನ್ನ ಜವಾಬ್ದಾರಿಯನ್ನ ಅರಿತು ಆಡಳಿತ ಮಂಡಳಿಯ ಸಭೆಯಲ್ಲಿ ರೈತರ ಪರವಾಗಿ ಧ್ವನಿ ಎತ್ತಿದ್ದೇನೆ ಮತ್ತು ಸರ್ಕಾರದ ಗಮನ ಸೆಳೆದಿದ್ದೇನೆ ಇದರ ಬಗ್ಗೆ ಸಹಕಾರ ಸಚಿವರಿಗೆ ಜವಾಬ್ದಾರಿ ಇಲ್ಲದೆ ಹೇಳಿಕೆ ನೀಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಟಾಂಗ್ ನೀಡಿದರು.

ಕೆಎಂಎಫ್ ಮೂಲಕ ರೈತರಿಂದ ನೇರವಾಗಿ ಜೋಳ ಖರೀದಿ ಮಾಡುವಂತೆ ಧರಣಿ ಮಾಡಿದ್ದೆ. ಕೆಎಂಎಫ್‌ಗೆ ತಿಂಗಳಿಗೆ 14.15 ಲಕ್ಷ ಟನ್ ಮೆಕ್ಕೆಜೋಳ ಬೇಕು ಎಂಬ ಮಾಹಿತಿ ಸಹಕಾರ ಸಚಿವರಿಗೆ ಇದೆ. ಅವರು ರೈತರಿಂದ ಜೋಳ ಖರೀದಿ ಮಾಡಿದ್ದಾರೆ ರೈತರಿಗೆ ಅನುಕೂಲವಾಗುತ್ತದೆ.ಅದನ್ನು ಬಿಟ್ಟು ಹೆಚ್ಚಿನ ಬೆಲೆಗೆ ದಾಲ್ಲಾಳಿಗಳ ಖರೀದಿಸಿದರೆ ಯಾರಿಗೆ ನಷ.್ಷ ಸರ್ಕಾರ ದುಡ್ಟು ಹೊಡೆಯಲು ಬಿಟ್ಟರೆ, ನನ್ನದೇನು ಅಭ್ಯಂತರ ಇಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ರಾಜಣ್ಣನವರೇ ಸಹಕಾರ ಸಚಿವರಾಗಿದ್ದಾರೆ, ಬರಗಾಲದ ಈ ಪರಿಸ್ಥಿತಿಯಲ್ಲಿ ಕೆಎಂಎಫ್ ಮೂಲಕ ರೈತರಿಂದ ಜೋಳ ಖರೀದಿ ಮಾಡುವುದಕ್ಕೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಜವಾಬ್ದಾರಿ ಮರೆತವರಂತೆ ಜಿಲ್ಲಾಧಿಕಾರಿ ಜೊತೆ ಕುಳಿತುಕೊಂಡು ಹಾಸನಾಂಬ ಉತ್ಸವ ಮಾಡ್ತೀನಿ ಅಂದರೆ ಹೇಗೆ ? ಎಂದು ಪ್ರಶ್ನಿಸಿದರು.

ಕೆಎಂಎಫ್ ನಿರ್ದೇಶಕನಾಗಿ ನಾನು ನನ್ನ ಕೆಲಸ ಮಾಡಿದ್ದೇನೆ, ಮಾಜಿ ಮಂತ್ರಿಯಾಗಿ ಮರ್ಯಾದೆ ಬಿಟ್ಟು ಸಭೆಗೆ ಹೋಗಿ ಚರ್ಚೆ ಮಾಡಿದ್ದೇನೆ ವಾಸ್ತವ ಸ್ಥಿತಿಯನ್ನು ಸಭೆಯ ಗಮನಕ್ಕೆ ತಂದಿದ್ದೇನೆ ಆದರೆ ಇದುವರೆಗೂ ಕ್ರಮ ಕೈಗೊಂಡಿಲ್ಲ. ಆಡಳಿತ ಮಂಡಳಿಯಲ್ಲಿ ಅವರ ಪಕ್ಷದ 10 ಜನ ನಿರ್ದೇಶಕರಿದ್ದಾರೆ ಸಹಕಾರ ಸಚಿವರಿಗೆ ಇದರ ಬಗ್ಗೆ ಅರಿವಿಲ್ಲವೇ ಎಂದರು.

