ಬಾಗಲಕೋಟೆ: ನವನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಾಲ್ಕು ದಿನಗಳ ಹೆಣ್ಣು ಮಗು ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಗುರುವಾರ ರಾತ್ರಿ ಮಗು ಸಾವನ್ನಪ್ಪಿದೆ. ಏ.೮ ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಜನಿಸಿದ್ದ ಮಗು ಆರೋಗ್ಯವಾಗಿತ್ತು. ಆದರೆ, ತಾಯಿಗೆ ರಕ್ತ ಕಡಿಮೆ ಆಗಿದ್ದರಿಂದ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಮಗು ಆರೋಗ್ಯವಾಗಿದ್ದು, ಗುರುವಾರ ಸಂಜೆ ತಾಯಿ ಮಗುವಿಗೆ ಹಾಲು ಕುಡಿಸಿ ಮಲಗಿಸಿದ್ದು, ರಾತ್ರಿ ೭.೪೦ ರ ಸುಮಾರಿಗೆ ಮಗುವಿನ ಉಸಿರಾಟ ನಿಂತಿತ್ತು. ಮಗು ಉಸಿರಾಟ ನಿಲ್ಲಿಸಿದ್ದು ಗಮನಕ್ಕೆ ಬರುತ್ತಿದ್ದಂತೆ ತಾಯಿ ಹಾಗೂ ಸಂಬAಽಕರು ಕಣ್ಣೀರು ಹಾಕುತ್ತ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತೊಡಿಸಿ, ಸಂಬAಽಸಿದ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಹೆಬ್ಬಳ್ಳೆವ್ವ ಹರಿಜನ ಎನ್ನುವ ಮಹಿಳೆ ಏ. ೭ ರಂದು ಹೆರಿಗೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಏ. ೮ ರಂದು ಹೆರಿಗೆ ಆಗಿತ್ತು. ಆರೋಗ್ಯವಾಗಿದ್ದ ಮಗು ದಿಢೀರನೇ ಪ್ರಾಣ ಬಿಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ.
ಈ ಬಗ್ಗೆ ಆಸ್ಪತ್ರೆಯ ವೈದ್ಯರು ಸ್ಪಷ್ಟನೆ ನೀಡಿದ್ದು, ಮಗ ಆರೋಗ್ಯವಾಗಿಯೇ ಇತ್ತು. ಮಗುವಿಗೆ ಎದೆಹಾಲು ಕುಡಿಸಿದ ಬಳಿಕ ಮಗುವಿಗೆ ಡರಕಿ ಹೊಡೆಸಬೇಕಿತ್ತು. ಅದನ್ನು ಮಾಡಿರಲಿಕ್ಕಿಲ್ಲ. ಮಗು ಮಲಗಿಸಿದ ವಾರ್ಡ್ನಲ್ಲಿ ಪ್ಯಾನ್ ಜೋರಾಗಿ ಇಟ್ಟಿದ್ದಾರೆ. ಹಾಲು ನೆತ್ತಿಗೆ ಹತ್ತಿ ಹೈಪೋಥೆರ್ಮಿ ಸಮಸ್ಯೆಯಿಂದ ಮೃತಪಟ್ಟಿರುವ ಶಂಕೆ ಇದೆ. ವೈದ್ಯರು ನಿರ್ಲಕ್ಷ್ಯ ಮಾಡಿಲ್ಲ. ಮಗು ಆರೋಗ್ಯವಾಗಿದ್ದರಿಂದ ಯಾವುದೇ ಚಿಕಿತ್ಸೆ ನೀಡುತ್ತಿರಲಿಲ್ಲ. ತಾಯಿಗೆ ರಕ್ತ ಕಡಿಮೆ ಇದ್ದಿದ್ದರಿಂದ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನುತ್ತಾರೆ.
ಇನ್ನು ಪ್ರಕರಣಕ್ಕೆ ಸಂಬAಽಸಿದAತೆ ಜಿಲ್ಲಾ ಆಸ್ಪತ್ರೆಯ ಸರ್ಜನ ಡಾ.ಮಹೇಶ್ ಕೋಣಿ ಅವರು, ಈ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು, ಹೆರಿಗೆ ಮಾಡಿಸಿರುವ ವೈದ್ಯ ಹಾಗೂ ಮಗುವನ್ನು ನೋಡಿದ್ದ ಚಿಕ್ಕಮಕ್ಕಳ ತಜ್ಞೆಗೆ ಘಟನೆ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಅವರು ಉತ್ತರ ತಿಳಿದುಕೊಂಡು, ಸೋಮವಾರ ಈ ಬಗ್ಗೆ ಸಭೆ ಕರೆದಿದ್ದು, ಅಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.