ಜಿಲ್ಲೆ

ಜಿಮ್ನಾಸ್ಟಿಕ್‌ನಲ್ಲಿ ಜೆಎಸ್‌ಎಸ್ ಸಾಧನೆ

ಧಾರವಾಡ: ಜಿಮ್ನಾಸ್ಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಜಿಮ್ನಾಸ್ಟಿಕ್ ಕ್ರೀಡಾಕೂಟದಲ್ಲಿ ವಿವಿಧ ವಯೋಮಿತಿ ಸ್ಪರ್ಧೆಯಲ್ಲಿ ಇಲ್ಲಿನ ವಿದ್ಯಾಗಿರಿ ಜೆಎಸ್‌ಎಸ್ ಶಾಲೆ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.
10 ವರ್ಷ ವಯೋಮಿತಿ ವಿಭಾಗದಲ್ಲಿ ದಕ್ಷ ಕದಂ 3 ಚಿನ್ನ, 1 ಬೆಳ್ಳಿ ಹಾಗೂ ವೈಯಕ್ತಿಕ ವೀರಾಗ್ರಣಿಯಲ್ಲಿ ಪ್ರಥಮ, ಅತಿಕ್ಷ ಕ್ಯಾತಪನವರ 1 ಕಂಚು, ವೈಯಕ್ತಿಕ ವೀರಾಗ್ರಣಿಯಲ್ಲಿ ತೃತೀಯ, 12ವರ್ಷದ ವಿಭಾಗದಲ್ಲಿ ಸಂಕೇತ ಮಾನೆ 3 ಚಿನ್ನ, 2 ಬೆಳ್ಳಿ, 2 ಕಂಚು, ವೈಯಕ್ತಿಕ ವೀರಾಗ್ರಣಿಯಲ್ಲಿ ಪ್ರಥಮ, 14 ವರ್ಷ ವಿಭಾಗದಲ್ಲಿ ಗಂಗಾಧರ ಮಟ್ಟಿ 5 ಕಂಚು, ವೈಯಕ್ತಿಕ ವೀರಾಗ್ರಣಿಯಲ್ಲಿ ತೃತೀಯ, ಶ್ರೇಯಸ್ ಮಾನೆ 1 ಕಂಚು, ಸಮೃದ್ಧ ಹಿರೇಗೌಡರ 1 ಕಂಚು ಸೇರಿ ಒಟ್ಟು 22 ಪದಕಗಳನ್ನು ಪಡೆದು ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳು ಧಾರವಾಡ ಬಾಲ ಮಾರುತಿ ಜಿಮ್ನಾಸ್ಟಿಕ್ ಸಂಸ್ಥೆಯ ವಿಠ್ಠಲ್ ಮೂರ್ತಗುಡ್ಡೆ, ಶೇಖರ್ ಮಾನೆ, ಬಸವರಾಜ ಪಟಾತ, ಶಾಮರಾವ್ ಪವಾರ ಬಳಿ ತರಬೇತಿ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಪ್ರಾಚಾರ್ಯರಾದ ಸಾಧನಾ ಎಸ್., ಮೈನಾವತಿ ದಿವಟೆ, ಉಷಾ ಸಂತೋಷ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.