ನಾಲ್ಕು ತಾಲ್ಲೂಕುಗಳಲ್ಲಿ ಎನ್‌ಡಿಆರ್‌ಎಫ್ ಪ್ರಕಾರ 73,950 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ಮೆಕ್ಕೆಜೋಳ ನಾಶವಾಗಿದೆ. 64.77 ಕೋಟಿ ಬೆಳೆ ಹಾನಿಯಾಗಿದೆ. 5000 ಹೆಕ್ಟೇರ್ ಪ್ರದೇಶದಲ್ಲಿ ಹೂವ ಬಿಟ್ಟಿದ್ದಾರೆ, ತೆಂಗಿನಮರಗಳಿಗೆ ರೋಗ ದಿಂದ ಸಂಕಷ್ಟಕ್ಕೆ ಇದಾಗಿದ್ದಾರೆ ಇದರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದೆ ಸರ್ಕಾರ ಕೇವಲ ಗ್ಯಾರೆಂಟಿ ಯೋಜನೆಗಳ ಬಗ್ಗೆ ಗಮನಹರಿಸುತ್ತಿದ್ದು ಇದರ ಬಗ್ಗೆ ಅವರಿಗೆ ಸಮಯವಿಲ್ಲ ಎಂದು ಕಿಡಿಕಾರಿದರು.

ಈ ಸರ್ಕಾರದಲ್ಲಿ ಕೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ ಅದಕ್ಕಾಗಿ ಈ ರೀತಿ ವರ್ತಿಸುತ್ತಿದ್ದಾರೆ ಕೆಎಂಎಫ್ ನಲ್ಲಿ ಲೂಟಿ ಹೊಡೆಯಲು ಬಿಡಿ ಎಂದರೆ ನಾನು ಸುಮ್ಮನಾಗುತ್ತೇನೆ ಇದು ನರೇಂದ್ರ ಮೋದಿ ಅವರ ಕಂಟ್ರೋಲಿಗೆ ಬರುವುದಾದರೆ ಅವರಿಗೂ ಕೂಡ ಪತ್ರ ಬರೆಯುತ್ತೇನೆ ಎಂದರು.

ಕಾಂಗ್ರೆಸ್‌ನವರಿಗೆ ಭಯ ಇದೆ :

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರು ನಾವು ಯಾರ ಜೊತೆ ಹೋದ್ರೆ ಇವರಿಗೇನು ಹೊಟ್ಟೆ ಉರಿ,ಮೈತ್ರಿ ಬಗ್ಗೆ ಅವರಿಗೆ ಭಯ ಇದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.

ಮೈತ್ರಿ ಅಭ್ಯರ್ಥಿಗಳನ್ನು ಸೋಲಿಸಲು ನಾವೂ ಸಹ ಎಲ್ಲಾ ರೀತಿಯ ಪ್ಲಾನ್ ಮಾಡಿಕೊಳ್ಳುತ್ತೇವೆ ಎಂಬ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ, ಹಾಗಿದ್ದವರು ಎಲ್ಲರ ಮನೆ ಬಾಗಿಲಿಗೆ ಏತಕ್ಕೆ ಹೋಗುತ್ತಿದ್ದಾರೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.

ಯಾರು ಏನೇ ಮಾಡಿದರೂ, ಮಾತನಾಡಿದರೂ, ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ. ಕೋಮುವಾದಿಗಳ ಜೊತೆ ಹೋಗಿದ್ದಾರೆ ಎನ್ನುವವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಯಾರ ಜೊತೆ ಸೇರಿ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ, ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಿದರು ಹೇಳಲಿ ಎಂದರು.

ರೌಡಿ ಎಲಿಮೆಂಟ್ಸ್ ತಡೆಯಿರಿ:

ಜಿಲ್ಲೆಯಲ್ಲಿ ರೌಡಿ ಎಲಿಮೆಂಟ್ಸ್ ಹೆಚ್ಚುತ್ತಿದ್ದು, ಮಟ್ಕಾ ದಂಧೆ ನಡೆಯುತ್ತಿದೆ. ಇದನ್ನೆಲ್ಲಾ ನಿಲ್ಲಿಸಲು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು.ತಮ್ಮ ಆಪ್ತ ಹಾಗೂ ಗುತ್ತಿಗೆದಾರ ಅಶ್ವಥ್ ಕೊಲೆ ಯತ್ನ ನಡೆದಿದೆ. ಹಿಂದೆ ಎಸ್‌ಬಿಜಿ ಭದ್ರತೆ ಇದ್ದಾಗಲೇ ನನ್ನ ತಾಯಿ ಮೇಲೆ ಆಸಿಡ್ ಅಟ್ಯಾಕ್ ದಾಳಿ ನಡೆದಿತ್ತು.ಈಗಲೂ ಈ ರೀತಿಯ ಘಟನೆ ನಡೆಯುತ್ತಿವೆ. ಇದಕ್ಕೆಲ್ಲ ಹೆದರಿ ಕೂರುವುದಿಲ್ಲ ಎಂದು ಕಿಡಿಕಾರಿದರು. ಎಸ್ಪಿ ಅವರು ಇದೀಗ ಬಂದಿದ್ದಾರೆ. ಅವರು ತನಿಖೆ ನಡೆಸುತ್ತಿರುವಾಗ ನಾನು ಮಧ್ಯೆ ಪ್ರವೇಶ ಮಾಡಲ್ಲ. ಮೊದಲು ತನಿಖೆ ನಡೆಸಲಿ ಎಂದರು.