ಜಿಲ್ಲೆ

ಜಿಯೋ ಟ್ಯಾಗಿಂಗ್​ನಿಂದ ಪುನರಾವರ್ತನೆ ತಪ್ಪಲಿದೆ

Kopala - Raveendra V K

ಕೊಪ್ಪಳ: ಜಿಯೋಟ್ಯಾಗಿಂಗ್​ ಮತ್ತು ಜಿಯೋಫೆನ್ಸಿಂಗ್​ನಿಂದ ಕಾಮಗಾರಿಗಳು ಸ್ಥಳದಲ್ಲಿ ಪುನರಾವರ್ತನೆಯಾಗುವುದನ್ನು ತಪ್ಪಿಸಬಹುದೆಂದು ತಾಪಂ ಇಒ ದುಂಡಪ್ಪ ತುರಾದಿ ಹೇಳಿದರು.

ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಕ್ಷೇತ್ರಮಟ್ಟದ ಅಧಿಕಾರಿ, ಸಿಬ್ಬಂದಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಾತ್ಮಾ ನರೇಗಾ ಯೋಜನೆಯಡಿ ವಿವಿಧ ಇಲಾಖೆಗಳಿಂದ ಕಾಮಗಾರಿ ಅನುಷ್ಠಾನ ಮಾಡಲಾಗುತ್ತಿದೆ. ಒಂದೇ ಸ್ಥಳದಲ್ಲಿ ಪದೇ ಪದೆ ಕಾಮಗಾರಿ ನಡೆಸಲು ಸಾಧ್ಯವಾಗುವುದಿಲ್ಲ. ಇದರಿಂದ ಪುನರಾವರ್ತನೆ ತಪ್ಪಿಸಬಹುದು. ಈ ಬಗ್ಗೆ ಎಲ್ಲರೂ ಸರಿಯಾಗಿ ಮಾಹಿತಿ ಪಡೆಯಿರಿ. ಕ್ಷೇತ್ರಕಾರ್ಯದಲ್ಲಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಮಾಸ್ಟರ್​ ಟೆನರ್​ ಮಹಾಂತಸ್ವಾಮಿ ಮಾತನಾಡಿ, ಕಾಮಗಾರಿಗಳು ಪುನರವರ್ತನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಯೋಜನೆ ಜಾರಿ ಮಾಡಲಾಗಿದೆ. ಜಿಲ್ಲಾಮಟ್ಟದ ತರಬೇತುದಾರರಿಗೆ ತರಬೇತಿ ನೀಡಲಾಗಿದೆ. ಪ್ರತಿ ತಾಲೂಕಿನಲ್ಲಿ ಗ್ರಾಪಂಮಟ್ಟದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಕಾಮಗಾರಿಯ ಜಿಯೋಟ್ಯಾಗಿಂಗ್​ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ. ಕಾರ್ಯದಲ್ಲಿ ಅನುಷ್ಠಾನ ಮಾಡಿ ಎಂದರು.

ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ, ಸಹಾಯಕ ಮಲ್ಲಿಕಾರ್ಜುನ ಮೇಗಳಮನಿ ಪಿಪಿಟಿ ಮೂಲಕ ತರಬೇತಿ ನೀಡಿದರು. ಕಡತಗಳ ನಿರ್ವಹಣೆ, 7ವಹಿಗಳ ನಿರ್ವಹಣೆ ಬಗ್ಗೆಯೂ ಮಾಹಿತಿ ಒದಗಿಸಲಾಯಿತು.

ತಾಪಂ ನರೇಗಾ ಸಹಾಯಕ ಯಂಕಪ್ಪ, ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರ, ಕವಿತಾ, ಪಿಡಿಒಗಳು, ತಾಂತ್ರಿಕ ಸಹಾಯಕರು, ಬೇರ್​ುಟ್​ ಟೆಕ್ನಿಷಿಯನ್ಸ್​, ಗ್ರಾಮ ಕಾಯಕ ಮಿತ್ರರು ಇದ್ದರು.