ಹಾಸನ: ನಗರದ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಎಸಿ ಸ್ಟೆಬಿಲೈಜರ್ ಸ್ಪೋಟದಿಂದಾಗಿ ಹೊಗೆ ತುಂಬಿಕೊಂಡ ಪರಿಣಾಮ ತಕ್ಷಣವೇ ನವಜಾತ ಶಿಶುಗಳನ್ನು ಬೆರಡೆಗೆ ಸ್ಥಳಾಂತರಿಸಿದ್ದು ಬಾರಿ ಅನಾಹುತ ಕೂದಲು ಎಲೆ ಅಂತರದಲ್ಲಿ ಪಾರಾಗಿದೆ.
ಜಿಲ್ಲಾಸ್ಪತ್ರೆಯ ನವಜಾತ ಶಿಶು ಕೇಂದ್ರದಲ್ಲಿ ಭಾನುವಾರ ಬೆಳಗ್ಗೆ ಈ ಅವಘಡ ಸಂಭವಿಸಿದ್ದು. ತಕ್ಷಣವೇ ಸಿಬ್ಬಂದಿಗಳು ಯಾವುದೇ ರೀತಿ ಅಪಾಯವಾಗದಂತೆ 24 ಶಿಶುಗಳನ್ನ ಬೇರೆಡೆಗೆ ಸ್ಥಳಾಂತರಿಸಿದ್ದಾರೆ.
ಐಸಿಯು ವಾರ್ಡಿನಲ್ಲಿ ಇದ್ದಕ್ಕಿದ್ದಂತೆ ಎಸಿ ಸ್ಟೆಬಿಲೈಜರ್ ಸ್ಪೋಟಗೊಂಡಿದ್ದರಿಂದ ಹೊಗೆ ತುಂಬಿಕೊಂಡಿದೆ. ಅಲ್ಲಿದ್ದ ಸಿಬ್ಬಂದಿಗಳು ತಕ್ಷಣವೇ ಕಿಟಕಿ ಗಾಜುಗಳನ್ನ ಹೊಡೆದು ನಂತರ ಎಲ್ಲಾ ಮಕ್ಕಳನ್ನ ಸುರಕ್ಷಿತವಾಗಿ ಬೇರೆ ಕಡೆಗೆ ಸ್ಥಳಾಂತರಿಸಲಾಯಿತು ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಇದರಿಂದ ಕೆಲಕಾಲ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಸುರಕ್ಷಿತವಾಗಿ ಎಲ್ಲಾ ಶಿಶುಗಳನ್ನ ಬೇರೆಡೆಗೆ ಸ್ಥಳಾಂತರಿಸಿದ ಮೇಲೆ ಎಲ್ಲ ಪೋಷಕರು ಗಾಬರಿಯಿಂದ ತಮ್ಮ ಮಕ್ಕಳನ್ನು ನೋಡಿ ನಿಟ್ಟಿಸಿರು ಬಿಟ್ಟರು.ಅದೃಷ್ಟವಶ ಭಾರೀ ಅನಾಹುತ ಸಲ್ಪದರಲ್ಲಿ ಪಾರಾಗಿದೆ.
ಘಟನಾ ಸ್ಥಳಕ್ಕೆ ಹಿಮ್ಸ್‌ನ ನಿರ್ದೇಶಕ ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದೆ ಈ ರೀತಿ ಘಟನೆ ನಡೆಯದಂತೆ ಎಚ್ಚರ ವಹಿಸುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು ಅಲ್ಲದೆ ಪೋಷಕರಿಗೂ ಕೂಡ ಧೈರ್ಯ ತುಂಬಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ರವಿಕುಮಾರ್ ನವಜಾತ ಶಿಶು ಕೇಂದ್ರದ ಹಳೆ ಕಟ್ಟಡದಲ್ಲಿ ಈ ಘಟನೆ ನಡೆದಿದೆ ಎಲ್ಲಾ ಮಕ್ಕಳು ಕೂಡ ಸುರಕ್ಷಿತವಾಗಿದ್ದೇವೆ ಯಾರೂ ಕೂಡ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಅಲ್ಲದೆ ಹೋದಂತಿಗಳಿಗೆ ಯಾರೂ ಕೂಡ ಕಿವಿ ಕೊಡಬೇಡಿ ಎಂದು ಹೇಳಿದರು.
ಹಳೆಯ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕೂಡ ಮಾಡಲಾಗಿತ್ತು ಆದರೆ ಎಸಿ ಸ್ಟೆಬಿಲೈಜರ್ ಸತತವಾಗಿ ಕೆಲಸ ಮಾಡುತ್ತಿರುವುದರಿಂದ ಈ ಅವಘಡ ಸಂಭವಿಸಿದೆ ತಕ್ಷಣವೇ ನಮ್ಮ ಸಿಬ್ಬಂದಿಗಳು ಮುಂಜಾಗ್ರತವಾಗಿ ಎಲ್ಲ ಮಕ್ಕಳನ್ನ ಬೇರೆಡೆಗೆ ಸ್ಥಳಾಂತರಿಸಿದ್ದಾರೆ ಮುಂದೆ ಈ ರೀತಿ ಘಟನೆ ಆಗದಂತೆ ನಿಗಾ ವಹಿಸಲಾಗುವುದೆಂದು ಎಂದರು.